ಹಾಸನ : ಜಿಲ್ಲೆಯಲ್ಲಿ ವರುಣನ ಆರ್ಭಟ (Rain News) ಮತ್ತೆ ಮುಂದುವರಿದಿದೆ. ಬುಧವಾರ ಒಂದೇ ಗ್ರಾಮದಲ್ಲಿ ಎರಡು ಮನೆಗಳು ಕುಸಿದು (ಆ.10) ಕುಟುಂಬ ಬೀದಿಪಾಲಾಗಿದೆ. ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ಅಪ್ಪಣ್ಣಗೌಡ ಹಾಗೂ ತಂಗ್ಯಮ್ಮ ಎಂಬುವವರಿಗೆ ಸೇರಿದ ಮನೆಗಳು ಕುಸಿತಗೊಂಡಿವೆ.
ನೋಡ ನೋಡುತ್ತಲೇ ಮೇಲ್ಛಾವಣಿ ಸಮೇತ ಮನೆ ಗೋಡೆ ಕುಸಿದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಮನೆಯವರು ಪಾರಾಗಿದ್ದಾರೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದವಸ ಧಾನ್ಯಗಳು ನಾಶಗೊಂಡಿವೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಶೀತ ಹೆಚ್ಚಾಗಿ ಮನೆಗಳು ಕುಸಿದಿವೆ ಎನ್ನಲಾಗಿದೆ. ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಸಂತ್ರಸ್ತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Rain News | ರಾಜ್ಯಾದ್ಯಂತ ಇನ್ನೂ 48 ಗಂಟೆ ಭಾರಿ ಮಳೆ; ಕರಾವಳಿ, ಉತ್ತರ ಒಳನಾಡಲ್ಲಿ ಅಬ್ಬರ ಸಾಧ್ಯತೆ!
ಹಾಸನ ಜಿಲ್ಲೆಯ ಮಲೆನಾಡು ಭಾಗ ಹಾಗು ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾದ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ 43737 ಕ್ಯುಸೆಕ್ ನೀರಿನ ಒಳ ಹರಿವು ಹೆಚ್ಚಾಗಿದ್ದು, ಜಲಾಶಯದಿಂದ 50950 ಕ್ಯುಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.
ಇದನ್ನೂ ಓದಿ | Rain News | ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಬಿರುಕು ಬಿಟ್ಟ ರಾಜ್ಯ ಹೆದ್ದಾರಿ