Site icon Vistara News

Vistara News Launch | ಸತ್ಯ, ಪಕ್ಷಾತೀತ ಸುದ್ದಿಗಳಿಗೆ ಜನ ಆಕರ್ಷಿತರಾಗುತ್ತಾರೆ: ಮಾಜಿ ಸಚಿವ ಮನೋಹರ ತಹಶೀಲ್ದಾರ್

Vistara News Launch

ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದ ಫ್ರೆಂಡ್ಸ್ ಅಸೋಸಿಯೇಷನ್ ಹಾಲ್‌ನಲ್ಲಿ ವಿಸ್ತಾರ ಕನ್ನಡ ಸಂಭ್ರಮ(Vistara News Launch) ಅದ್ಧೂರಿಯಾಗಿ‌ ಮಂಗಳವಾರ ನೆರವೇರಿತು. ಕಾರ್ಯಕ್ರಮವನ್ನು ಗಿಡಕ್ಕೆ ನಿರೇರೆಯುವ ಮೂಲಕ ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಅವರು, ಬಹಳಷ್ಟು ದೃಶ್ಯ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿವೆ. ಇವುಗಳ ಬಳಗಕ್ಕೆ ವಿಸ್ತಾರ ನ್ಯೂಸ್‌ ಹೊಸದಾಗಿ ಸೇರ್ಪಡೆಯಾಗಿದೆ. ಇಂದಿನ‌ ದಿನಮಾನಗಳಲ್ಲಿ ದೃಶ್ಯ ಮಾಧ್ಯಮಗಳನ್ನು ಹೆಚ್ಚಿನ ಜನರು ನೋಡುತ್ತಿದ್ದಾರೆ. ಸತ್ಯವಾದ, ಪಕ್ಷಾತೀತ ವಿಚಾರಗಳನ್ನು ಬಿತ್ತರಿಸಿದರೆ ಹೆಚ್ಚಿನ ಜನರು ಆಕರ್ಷಿತರಾಗುತ್ತಾರೆ. ಸ್ಥಳೀಯ ಕುಂದುಕೊರತೆಗಳನ್ನು ನಿವಾರಿಸುವ ಕೆಲಸ ಮಾಡಿದಾಗ ವಿಸ್ತಾರ ಜನಮನದಲ್ಲಿ ಶಾಶ್ವತವಾಗಿ ಉಳಿಯಲಿದೆ. ವಿಸ್ತಾರ ನ್ಯೂಸ್ ನಾಡಿನುದ್ದಕ್ಕೂ ಎಲ್ಲರ ಮನೆ ಮನೆಗಳಿಗೆ ತಲುಪಲಿ ಎಂದು ಶುಭ ಹಾರೈಸಿದರು.

ಇದನ್ನೂ ಓದಿ | Vistara News Launch | ಮಾಧ್ಯಮಗಳಿಂದ ಸಮಾಜ ಸುವ್ಯವಸ್ಥಿತವಾಗಿದೆ: ತಹಸೀಲ್ದಾರ್‌ ಅಜಿತ್ ಕುಮಾರ್ ರೈ

ಮುಖ್ಯ ಅತಿಥಿ ಸಮಾಜಸೇವಕ, ಬಿಜೆಪಿ ಯುವ ಮುಖಂಡ ರಾಜಶೇಖರ ಕಟ್ಟೇಗೌಡರ ಮಾತನಾಡಿ, ಯಲ್ಲಾಪುರ ತಾಲೂಕಿನ ಕುಗ್ರಾಮದಿಂದ ಬಂದ ಖ್ಯಾತ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಶ್ರೇಯಸ್ಸು ಅವರದ್ದು. ಒಂದು ಸುದ್ದಿವಾಹಿನಿ ಚೆನ್ನಾಗಿ ಮೂಡಿ ಬರಲು ಅದಕ್ಕೆ ಬೆನ್ನೆಲುಬು ಬಹಳ ಮುಖ್ಯ. ವಿಸ್ತಾರ ನ್ಯೂಸ್ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ವಿಸ್ತಾರವಾಗಿ ಬೆಳೆಯಲಿ ಎಂದು ಶುಭಕೋರಿದರು.

ಹಾನಗಲ್ ತಹಸೀಲ್ದಾರ್‌ ಪಿ.ಎಸ್.ಎರ‍್ರಿಸ್ವಾಮಿ ಮಾತನಾಡಿ, ಈ ಹಿಂದೆ ಸುದ್ದಿ ತಲುಪಿಸಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಇಂದು ಆಧುನಿಕತೆ ಬೆಳೆದಂತೆಲ್ಲ ಮಾಧ್ಯಮ ಕ್ಷೇತ್ರ ವಿಸ್ತರಿಸಿದೆ. ಹರಿಪ್ರಕಾಶ್ ಕೋಣೆಮನೆ ಅವರ ಅಪಾರ ಅನುಭವದ ಮೇಲೆ ಈ ವಾಹಿನಿ ವಿಸ್ತರಿಸಲಿ ಎಂದು ಆಶಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಮಾತನಾಡಿ, ಸುದ್ದಿ ಮಾಧ್ಯಮ ಕೇವಲ ಸುದ್ದಿ ಮಾತ್ರ ಬಿತ್ತರಿಸುವುದಿಲ್ಲ. ಅದು ಸಂಚಾರಿ ವಿಶ್ವವಿದ್ಯಾಲಯವಾಗಿದೆ. ಸತ್ಯ ಸುದ್ದಿಯನ್ನು ಕೊಡುವ ಮೂಲಕ ವಿಸ್ತಾರ ನ್ಯೂಸ್ ಜನಪರವಾಗಲಿ ಎಂದು ಶುಭಕೋರಿದರು.

ಬಿಜೆಪಿ ಮುಖಂಡ ಕಲ್ಯಾಣ ಕುಮಾರ ಶೆಟ್ಟರ ಮಾತನಾಡಿ, ಸಾಕಷ್ಟು ಸುದ್ದಿವಾಹಿನಿಗಳು ಬಂದಿವೆ. ಆದರೆ, ವಿಶ್ವಾಸಾರ್ಹತೆ ಉಳಿಸಿಕೊಂಡ ವಾಹಿನಿಗಳು ಉಳಿಯುತ್ತಿವೆ. ವಿಸ್ತಾರ ಸುದ್ದಿ ವಾಹಿನಿ ಜನರ ವಿಶ್ವಾಸಾರ್ಹತೆ ಗಳಿಸಿಕೊಂಡು ವಿಸ್ತಾರವಾಗಲಿ ಎಂದು ಶುಭಕೋರಿದರು.

ತಾಲೂಕಿನ ಪತ್ರಕರ್ತರಿಗೆ ಗಣ್ಯರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಭರತನಾಟ್ಯ ಪ್ರದರ್ಶನದ ಮೂಲಕ ಅಮೃತ ಮತ್ತು ಸುಗಂಧಿ ಸಂಗಡಿಗರು ಕನ್ನಡ ಸಂಭ್ರಮ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಶಾಂಭವಿ ಪಾಟೀಲ್ ಪ್ರಾರ್ಥನೆ ಗೀತೆ ಹಾಡಿದರು, ಕಿರಣ್ ನಿರೂಪಣೆ ಮಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ.ಪಾರ, ಸಾಹಿತಿ ಉದಯ ನಾಸಿಕ, ರೈತ ಮುಖಂಡರಾದ ಮರಿಗೌಡ ಪಾಟ, ಅಡವೆಪ್ಪ ಆಲದಕಟ್ಟಿ, ರಾಮು ಯಳ್ಳುರ, ಕೆ.ಎಲ್ ದೇಶಪಾಂಡೆ, ನಾಗೇಂದ್ರ ಬಂಕಾಪುರ ಉಪಸ್ಥಿತರಿದ್ದರು.

ಇದನ್ನೂ ಓದಿ | Vistara News Launch | ಆಡಳಿತ ವ್ಯವಸ್ಥೆ ವಿರುದ್ಧ ಮಾಧ್ಯಮಗಳು ಗಟ್ಟಿಯಾಗಿ ಧ್ವನಿ ಎತ್ತಲಿ: ಶಶಿಭೂಷಣ ಹೆಗಡೆ

Exit mobile version