Site icon Vistara News

HD DeveGowda: ಹಾಸನ ಜೆಡಿಎಸ್‌ ದಂಗಲ್‌ಗೆ ದೇವೇಗೌಡರ ಬ್ರೇಕ್‌; ಭವಾನಿಗಿಲ್ಲ ಟಿಕೆಟ್‌?: ಇದರ ಹಿಂದಿನ ಕಾರಣವೇನು?

hd devegowda take decision on hassan jds ticket and no ticket for bhavani revanna

ಹಾಸನ: ರಾಜ್ಯ ರಾಜಕೀಯದಲ್ಲಿ ಬಹಳವೇ ಗಮನ ಸೆಳೆದಿದ್ದ ಜೆಡಿಎಸ್‌ ಟಿಕೆಟ್‌ ಗೊಂದಲವು ಬಹುತೇಕ ಬಗೆಹರಿಯುವ ಲಕ್ಷಣಕ್ಕೆ ಬಂದಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಪತ್ನಿ ಭವಾನಿ (Bhavani Revanna) ಹಾಗೂ ಸ್ವರೂಪ್‌ ನಡುವೆ ಇದ್ದ ಟಿಕೆಟ್‌ ಫೈಟ್‌ಗೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (HD DeveGowda) ಅವರು ಅಂತ್ಯ ಹಾಡಿದ್ದಾರೆ ಎನ್ನಲಾಗಿದ್ದು, ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಾಸನ ಟಿಕೆಟ್ ವಿಚಾರವಾಗಿ ಮೂರು ದಿನಗಳ ಹಿಂದಷ್ಟೇ ತಮ್ಮ ಸ್ವಗೃಹದಲ್ಲಿ ದೇವೆಗೌಡ ಅವರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಾಸನದ ಶಾಸಕರು, ಮುಖಂಡರು ಭಾಗಿಯಾಗಿದ್ದರು. ಆಗ ಹಾಸನ ಕ್ಷೇತ್ರದ ಟಿಕೆಟ್‌ ವಿಚಾರ ಪ್ರಸ್ತಾಪವಾದಾಗ ಎಚ್‌.ಡಿ. ದೇವೇಗೌಡ ಅವರು, ಭವಾನಿಗೆ ಈ ಬಾರಿ ಟಿಕೆಟ್‌ ನೀಡಿಕೆ ಇಲ್ಲ ಎಂದು ಕಡ್ಡಿ ಮುರಿದಂತೆ ರೇವಣ್ಣ ಅವರ ಮುಂದೆಯೇ ಹೇಳಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Chief Memes Officer : ಬೆಂಗಳೂರಿನ ಸ್ಟಾರ್ಟಪ್‌ಗೆ ಬೇಕಾಗಿದ್ದಾರೆ ಚೀಫ್‌ ಮೀಮ್ಸ್‌ ಆಫೀಸರ್‌, ತಿಂಗಳಿಗೆ 1 ಲಕ್ಷ ರೂ. ಸಂಬಳ

ಭವಾನಿ ರೇವಣ್ಣ ಟಿಕೆಟ್‌ಗಾಗಿ ಎಚ್.ಡಿ. ರೇವಣ್ಣ ಅವರು ದೇವೇಗೌಡರ ಮೊರೆ ಹೋಗಿದ್ದರು. ಸಭೆಯಲ್ಲಿ ಗೌಡರು ನಾಯಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಸಹ ಹಾಸನದಲ್ಲಿ ಚುನಾವಣಾ ಟ್ರೆಂಡ್ ಬಗ್ಗೆ ಅವಲೋಕನ ನಡೆಸಿದ್ದಾರೆ. ತಮ್ಮ ಮೂಲಗಳಿಂದ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆನ್ನಲಾಗಿದೆ. ಆ ಬಳಿಕ ದೇವೇಗೌಡರು ಈ ನಿಲುವಿಗೆ ಬಂದಿದ್ದಾರೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ ಭವಾನಿ ರೇವಣ್ಣರಿಗೆ ಹಾಸನ ಟಿಕೆಟ್ ಇಲ್ಲ ಎಂಬ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜಕೀಯ ಕಾರಣಗಳು ಮತ್ತು ಕುಟುಂಬದೊಳಗಿನ ಕಾರಣಗಳಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ಮೂಲಕ ಸ್ವರೂಪ್‌ಗೆ ಹಾಸನ ಟಿಕೆಟ್‌ ಬಹುತೇಕ ಪಕ್ಕಾ ಎಂದೇ ಹೇಳಲಾಗುತ್ತಿದೆ. ಭವಾನಿ ಹಾಗೂ ಸ್ವರೂಪ್‌ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್‌ ನೀಡುವ ಬಗ್ಗೆಯೂ ಈ ಹಿಂದೆ ಚರ್ಚೆ ನಡೆದಿತ್ತು. ಅಲ್ಲದೆ, ಈ ಎಲ್ಲ ಘಟನೆಗಳಿಂದ ಬೇಸರಗೊಂಡಿದ್ದ ಸ್ವರೂಪ್‌ ಈಚೆಗೆ ಚುನಾವಣಾ ಪ್ರಚಾರಕ್ಕೆ ಸ್ವಲ್ಪ ಹಿಂದೇಟು ಹಾಕುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ವರೂಪ್‌ ಅವರಿಗೆ ಪ್ರಚಾರ ಚುರುಕುಗೊಳಿಸುವಂತೆ ವಾರದ ಹಿಂದಷ್ಟೇ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದ್ದರು ಎಂದು ತಿಳಿದುಬಂದಿದೆ.

ದೇವೇಗೌಡರ ನಿಲುವಿಗೆ ಕಾರಣಗಳೇನು?

ಇದನ್ನೂ ಓದಿ: Karnataka Election 2023: ನಾನು, ಸಿದ್ದರಾಮಯ್ಯ ಅನಿವಾರ್ಯ ಕಾರಣಕ್ಕಾಗಿ ಕ್ಷೇತ್ರ ಬಿಟ್ಟೆವು: ಶ್ರೀರಾಮುಲು ಹೀಗೆ ಹೇಳಿದ್ಯಾಕೆ?

ಹೀಗಾಗಿ ದೇವೇಗೌಡರ ನಿರ್ಧಾರದಿಂದ ಹಾಸನ ಟಿಕೆಟ್ ಗೊಂದಲಕ್ಕೆ ಬಹುತೇಕ ತೆರೆ ಬಿದ್ದಂತೆ ಆಗಿದೆ. ಇನ್ನೊಂದು ವಾರದಲ್ಲಿ ಹಾಸನ ಸೇರಿದಂತೆ ಎರಡನೇ ಟಿಕೆಟ್ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ.

Exit mobile version