Site icon Vistara News

Electric shock : ಜಮೀನಿಗೆ ನೀರು ಬಿಡಲು ಹೋಗಿ ಪ್ರಾಣ ಕಳೆದುಕೊಂಡ ರೈತ

Electric shock sidhapa death

ಹಾವೇರಿ: ಇಲ್ಲಿನ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ರೈತರೊಬ್ಬರು ವಿದ್ಯುತ್‌ ಶಾಕ್‌ನಿಂದ (Electric shock) ಮೃತಪಟ್ಟಿದ್ದಾರೆ. ಸಿದ್ದಪ್ಪ ಪಕ್ಕಿರಪ್ಪ ಹುಲ್ಲಕ್ಕನವರ (38) ಮೃತ ದುರ್ದೈವಿ.

ಸಿದ್ದಪ್ಪ ಭತ್ತಕ್ಕೆ ನೀರು ಬಿಡಲು ಜಮೀನಿಗೆ ತೆರಳಿದ್ದರು. ಪಂಪ್‌ ಸೆಟ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್‌ ಮರ್ಡರ್‌, ಬೈಕ್‌ಗೆ ಒಮ್ನಿ ಡಿಕ್ಕಿ ಹೊಡೆಸಿ ಕೃತ್ಯ

ಮಂಡ್ಯ: ರೌಡಿ ಶೀಟರ್‌ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Rowdy Sheeter Murder) ಮಾಡಿದ ಘಟನೆ ಮಂಡ್ಯ ಜಿಲ್ಲೆ (Mandya News) ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯಲ್ಲಿ ನಡೆದಿದೆ.

ವಿನಯ್ ಅಲಿಯಾಸ್ ಕುಂಟ ವಿನು(32) ಕೊಲೆಯಾದ ರೌಡಿಶೀಟರ್. ಈಗ ಬೈಕ್‌ನಲ್ಲಿ (Team attacks rowdy Sheeter) ತನ್ನ ಫಾರ್ಮ್ ಹೌಸ್‌ಗೆ ಹೋಗುವ ವೇಳೆ ಬೆನ್ನಟ್ಟಿ ಕೊಲೆ ಮಾಡಲಾಗಿದೆ. ವಿನಯ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ಒಂದು ಒಮಿನಿ ಕಾರಿನಲ್ಲಿ ಆತನನ್ನು ಬೆನ್ನಟ್ಟಿ ಬೈಕ್ ಗೆ ಕಾರನ್ನು ಬೆನ್ನಟ್ಟಿ ಡಿಕ್ಕಿ ಹೊಡೆಸಿ ನಂತರ ಹತ್ಯೆ ಕೊಲೆ ಮಾಡಲಾಗಿದೆ.

ಬೈಕ್‌ಗೆ ಕಾರು ಡಿಕ್ಕಿಯಾಗುತ್ತಿದ್ದಂತೆಯೇ ಉರುಳಿ ಬಿದ್ದ ವಿನಯ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಆತ ಸತ್ತಿರುವುದನ್ನು ದೃಢಪಡಿಸಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಂಶಯಿತ ಆರೋಪಿಗಳನ್ನು ಪಟ್ಟಿ ಮಾಡಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

ವಿನಯ್‌ ಈ ಹಿಂದೆ ಹಲವು ಸಮಾಜದ್ರೋಹಿ ಕೆಲಸಗಳಲ್ಲಿ ಭಾಗಿಯಾಗಿದ್ದು, ಅದಕ್ಕಾಗಿ ಆತನ ಮೇಲೆ ರೌಡಿ ಶೀಟ್‌ ಹಾಕಲಾಗಿದೆ. ಆತನ ಮೇಲೆ ಹಲವರಿಗೆ ದ್ವೇಷವಿದೆ ಎನ್ನಲಾಗಿದೆ. ಆತನಿಂದ ತೊಂದರೆಗೆ ಒಳಗಾದ ರೌಡಿ ತಂಡಗಳು ಮತ್ತು ಆತನ ವಿರೋಧಿ ಗ್ಯಾಂಗ್‌ಗಳಲ್ಲಿ ಯಾವುದೋ ಒಂದು ಆತನನ್ನು ಕೊಲೆ ಮಾಡಿರುವ ಸಾಧ್ಯತೆಗಳಿವೆ. ಪೊಲೀಸರು ಆ ಭಾಗದಲ್ಲಿ ವಾಹನಗಳ ಸಂಚಾರವೂ ಸೇರಿದಂತೆ ಎಲ್ಲ ರೀತಿಯ ತಾಂತ್ರಿಕ ವಿಚಾರಗಳನ್ನು ಗಮನಿಸಿ ತನಿಖೆ ನಡೆಸುತ್ತಿದ್ದಾರೆ

ಮಗನನ್ನು ಬಸ್ಸಿಗೆ ಬಿಡಲು ಹೋಗಿದ್ದ ಅಪ್ಪ ಮೃತ್ಯು

ಮಂಡ್ಯ: ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಕಾಶಿ ವಿಶ್ವನಾಥ್ (59) ಮೃತ ದುರ್ದೈವಿ.

Mandya Accident

ಮೈಸೂರು ಜಿಲ್ಲೆ ನಂಜನಗೂಡು ನಿವಾಸಿಯಾಗಿರುವ ವಿಶ್ವನಾಥ್‌ ಅವರು ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಅವರು ಮಗನನ್ನು ಬೆಂಗಳೂರಿಗೆ ಬಿಡಲೆಂದು ಬೆಳಗ್ಗೆ ಬೇಗನೆ ಮನೆ ಬಿಟ್ಟಿದ್ದರು. ಮಗನನ್ನು ಬಸ್ಸಿಗೆ ಬಿಟ್ಟು ಮರಳಿ ಮನೆಗೆ ಹೋಗುವಾಗ ಈ ದುರಂತ ಸಂಭವಿಸಿದೆ.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೈಕ್‌ ನೇರವಾಗಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ದುರಂತದಿಂದಾಗಿ ಮನೆಯಲ್ಲಿ ದೊಡ್ಡ ಮಟ್ಟದ ಆಕ್ರಂದನ ಕೇಳಿಬಂದಿದೆ. ಮಗನನ್ನು ಬಿಟ್ಟು ಬರುವ ವೇಳೆ ಆಗಿರುವ ದುರಂತ ಇನ್ನೂ ಹೆಚ್ಚು ನೋವನ್ನು ಉಂಟು ಮಾಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version