ಹಾವೇರಿ: ವಸತಿ ಶಾಲೆಯಲ್ಲಿ ಹಣ ಕಳ್ಳತನ ಆರೋಪದಲ್ಲಿ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಪೋಷಕರು ವಸತಿ ಶಾಲೆಗೆ ನುಗ್ಗಿ ಸಿಪಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಶಿಡೆನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಹಣ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಸಿಪಾಯಿ ನಾಗರಾಜ ಸುತ್ತಕೋಟಿ ಎಂಬಾತ ವಿದ್ಯಾರ್ಥಿಯ ಕೈ, ಕಾಲು, ಎದೆ, ಬೆನ್ನಿನ ಮೇಲೆ ಬಾಸುಂಡೆ ಬರುವ ಹಾಗೆ ಬಡಿದಿದ್ದಾನೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ಯಾಡಗಿ ಪಟ್ಟಣದ ಗಾಂಧಿನಗರ ನಿವಾಸಿ 12 ವರ್ಷದ ಬಾಲಕನನ್ನು ಥಳಿಸಲಾಗಿದೆ. ಈ ವಿದ್ಯಾರ್ಥಿ ವಸತಿ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಬಾಲಕನಿಗೆ ಥಳಿಸಿದ್ದರಿಂದ ಆಕ್ರೋಶಗೊಂಡ ಪೋಷಕರು ವಸತಿ ಶಾಲೆ ಬಳಿ ತೆರಳಿ ಸಿಪಾಯಿ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | School Teacher | ವಿದ್ಯಾರ್ಥಿಗಳಿಂದ ಶಾಲಾ ಆವರಣದಲ್ಲಿಯೇ ಕಾರು ತೊಳೆಸಿದ ಶಿಕ್ಷಕ!