Site icon Vistara News

ಹಾವೇರಿ ‘ಹೊಂಡ’ ಸಿಟಿ; ರಸ್ತೆಯಲ್ಲಿ ಗಾಡಿ ಪಲ್ಟಿ!

ರಸ್ತೆ ಗುಂಡಿ

ಹಾವೇರಿ: ಹಾವೇರಿಯಲ್ಲಿ ರಸ್ತೆ ಗುಂಡಿಯಾಗಿದ್ದು ಒಂದು ಟಂಟಂ ವಾಹನ ಬಿದ್ದ ಘಟನೆ ಸಾರ್ವಜನಿಕರಿಗೆ ರಸ್ತೆ ಕಾಮಗಾರಿಯ ಬಗ್ಗೆ ಅಸಡ್ಡೆ ಉಂಟುಮಾಡಿದೆ. ರಸ್ತೆಯಲ್ಲಿದ್ದ ಹೊಂಡದಲ್ಲಿ ಟಂಟಂ ವಾಹನ ಸಾಗಿದ್ದು, ವಾಹನ ಪಲ್ಟಿ ಯಾಗಿದೆ. 

ಗುತ್ತಲ ಪಟ್ಟಣದ ರಾಣೆಬೆನ್ನೂರು ರಸ್ತೆಯ ಪೆಟ್ರೋಲ್  ಬಂಕ್ ಎದುರು ಈ ಘಟನೆ ಸಂಭವಿಸಿದೆ. ಅಲ್ಲದೆ, ಈ ಅಪಘಾತದಲ್ಲಿ  ವಾಹನ ಚಾಲಕ ಸಂಪೂರ್ಣ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಬ್ಬಿಣದ ರಾಡ್ ಗಳನ್ನು ಹೆರಿಕೊಂಡು ಸಾಗುತ್ತಿದ್ದ ವಾಹನವೊಂದು ಹೊಂದಕ್ಕೆ ಹೋಗಿದ್ದು ಸಂಪೂರ್ಣ ಗಾಡಿ ಮಗಚಿಬಿದ್ದಿದೆ. 

https://vistaranews.com/wp-content/uploads/2022/04/WhatsApp-Video-2022-04-29-at-2.51.30-PM.mp4

ಈ ರೀತಿಯ ಘಟನೆ ಅನೇಕ ಬಾರಿ ಸಂಭವಸಿದ್ದು ಸ್ಥಳೀಯರು ಈ ಕುರಿತು ಜನಪ್ರತಿನಿಧಿಗಳಿಗೆ ದೂರು ನೀಡಿದ್ದರು. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಮಳೆ ಬಂದಾಗ ಹೊಂಡಗಳಲ್ಲಿ ನೀರು ತುಂಬಿಕೊಂಡು ಕೆರೆಯಂತಾಗುವ ರಸ್ತೆಗಳಲ್ಲಿ ಸುರಕ್ಷಿತವಾಗಿ ಸಂಚರಿಸುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ರಸ್ತೆ ಕಾಮಗಾರಿ ನಡೆದುದನ್ನು ಕಾಣದ ಸ್ಥಳೀಯರು ಈ ವಿಷಯದ ಬಗ್ಗೆ ಸರ್ಕಾರವು ಅಸಡ್ಡೆ ಮಾಡದೆ ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಜೊಮ್ಯಾಟೋ ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ

Exit mobile version