Site icon Vistara News

Haveri News: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಛಾಪು ಮೂಡಿಸಿದ್ದ ಸೂರ್ಯಪುತ್ರ ಇನ್ನಿಲ್ಲ; ವೋಟಿಂಗ್‌ ಬಿಟ್ಟು ಓಡಿ ಬಂದ ಗ್ರಾಮಸ್ಥರು

suryaputhra hori

suryaputhra hori

ಹಾವೇರಿ: ಇಲ್ಲಿನ ಹಾನಗಲ್ ತಾಲೂಕಿನ ಮಾರನಬೀಡ (Haveri News) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೂರ್ಯಪುತ್ರನೆಂದು ಹೆಸರು ಗಳಿಸಿದ್ದ ಹೋರಿಯೊಂದು ಮೃತಪಟ್ಟಿದೆ. ಹೋರಿಯ ಹಠಾತ್ ನಿಧನ ಸುದ್ದಿ ಕೇಳಿ ಇಡೀ ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದರು.

ಹತ್ತಾರು ಜಿಲ್ಲೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ ಸೂರ್ಯಪುತ್ರ ಫೀಲ್ಡಿಗಿಳಿದರೆ ಪ್ರಶಸ್ತಿ ಗೆಲ್ಲುವುದು ಪಕ್ಕಾ ಆಗಿತ್ತು. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಆಕ್ರಮಣಕಾರಿಯಾಗಿ ಮುನ್ನುಗ್ಗುತಿತ್ತು. ಹೋರಿಯು ಸ್ಪರ್ಧೆಯಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಯನ್ನು ಗೆದ್ದಿತ್ತು.

ಸೂರ್ಯಪುತ್ರ ಹೋರಿ ಇನ್ನಿಲ್ಲ

ಮನೆಯ ಸದಸ್ಯನಾಗಿದ್ದ ಹೋರಿಯನ್ನು ಕಳೆದುಕೊಂಡು ತಮಗೆ ಅತೀವ ನೋವಾಗಿದೆ. ಈ ಹೋರಿಯು ನಮಗೆ ಸಾಕಷ್ಟು ಕೀರ್ತಿ ತಂದುಕೊಟ್ಟಿದ್ದಲ್ಲದೆ, ಈ ಭಾಗಕ್ಕೆ ಹೆಮ್ಮೆಯಾಗಿತ್ತು. ಮಾತ್ರವಲ್ಲ ನನ್ನಂತಹ ಬಡವನಿಗೆ ಬಂಗಾರವಾಗಿತ್ತು ಈ ಹೋರಿ ಎಂದು ಮಾಲೀಕರು ಅಳಲು ತೋಡಿಕೊಂಡರು. ಹೋರಿಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು.

ಮತದಾನ ಬಿಟ್ಟು ಸೂರ್ಯಪುತ್ರನ ನೋಡಲು ಬಂದ ಗ್ರಾಮಸ್ಥರು

ಸೂರ್ಯಪುತ್ರ ಎಂಬ ಹೆಸರಿನ ಕೊಬ್ಬರಿ ಹೋರಿ ಹಠಾತ್ ನಿಧನ ಸುದ್ದಿಯು ಗ್ರಾಮದಲ್ಲಿ ಹಬ್ಬುತ್ತಿದ್ದಂತೆ, ಮತದಾನ ಕೇಂದ್ರದಲ್ಲಿದ್ದ ಹಲವರು, ಮತದಾನವನ್ನೂ ಮಾಡದೇ ಹೋರಿ ಬಳಿ ಧಾವಿಸಿದ್ದರು. ಕೆಲಕಾಲ ಮತದಾನ ಮಾಡದೆ ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದರು. ಹೋರಿ ಶವದ ಕಡೆ ಧಾವಿಸಿ, ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು. ಕ್ರೇನ್‌ ಮೂಲಕ ಹೋರಿಯನ್ನು ಎತ್ತಿ ಅಲಂಕಾರ ಮಾಡಿ ಅಂತ್ಯ ಸಂಸ್ಕಾರ ಮಾಡಲಾಯಿತು.

Exit mobile version