Site icon Vistara News

ಸಾವಿನಲ್ಲೂ ಒಂದಾದ ವೃದ್ಧ ದಂಪತಿ, ಪತಿಯನ್ನೇ ಅನುಸರಿಸಿದ ಪತ್ನಿ

ವೃದ್ಧ ದಂಪತಿ

ಹಾವೇರಿ: ೫೫ ವರ್ಷದ ಸುದೀರ್ಘ ದಾಂಪತ್ಯ ನಡೆಸಿ ಅನ್ಯೋನ್ಯವಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ಸವಣೂರು ತಾಲೂಕಿನ ಇಚ್ವಂಗಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಬಸಪ್ಪ ಕಂಬಳಿ (87) ಅನಾರೋಗ್ಯದಿಂದ ಮಂಗಳವಾರ (ಜು.12) ಸಂಜೆ ನಿಧನರಾಗಿದರು. ಪತಿ ಸಾವಿನಿಂದ ಆಘಾತಕ್ಕೊಳಗಾಗಿದ್ದ ಪತ್ನಿ ದ್ಯಾಮವ್ವ ಬಸಪ್ಪ ಕಂಬಳಿ (82) ಬುಧವಾರ (ಜು.13) ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ.

ಬಸಪ್ಪ ಕಂಬಳಿ‌ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ದಂಪತಿ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಸ್ಥಳದಲ್ಲಿ ಇಬ್ಬರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.

ಇದನ್ನೂ ಓದಿ | 50 ವರ್ಷ ನಾನೊಂದು ತೀರ ನೀನೊಂದು ತೀರ: ವೃದ್ಧ ದಂಪತಿ ಈಗ ಹತ್ತಿರ ಹತ್ತಿರ!

Exit mobile version