ಹಾವೇರಿ: ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಸುರಿದ ಭಾರೀ ಮಳೆಗೆ ಬಹಳ ಅವಾಂತರ ಸೃಷ್ಟಿಸಿತ್ತು. ಒಂದೆಡೆ ಬೆಳೆದ ಬೆಳೆಗಳು ನೀರು ಪಾಲಾದರೆ, ಇನ್ನೊಂದೆಡೆ ಹಲವರು ಮನೆ-ಮಠ ಕಳೆದುಕೊಂಡಿದ್ದರು. ಎಡಬಿಡದೇ ಸುರಿದ ಮಳೆಯಿಂದ ಹಲವರು ಮನೆ ಕಳೆದುಕೊಂಡಿದ್ದಾರೆ. ಸ್ವತಃ ಸಿಎಂ ತವರು ಜಿಲ್ಲೆ ಹಾವೇರಿಯ ಹಾಲಗಿ ಗ್ರಾಮದಲ್ಲಿ ಆರು ಕುಟುಂಬಗಳು ಮನೆ ಕಳೆದುಕೊಂಡಿವೆ.
ಕರಿಯವ್ವ ಕಟ್ಟಪ್ಪನವರ, ಗಂಗವ್ವ ಕಟ್ಟಪ್ಪನವರ, ನೀಲವ್ವ ಕಟ್ಟಪ್ಪನವರ, ಚನ್ಬಬಸಪ್ಪ, ಸವಿತಾ ಹಾಗೂ ಮಲ್ಲವ್ವ ಕುಟುಂಬ ಅತಂತ್ರ, ಎಲ್ಲರೂ ಮನೆ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ| ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ
ಅಂಬೇಡ್ಕರ್ ಭವನದಲ್ಲಿ ಆಶ್ರಯಪಡೆದ 6 ಕುಟುಂಬಗಳು ನಿರಾಶ್ರಿತವಾಗಿವೆ. ಸಂತ್ರಸ್ತರ ಕುಟುಂಬಗಳಿಗೆ ಗಂಜಿಕೇಂದ್ರ ತೆರೆದಿಲ್ಲ. ಸಂತ್ರಸ್ತರ ನೆರವಿಗೆ ಬಾರದ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ| ಬಿಟ್ಟು ಬಿಡದೇ ಮಳೆ ಸುರಿದ ಪರಿಣಾಮ ಜನ ಕಂಗಾಲು