ತುಮಕೂರು: ಕರ್ನಾಟಕದಲ್ಲಿ ಚುನಾವಣಾ ಪರ್ವವಾಗಿರುವ ಕಾರಣ ಬಗೆಬಗೆಯ ಘೋಷಣೆಗಳು ಕೇಳಿಬರುತ್ತಿವೆ. ಇದೇ ಮಾದರಿಯಲ್ಲಿ ರೈತಾಪಿ ವರ್ಗದ ಯುವಕರಿಗೆ ಅನುಕೂಲಕರವಾಗಿರುವ ಘೋಷಣೆಯೊಂದನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಜೆಡಿಎಸ್ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆ ಹಾಗೂ ಜನಸಂಪರ್ಕ ಸಭೆಯಲ್ಲಿ ಈ ಮಾಹಿತಿ ಪ್ರಕಟಿಸಿದ್ದಾರೆ.
ತುಮಕೂರು ಜಿಲ್ಲೆಯ ಹಾಲ್ಕುರಿಕೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ರೈತರ ಮಕ್ಕಳನ್ನು ಮದುವೆಯಾಗಲು ಹೆಣ್ಣು ಮಕ್ಕಳು ಮುಂದೆ ಬರುವುದಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳನ್ನು ವರಿಸುವವರಿಗೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಅವರು ಹೇಳಿದ್ದಾರೆ.
ಜೆಡಿಎಸ್ನ ಪಂಚರತ್ನ ಯಾತ್ರೆ ತುಮಕೂರಿನಿಂದ ಮರು ಆರಂಭಗೊಂಡಿದ್ದು, ಮಾರ್ಚ್ 26ರ ತನಕ ನಡೆಯಲಿದೆ. ಈ ವೇಳೆ ಜೆಡಿಎಸ್ ಮುಖಂಡರು ಜನರನ್ನು ಭೇಟಿಯಾಗಿ ತಮ್ಮ ಯೋಜನೆಗಳನ್ನು ಜನರಿಗೆ ಮಾಹಿತಿ ನೀಡಲಿದ್ದಾರೆ.