Site icon Vistara News

HDK Birthday | ಹೊಸಪೇಟೆಯಲ್ಲಿ ಅಂಧ ಮಕ್ಕಳ ಜತೆ ಎಚ್‌ಡಿಕೆ ಜನ್ಮ ದಿನ ಆಚರಿಸಿಕೊಂಡ ಜೆಡಿಎಸ್‌ ಕಾರ್ಯಕರ್ತರು

HDK birthday

ಹೊಸಪೇಟೆ: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹುಟ್ಟು ಹಬ್ಬವನ್ನು (HDK Birthday) ಹೊಸಪೇಟೆ ಜೆಡಿಎಸ್ ಕಾರ್ಯಕರ್ತರು ವಿಶೇಷವಾಗಿ ಆಚರಿಸಿದ್ದಾರೆ. ಅಂಧ ಮಕ್ಕಳ ಜೊತೆ ಖುಷಿಯಾಗಿ ಕುಣಿದು ಸಂಭ್ರಮವನ್ನು ಹಚ್ಚಿದ್ದಾರೆ. ಹೊಸಪೇಟೆ ನಗರದಲ್ಲಿರುವ ವಿಶ್ವ ಚೈತನ್ಯ ಅಂಧ ಮಕ್ಕಳಿಂದಲೇ ಕೇಕ್ ಕತ್ತರಿಸುವ ಮೂಲಕ ಕುಮಾರಸ್ವಾಮಿ ಹುಟ್ಟು ಹಬ್ಬವನ್ನು ಆಚರಿಸಲಾಗಿದೆ.

ಡಿಸೆಂಬರ್‌ ೧೬ರಂದು ಕುಮಾರಸ್ವಾಮಿ ಅವರ ಜನ್ಮದಿನವಾಗಿತ್ತು. ಜೆಡಿಎಸ್‌ ಕಾರ್ಯಕರ್ತರು ನಗರದ 100 ಬೆಡ್‌ಗಳ ಆಸ್ಪತ್ರೆಗೆ ಭೇಟಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು, ಹಾಲು ಹಾಗೂ ಬಿಸ್ಕತ್ತು ನೀಡುವ ಮೂಲಕ ಬಡ ರೋಗಿಗಳಿಗೆ ಸಹಾಯ ಮಾಡಿದರು.

ಕುಮಾರಸ್ವಾಮಿ ಹುಟ್ಟು ಹಬ್ಬ ಆಚರಣೆ ವೇಳೆ ವಿಜಯನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಕೊಟ್ರೇಶ್, ಹೊಸಪೇಟೆ ತಾಲೂಕಿನ ಜೆಡಿಎಸ್ ತಾಲೂಕಾಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಸೇರಿ ಜೆಡಿಎಸ್ ನ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ | ರಾಮನಗರದಿಂದ ಕಣಕ್ಕಿಳಿಯಲಿದ್ದಾರೆ ನಿಖಿಲ್‌ ಕುಮಾರಸ್ವಾಮಿ: ಹಾಗಾದರೆ ಎಚ್‌ಡಿಕೆ ಸ್ಪರ್ಧೆ ಎಲ್ಲಿಂದ?

Exit mobile version