ಹಾಸನ: ಪಠ್ಯಪುಸ್ತಕದಲ್ಲಿ ಚಕ್ರವರ್ತಿ ಸೂಲಿಬೆಲೆ ಪಠ್ಯ ಸೇರಿಸಿರುವುದಕ್ಕೆ ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಈ ಪಠ್ಯವನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಬಿಜೆಪಿಯವರು ಆರ್‌ಎಸ್‌ಎಸ್‌ನ ಅಜೆಂಡಾ ಇಟ್ಟುಕೊಂಡು ದೇಶದ ಇತಿಹಾಸವನ್ನು ಮರೆ ಮಾಚುವ ಕೆಲಸ ಮಾಡುತ್ತಿದ್ದಾರೆ. ಕುವೆಂಪು, ಟಿಪ್ಪು, ಮೈಸೂರು ಮಹಾರಾಜರು, ಬಿ.ಟಿ. ಲಲಿತಾ ನಾಯಕ್, ಸಾರಾ ಅಬೂಬಕರ್ ಅವರ ಪಠ್ಯವನ್ನು ಕೈಬಿಟ್ಟಿದ್ದಾರೆ. ಬಿಜೆಪಿಯವರು ಭಾರತದ ಇತಿಹಾಸವನ್ನು ತಿರುಚುವ ದುರುದ್ದೇಶದಿಂದ ಈ ರೀತಿ ಪಠ್ಯಪುಸ್ತಕ ಪರಿಷ್ಕಾರ ಮಾಡಲಾಗುತ್ತಿದೆ ಎಂದು ಮಹೇಶ್ ಆಕ್ರೋಶ ಹೊರಹಾಕಿದರು.
ಮಕ್ಕಳ ಪಠ್ಯವನ್ನು ಕೇಸರೀಕರಣ ಮಾಡಬಾರದು. ಈ ಸಮಿತಿಯು ಮಕ್ಕಳಿಗೆ ನೈಜ ಇತಿಹಾಸವನ್ನು ತೋರಿಸುವ ಬದಲು, ಕೇಸರೀಕರಣ ಮಾಡಲು ಹೊರಟಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರ ಪಠ್ಯವನ್ನು ಯಾವ ಆಧಾರದ ಮೇಲೆ ಸೇರಿಸಿಲಾಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಚುನಾವಣೆ ಸಂದರ್ಭದಲ್ಲಿ ಏನೇನು ಮಾತಾಡಿದ್ದಾರೆ ಅಂತಾ ಎಲ್ಲಿರಿಗೂ ಗೊತ್ತಿದೆ. ಅವರು ರಸ್ತೆಗೆ ಡಾಂಬರ್ ಬದಲು ಚಿನ್ನದ ರಸ್ತೆ ಮಾಡಬಹುದು ಎಂದು ಹೇಳಿದ್ದವರು. ಅಂತಹ ವ್ಯಕ್ತಿ ಬರೆದಿರೋದನ್ನ ಪಠ್ಯಕ್ಕೆ ಸೇರಿಸುತ್ತೇವೆ ಎನ್ನುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಪಠ್ಯದಲ್ಲಿ ಹೆಡ್ಗೇವಾರ್ ಸೇರಿಸದೆ ಜಿನ್ನಾ ಹೆಸರು ಸೇರಿಸಬೇಕಿತ್ತಾ ಎಂದು ಕೇಳಿದ ಕೆ.ಎಸ್.ಈಶ್ವರಪ್ಪ