Site icon Vistara News

Bus accident | ಶಾಲಾ ಪ್ರವಾಸದ ಬಸ್ ಪಲ್ಟಿ, 4 ಮಕ್ಕಳು ಸೇರಿ 7 ಮಂದಿಗೆ ಗಾಯ

bus accident

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ನಾಲ್ವರು ವಿದ್ಯಾರ್ಥಿಗಳು ಸೇರಿ ಏಳು ಮಂದಿಗೆ ಗಾಯವಾದ ಘಟನೆ ಹಾಸನ ಜಿಲ್ಲೆ ಬೇಲೂರು ಹೊರವಲಯದ ಕುವೆಂಪುನಗರದಲ್ಲಿ ನಡೆದಿದೆ.

ಕನಕಪುರದ ಸರ್ಕಾರಿ ಶಾಲೆಯ ಎಸ್‌ಎಸ್‌‌ಎಲ್‌ಸಿ ಮಕ್ಕಳು ಹಾಗೂ ಶಿಕ್ಷಕರು ಬುಧವಾರ ಎರಡು ಬಸ್‌ಗಳಲ್ಲಿ ಪ್ರವಾಸಕ್ಕೆ ಬಂದಿದ್ದರು. ಇದರಲ್ಲಿ ಒಂದು ಬಸ್ಸು ಅಪಘಾತಕ್ಕೀಡಾಗಿದೆ. ಬಸ್ಸಿನಲ್ಲಿ ಶಿಕ್ಷಕರು ಸೇರಿ 71 ಮಂದಿ ಇದ್ದರು. ಪ್ರವಾಸ ಮುಗಿಸಿ ವಾಪಾಸ್ ಆಗುವಾಗ ಇಂದು ಬೆಳಿಗ್ಗೆ ಬಸ್‌ ಪಲ್ಟಿಯಾಗಿದೆ. ನಾಲ್ವರು ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷಕರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಬೇಲೂರು ಹಾಗೂ ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಬೇಲೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ | Serial accident | ಕಾರು, ಬಸ್‌, ಬೈಕ್ ನಡುವೆ ಸರಣಿ ಅಪಘಾತ ಒಬ್ಬ ಸಾವು, ಇಬ್ಬರಿಗೆ ಗಾಯ

Exit mobile version