Site icon Vistara News

Suicide Case: ಪತ್ನಿ ಕಿರುಕುಳ ಆರೋಪ, ವಿಷ ಸೇವಿಸಿ ವಿಡಿಯೋ ಮಾಡಿ ಆತ್ಮಹತ್ಯೆ

suicide case

ಹಾಸನ: ಪತ್ನಿ ಹಾಗೂ ಅವರ ಪೋಷಕರ ಕಿರುಕುಳ ತಾಳಲಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ (suicide case) ಮಾಡಿಕೊಂಡಿದ್ದು, ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ಹಾಸನ ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿನಯ್ (40) ಮೃತಪಟ್ಟ ವ್ಯಕ್ತಿ. ವಿಷ ಸೇವಿಸುವ ಮುನ್ನ ವಿನಯ್‌ ಸೆಲ್ಫಿ ವಿಡಿಯೋ‌ ಮಾಡಿದ್ದು, ಪತ್ನಿ ಹಾಗು ಅವರ ಕುಟುಂಬ ಸದಸ್ಯರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ.

ʼʼನನ್ನ ಸಾವಿಗೆ ನನ್ನ ಪತ್ನಿ ಆಶಾ, ಅತ್ತೆ ರತ್ನಮ್ಮ, ಆಶಾ ಅಕ್ಕ ಉಷಾ ಹಾಗೂ ಅವರು ಕುಟುಂಬದವರೇ ಕಾರಣ. ನನಗೆ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ಆದರೂ ಅವರು ಬದಲಾಗಿಲ್ಲ. ನನ್ನ ಪತ್ನಿ ಆಶಾ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಮನನೊಂದು ವಿಷ ಸೇವಿಸುತ್ತಿದ್ದೇನೆ. ಅಕ್ಕ, ಅಮ್ಮ, ಬಾವ, ತಮ್ಮ, ನಾದಿನಿ ನನ್ನನ್ನು ಕ್ಷಮಿಸಿಬಿಡಿ. ಆಶಾ ಅವರ ಪೋಷಕರಿಗೆ ತಕ್ಕ ಶಿಕ್ಷೆಯಾಗಬೇಕುʼʼ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಜುಲೈ 9ರಂದು ವಿಷ ಸೇವಿಸಿದ್ದ ವಿನಯ್‌ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಆಶಾ ಹಾಗೂ ಅವರ ಮನೆಯವರ ವಿರುದ್ಧ ವಿನಯ್ ಹಾಗೂ ಅವರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ವಿನಯ್ ಹಾಗೂ ಆಶಾ ವಿವಾಹವಾಗಿದ್ದರು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming : ಸಿಇಟಿಯಲ್ಲಿ ಕಡಿಮೆ ಅಂಕ; ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

Exit mobile version