Site icon Vistara News

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

haveri News

ಹಾವೇರಿ: ಹಾವೇರಿಯಲ್ಲಿ (Haveri News) ಸಾಕುನಾಯಿ ಜಗಳವೊಂದು (Dog Fight) ಪೊಲೀಸ್ ಠಾಣೆ ಮೆಟ್ಟಿಲೇರಿದೆ. ರಾಕೇಶ್ ಬಾರಂಗಿ ಎಂಬುವವರು ರಾಣಾ ಮತ್ತು ರಕ್ಷಿತಾ ಎಂಬ ಹೆಸರಿನ ನಾಯಿಗಳನ್ನು ಸಾಕಿದ್ದರು. ಮನೆಯಲ್ಲಿ ಜಾಗದ ಕೊರತೆ ಹಿನ್ನೆಲೆಯಲ್ಲಿ ರಾಕೇಶ್ ತನ್ನ ಸ್ನೇಹಿತ ಮದನ್‌ಗೆ ಶ್ವಾನಗಳನ್ನು ಸಾಕಲು ಕೊಟ್ಟಿದ್ದರು.

ಆದರೆ ಇಲ್ಲೇ ಆಗಿದ್ದು ಯಡವಟ್ಟು ಮಧನ್ ತಾನು ಸಾಕದೆ ಮತ್ತೊಬ್ಬ ಸ್ನೇಹಿತ ಚಂದ್ರು ಎಂಬುವವರಿಗೆ ಶ್ವಾನ ನೀಡಿದ್ದರು. ಎರಡು ಜರ್ಮನ್ ಶೆಪರ್ಡ್ ತಳಿಯ ಶ್ವಾನಗಳನ್ನು ಚಂದ್ರು ಒಂದುವರೆ ತಿಂಗಳು ಪೋಷಣೆ ಮಾಡಿದ್ದರು. ಈ ನಡುವೆ ಶ್ವಾನಗಳು ನಾಪತ್ತೆಯಾಗಿದೆ ಎಂದು ಈ ಬಗ್ಗೆ ಮಾಲೀಕ ರಾಕೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶ್ವಾನಗಳ ಮಾಲೀಕ ರಾಕೇಶ ಬಾರಂಗಿ ಮತ್ತು ಸಾಕಿ ಸಲುಹಿದ್ದ ಚಂದ್ರು ಎಂಬುವವರ ನಡುವೆ ಜಗಳ‌ ನಡೆದಿದೆ. ಇವರಿಬ್ಬರ ನಾಯಿ ಜಗಳವು ಠಾಣೆಮೆಟ್ಟಿಲೇರಿದ್ದು, ಪೊಲೀಸರ ಮಧ್ಯಸ್ಥಿಕೆಯಿಂದ ಜರ್ಮನ್ ಶೆಪರ್ಡ್ ಶ್ವಾನಗಳು ಮಾಲೀಕರ ಮನೆ ಸೇರಿವೆ. ಜತೆಗೆ ತಿಂಗಳ ಕಾಲ ಶ್ವಾನಗಳನ್ನು ಸಾಕಿದ್ದ ಚಂದ್ರುಗೆ ನಿರ್ವಹಣೆ ವೆಚ್ಚ ಕೊಡಿಸಿದ್ದಾರೆ.

ಇದನ್ನೂ ಓದಿ: Road Accident : ಲಾಂಗ್‌ ಡ್ರೈವ್‌ ಹೋದ ಯುವಕರಿಬ್ಬರು ಹಿಟ್ ಆ್ಯಂಡ್ ರನ್‌ಗೆ ಬಲಿ; ನಿಲ್ಲದ ನಿಶಾಚರಿಗಳ ಕಾಟ

ಬಾಗಲಕೋಟೆಯಲ್ಲಿ ಚಿರತೆ ಓಡಾಟ

ಆಹಾರ ಅರಸಿ ಕಾಡಂಚಿನ ಗ್ರಾಮಗಳಿಗೆ ಕಾಡುಪ್ರಾಣಿಗಳು ಆಗಮಿಸುತ್ತಿದ್ದು, ಜನರು ಭಯಭೀತಿಗೊಂಡಿದ್ದಾರೆ. ಬಾಗಲಕೋಟೆಯ ಕಿಶೋರಿ, ಅಮಲಜರಿ, ಹಲಗಲಿ ಗ್ರಾಮದ ಸುತ್ತ-ಮುತ್ತ ಚಿರತೆ ಓಡಾಡಿದೆ. ಮುಧೋಳ ತಾಲೂಕಿನ ಕಿಶೋರಿ ಗ್ರಾಮದಲ್ಲಿ ನಾಯಿ, ಎಮ್ಮೆ, ಕರು, ಮೇಕೆ ಮೇಲೆ ಚಿರತೆ ದಾಳಿ ನಡೆದಿದೆ.

ಮುಧೋಳ, ಬೀಳಗಿ, ಜಮಖಂಡಿ ಭಾಗದಲ್ಲಿ ಚಿರತೆ ಆತಂಕವಿದ್ದು, ರಾತ್ರಿ ಹೊತ್ತು ಆಹಾರ ಅರಸಿ ಗ್ರಾಮದ ಬಳಿ ಓಡಾಡುತ್ತಿದೆ. ಸದ್ಯ ಚಿರತೆ ಓಡಾಡಿರುವಲ್ಲಿ ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಗ್ರಾಮಸ್ಥರು ಜಮೀನುಗಳಿಗೆ ತೆರಳಲು ಭಯ ಪಡುವಂತಾಗಿದೆ.

ಊರಿನೊಳಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಊರಿನೊಳಗೆ ನುಗ್ಗಿ ದಾಂಧಲೆ ಮಾಡುತ್ತಿದ್ದ ಕರಡಿಯನ್ನು ಸೆರೆಹಿಡಿಯಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೊಣಸಿಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕರಡಿಯನ್ನು ಸೆರೆಹಿಡಿಯಲಾಗಿದೆ. ಸದ್ಯ ಕರಡಿ ಸೆರೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ತಡರಾತ್ರಿಯಿಂದಲೂ ಮನೆಗಳ ಬಳಿ ಕರಡಿ ವಾಸ್ತವ್ಯ ಹೂಡಿತ್ತು. ಗ್ರಾಮದ ಮನೆಯೊಂದಕ್ಕೆ ತೆರಳಿ ಪೂಜೆಗೆ ಸಿದ್ಧವಾಗಿದ್ದ ಬಾಳೆಹಣ್ಣು, ದೀಪದ ಎಣ್ಣೆ ಸೇರಿ ಆಹಾರ ಪದಾರ್ಥ ಸೇವನೆ ಮಾಡಿತ್ತು. ಸದ್ಯ ಸಂಡೂರಿನ ಅರಣ್ಯ ಸಿಬ್ಬಂದಿ ಬೋನಿನ ಮೂಲಕ ಕರಡಿ ಸೆರೆ ಹಿಡಿದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version