Site icon Vistara News

Health Camp: ಮಾ.18ರಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮದವರಿಗೆ ಆರೋಗ್ಯ ಶಿಬಿರ

Health Camp

#image_title

ಬೆಂಗಳೂರು: ಕರ್ನಾಟಕ ವಿಡಿಯೊ ಜರ್ನಲಿಸ್ಟ್ ಅಸೋಸಿಯೇಷನ್, ಹಾರ್ಟ್ ಮೆಡಿಕಲ್ ಸೆಂಟರ್‌, ಚೈಲ್ಡ್ ವಿಕಾಸ್ ಫೌಂಡೇಶನ್ ಹಾಗೂ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಸಹಯೋಗದಲ್ಲಿ ಮಾರ್ಚ್‌ 18ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3ರವರೆಗೆ ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ಮಾಧ್ಯಮದವರು ಹಾಗೂ ಕುಟುಂಬಸ್ಥರಿಗೆ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಶಿಬಿರ ಆಯೋಜಿಸಲಾಗಿದೆ.

ಶಿಬಿರದಲ್ಲಿ ತಜ್ಞ ವೈದ್ಯರು ಹೃದ್ರೋಗ, ಮೊಣಕಾಲು ನೋವು, ಬೆನ್ನು ನೋವು, ಮಧುಮೇಹ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ ನಡೆಸಲಿದ್ದಾರೆ. ಈ ವೇಳೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಡಯಾಬಿಟಿಕ್ ರಿವರ್ಸಲ್, ಡಯಟ್‌ ಮತ್ತು ನ್ಯೂಟ್ರೀಷನ್, ಹೋಮಿಯೋಪಥಿ ವೈದ್ಯರು ಉಪಸ್ಥಿತರಿರಲಿದ್ದು, ತಪಾಸಣೆ ಬಳಿಕ ಉಚಿತ ಔಷಧ ವಿತರಣೆ ಮಾಡಲಿದ್ದಾರೆ.

ಇದನ್ನೂ ಓದಿ | Darpan Foundation: ಮಾ.18ರಂದು ಬೆಂಗಳೂರಿನಲ್ಲಿ ʼಉಪನಿಷದ್‌ʼ ಸಂವಾದ ಕಾರ್ಯಕ್ರಮ

Exit mobile version