Site icon Vistara News

HD Kumaraswamy: ಬಂಗಾಳದಲ್ಲಿ ಮಮತಾ ಬ್ಯಾನರ್ಜಿ-ಎಚ್‌ಡಿಕೆ ಭೇಟಿ, ತೃತೀಯ ರಂಗದ ಕುರಿತು ಚರ್ಚೆ?

third front leaders not come to campaign for jds in karnataka

ಎಚ್‌.ಡಿ. ಕುಮಾರಸ್ವಾಮಿ

ಕೋಲ್ಕೊತಾ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸೇರಿ ಸಕಲ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಅದರಲ್ಲೂ, ಬಿಜೆಪಿಯನ್ನು ಸೋಲಿಸಲು ಶತಾಯ ಗತಾಯ ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಪ್ರತಿಪಕ್ಷಗಳು, ಹಲವು ತಂತ್ರ ರೂಪಿಸುತ್ತಿವೆ. ಪ್ರತಿಪಕ್ಷಗಳೆಲ್ಲವೂ ಸೇರಿ ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ. ತೃತೀಯ ರಂಗ ರಚನೆ ಕುರಿತು ಚಿಂತನೆ ನಡೆಸಿವೆ. ಇಂತಹ ಚರ್ಚೆಗಳ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಕೋಲ್ಕೊತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ, ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ.

ಭವಾನಿಪುರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಮಮತಾ ಬ್ಯಾನರ್ಜಿ ಭೇಟಿಯಾಗಿದ್ದು, ತೃತೀಯ ರಂಗದ ರಚನೆ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಒಂದು ವಾರದಲ್ಲಿಯೇ ಮಮತಾ ಬ್ಯಾನರ್ಜಿಯವರು ಪ್ರಾದೇಶಿಕ ಪಕ್ಷಗಳ ಮೂವರು ನಾಯಕರ ಜತೆಗೆ ಮಮತಾ ಬ್ಯಾನರ್ಜಿಯವರು ಮಾತುಕತೆ ನಡೆಸಿದ್ದಾರೆ. ಕುಮಾರಸ್ವಾಮಿ ಅವರ ಜತೆಗೂ ಚರ್ಚೆಯಾಗಿದ್ದು, ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಮಹತ್ವದ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆಯೂ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಎಚ್‌ಡಿಕೆ ಭೇಟಿ ಕುರಿತು ಟಿಎಂಸಿ ಟ್ವೀಟ್‌

ಬಿಹಾರದಲ್ಲಿ ಜೆಡಿಯು ಪಕ್ಷದ ನಿತೀಶ್‌ ಕುಮಾರ್‌, ಆರ್‌ಜೆಡಿಯ ತೇಜಸ್ವಿ ಯಾದವ್‌, ತೆಲಂಗಾಣದಲ್ಲಿ ಬಿಆರ್‌ಎಸ್‌ ಪಕ್ಷದ ಕೆ.ಚಂದ್ರಶೇಖರ್‌ ರಾವ್‌, ಕೇರಳದ ಪಿಣರಾಯಿ ವಿಜಯನ್‌, ತಮಿಳುನಾಡಿನ ಡಿಎಂಕೆಯ ಎಂ.ಕೆ.ಸ್ಟಾಲಿನ್‌ ಸೇರಿ ಹಲವು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಲೋಕಸಭೆ ಚುನಾವಣೆಯಲ್ಲಿ ತೃತೀಯ ರಂಗ ರಚನೆ ಕುರಿತು ಚರ್ಚೆ ನಡೆಯುತ್ತಿದೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬುದು ಈ ಪಕ್ಷಗಳ ಉದ್ದೇಶವಾಗಿದೆ.

ಇದಕ್ಕಾಗಿಯೇ ಸ್ಥಳೀಯ ಪಕ್ಷಗಳೆಲ್ಲವೂ ಒಗ್ಗಟ್ಟಿನ ಮಂತ್ರ ಪಠಿಸುತ್ತಿವೆ. ಅಷ್ಟೇ ಏಕೆ, ನಮಗೆ ಪ್ರಧಾನಿ ಅಭ್ಯರ್ಥಿ ಮುಖ್ಯವಲ್ಲ, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಷ್ಟೇ ಮುಖ್ಯ ಎಂದು ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಆ ಮೂಲಕ ಬಿಜೆಪಿಯನ್ನು ಸೋಲಿಸಲು ಸ್ಥಳೀಯ ಪಕ್ಷಗಳಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತದೆ ಎಂಬುದನ್ನು ಅವರು ಸೂಚ್ಯವಾಗಿ ಹೇಳಿದ್ದರು. ಈ ಎಲ್ಲ ಕಾರಣಗಳಿಂದಾಗಿ 2024ರ ಲೋಕಸಭೆ ಚುನಾವಣೆಯು ಮಹತ್ವ ಪಡೆದಿದೆ.

ಇದನ್ನೂ ಓದಿ: BRS Public Meeting | ಕೆಸಿಆರ್‌ ನೇತೃತ್ವದಲ್ಲಿ ಸಭೆ, 3 ರಾಜ್ಯಗಳ ಸಿಎಂಗಳು ಭಾಗಿ, ತೃತೀಯ ರಂಗಕ್ಕೆ ಸಭೆ ಮುನ್ನುಡಿ?

Exit mobile version