Site icon Vistara News

ಜನರ ಹರ್ಷೊದ್ಘಾರದ ನಡುವೆ ಕರ್ಜಗಿ ಬಂಡಿ ಉತ್ಸವಕ್ಕೆ ಮೆರಗು

ಜಾತ್ರಾ ಮಹೋತ್ಸವ

ಹಾವೇರಿ: ಕರ್ಜಿಗಿ ಗ್ರಾಮದಲ್ಲಿ ಭರಮಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಭಣೆಯಿಂದ ನೆರವೇರಿತು. ಕಾರ ಹುಣ್ಣಿಮೆ ಸಂದರ್ಭದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಬಂಡಿ ಒಡಿಸುವುದನ್ನ ನೋಡಿ ಸಹಸ್ರಾರು ಜನರು ಕಣ್ತುಂಬಿಕೊಂಡರು.

800 ವರ್ಷಗಳ ಇತಿಹಾಸವಿರುವ ಕರ್ಜಗಿ ಕಾರಹುಣ್ಣಿಮೆಯ ಜಾತ್ರೆ ಇಂದಿಗೂ ಸಂಭ್ರಮದಿಂದ ಆಚರಣೆ ಆಗುತ್ತದೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಜಾತ್ರೆಗೆ ಬ್ರೇಕ್ ಬಿದ್ದಿದ್ದ ಹಿನ್ನೆಲೆ ಈ ವರ್ಷ ಮತ್ತಷ್ಟು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಕರ್ಜಗಿ ಗ್ರಾಮದಲ್ಲಿ ನಡೆಯುವ ಕಾರ ಹುಣ್ಣಿಮೆಯ ಬಂಡಿ ಉತ್ಸವಕ್ಕೆ ಐತಿಹಾಸಿಕ ನಂಟಿದೆ. ಪೇಶ್ವೆಯ ಕಾಲದಿಂದಲೂ ವಿಭಿನ್ನವಾಗಿ ಮೂರು ದಿನಗಳ ಕಾಲ ಗ್ರಾಮದ ಆರಾಧ್ಯದೈವ ಭರಮಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮೊದಲ ದಿನ ಹೊನ್ನುಗ್ಗಿ, ಎರಡನೇ ದಿನ ಬಂಡಿ ಓಡಿಸುವ ಸಂಪ್ರದಾಯ, ಮೂರನೇ ದಿನ ಕರಕ್ಕಿಬಂಡಿ ಎಂಬ ಆಚರಣೆ ನಡೆಯುತ್ತದೆ. ಗ್ರಾಮದಲ್ಲಿರುವ 54 ಬಾಬುದಾರರು ಇದರಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ ಎಂದು ಗ್ರಾಮದ ಹಿರಿಯರಾದ ಸಂಗಮೇಶ ಹೇಳಿದರು.

ನೆಹರೂ ಒಲೆಕಾರ್

ಕಳೆದೆರಡು ವರ್ಷ ಕೋವಿಡ್​ ಹಿನ್ನೆಲೆ ಕಾರಹುಣ್ಣಿಮೆ ಆಚರಣೆ ಮಾಡಿರಲಿಲ್ಕ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಿದ್ದಾರೆ. ʼಬಂಡಿ ಬಂತು ಸರಿರಿʼ ಎನ್ನುವ ಜನರ ಹರ್ಷೊದ್ಗಾರ ಮುಗಿಲು ಮುಟ್ಟಿದರೆ, ಸಹಸ್ರಾರು ಜನರ ನಡುವೆ ಬಂಡಿ ಓಡಿಸುವುದನ್ನ ನೋಡುವುದೆ ಒಂದು ಸೊಬಗು.

ಮನೆಯ ಮಾಳಗಿ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ಸಾಮೂಹಿಕ ಬಂಡಿ ಓಡಿಸುವುದನ್ನ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಬಂಡಿ ಓಡಿಸುವುದಕ್ಕಾಗಿ ರೈತರು ಎತ್ತುಗಳನ್ನ ವಿಶೇಷವಾಗಿ ಸಿದ್ದಗೊಳಿಸುತ್ತಾರೆ ಎಂದು ಹಾವೇರಿ ಶಾಸಕ ನೆಹರೂ ಒಲೆಕಾರ್‌ ಹೇಳಿದರು.

ಇದನ್ನೂ ಓದಿ| ಭದ್ರಾವತಿ: 24 ವರ್ಷಗಳ ನಂತರ ನಡೆದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ

Exit mobile version