Site icon Vistara News

Hasana News : ಹಾಸನದಲ್ಲಿ ಚಿಕ್ಕಟ್ಟೆ ಕೆರೆಗೆ ಹಾರಿ ದಂಪತಿ ಆತ್ಮಹತ್ಯೆ

Family Dispute Self harming

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆರೆಗೆ ಹಾರಿ ದಂಪತಿ ಆತ್ಮಹತ್ಯೆ (Hasana News) ಮಾಡಿಕೊಂಡಿದ್ದಾರೆ. ರಿಜ್ವಾನ್ (31), ಸಮ್ರಿನ್ ಭಾನು (25) ಆತ್ಮಹತ್ಯೆಗೆ ಶರಣಾದ ದಂಪತಿ.

ಹಾಸನ ನಗರದ ಅಡ್ಲಿಮನೆ ರಸ್ತೆಯ ಚಿಕ್ಕಟ್ಟೆ ಕೆರೆಯಲ್ಲಿ ಈ ಘಟನೆ ನಡೆದಿದೆ. ಹಾಸನದ ಹಿಲಾಯಿ ನಗರದ ನಿವಾಸಿ ಎಂದು ತಿಳಿದು ಬಂದಿದೆ. ನಿನ್ನೆ ಭಾನುವಾರ ಸಂಜೆ ರಿಜ್ವಾನ್‌ ಹಾಗೂ ಸಮ್ರಿನ್‌ ಭಾನು ಯಾವುದೋ ವಿಚಾರಕ್ಕೆ ಜಗಳವಾಡಿಕೊಂಡಿದ್ದಾರೆ. ಇದರಿಂದ ಮನನೊಂದಿದ್ದ ಸಮ್ರಿನ್‌ ಭಾನು ಸೋಮವಾರ ಬೆಳಗ್ಗೆ ಚಿಕ್ಕಟ್ಟೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇತ್ತ ಪತ್ನಿ ಕೆರೆಗೆ ಹಾರಿ ಮೃತಪಟ್ಟ ವಿಷಯ ಕೇಳಿ ರಿಜ್ವಾನ್‌ ಕೂಡ ಅದೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕೆರೆಯಿಂದ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೆನ್‌ಷನ್‌ ಮೊಹಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Child rescue : ರೂಂನಲ್ಲಿ 3 ವರ್ಷದ ಮಗು ಲಾಕ್‌; ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಸಾಹಸ

ಸಾವನದುರ್ಗ ಚಾರಣಕ್ಕೆ ಹೋದ ಯುವಕ ಮಿಸ್ಸಿಂಗ್‌

ಸ್ನೇಹಿತನ ಜತೆ ಸಾವನದುರ್ಗ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ರಾಮನಗರದ ಮಾಗಡಿ ತಾಲೂಕಿನ ಸಾವನದುರ್ಗ ಬೆಟ್ಟದಲ್ಲಿ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಗಗನ್ (30) ಕಾಣೆಯಾಗಿರುವವರು.

ಬೆಂಗಳೂರಲ್ಲಿ ಕೆಲಸ ಮಾಡಿಕೊಂಡಿದ್ದ ಗಗನ್ ನಿನ್ನೆ ಕ್ರಿಸ್‌ಮಸ್‌ ರಜೆ‌ ಇದ್ದ ಕಾರಣಕ್ಕೆ ಸಾವನದುರ್ಗಕ್ಕೆ ತೆರಳಿದ್ದ. ಸ್ನೇಹಿತರೊಂದಿಗೆ ಮಧ್ಯಾಹ್ನ 3ರ ಸುಮಾರಿಗೆ ಚಾರಣ ಏರಿದ್ದ ಗಗನ್‌, ಆ ನಂತರ ಸ್ನೇಹಿತರಿಂದ ಬೇರಪಟ್ಟಿದ್ದ. ಎಷ್ಟು ಸಮಯ ಕಳೆದರೂ ಗಗನ್‌ ಬಾರದೇ ಇದ್ದಾಗ, ಜತೆಗೆ ಫೋನ್‌ ಸಂರ್ಪಕಕ್ಕೂ ಸಿಗದೇ ಕಾಣದೇ ಇದ್ದಾಗ ಇತರೆ ಸ್ನೇಹಿತರು ಆತಂಕಗೊಂಡಿದ್ದಾರೆ.

ಬಳಿಕ ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಪೊಲೀಸರು, ಅರಣ್ಯಾಧಿಕಾರಿಗಳು ನಿನ್ನೆಯಿಂದಲೂ ಬೆಟ್ಟದ ಮೇಲೆಲ್ಲ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಕಳೆದ 24 ಗಂಟೆಯಿಂದ ಸ್ಥಳದಲ್ಲೇ ಅಧಿಕಾರಿಗಳು ಬಿಡುಬಿಟ್ಟಿದ್ದಾರೆ. ಆದರೆ ಯುವಕನ ಸುಳಿವು ಮಾತ್ರ ಸಿಕ್ಕಿಲ್ಲ. ಹೀಗಾಗಿ ಡ್ರೋನ್ ಬಳಸಿ ಯುವಕನಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಮಾಗಡಿ ಠಾಣೆಯಲ್ಲಿ ‌ಮಿಸ್ಸಿಂಗ್ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version