ಕೊಡಗು: ಮಡಿಕೇರಿಯ ಸಮಾಜ ಸೇವಕ ರಮೇಶ್ ಭಾನುವಾರ (ಅ.8) ಹೃದಯಾಘಾತದಿಂದ (Heart attack) ಮೃತಪಟ್ಟಿದ್ದಾರೆ. 8 ವರ್ಷಗಳಿಂದ ವಿಕಾಶ್ ಜನಸೇವಾ ಟ್ರಸ್ಟ್ ಮೂಲಕ ನಿರ್ಗತಿಕರಿಗೆ ಏಳನೇ ಹೊಸಕೋಟೆ ಗ್ರಾಮದಲ್ಲಿ ಆಶ್ರಮ ತೆರೆದು ರಮೇಶ್ ಆಶ್ರಯವನ್ನು ನೀಡಿದ್ದರು. ಇದೀಗ ಇವರಿಲ್ಲದೇ ಆಶ್ರಮದಲ್ಲಿದ್ದವರು ಅನಾಥರಾಗಿದ್ದಾರೆ.
ನಿಗ೯ತಿಕರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು ಓಡಾಡುತ್ತಿರುವುದು ಜನರ ಗಮನಕ್ಕೆ ಬಂದರೆ ಇವರನ್ನು ಎಲ್ಲಿಗೆ ಸಾಗಿಸುವುದು? ಇವರಿಗೆ ಹೇಗೆ ಆಶ್ರಯ ಕೊಡುವುದು ಎಂಬ ಪ್ರಶ್ನೆ ಎದುರಾದರೆ ದೊರಕುತ್ತಿದ್ದ ಉತ್ತರವೇ ವಿಕಾಸ್ ಜನಸೇವಾ ಟ್ರಸ್ಟ್‌ನ ರಮೇಶ್. ಆದರೆ ದುರ್ವಿಧಿ ಎಂಬಂತೆ ವಿಕಾಸ್ ಜನಸೇವಾ ಟ್ರಸ್ಟ್‌ನ ಸ್ಥಾಪಕ ರಮೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Attibele Fire Accident : ಅತ್ತಿಬೆಲೆ ಪಟಾಕಿ ದುರಂತದ ಸಿಐಡಿ ತನಿಖೆ: ಸಿದ್ದರಾಮಯ್ಯ ಘೋಷಣೆ
ಗ್ಯಾಸ್ ಸ್ಫೋಟಗೊಂಡು ಗಾಯಗೊಂಡಿದ್ದ ರಮೇಶ್
ಕಳೆದ ಅಕ್ಟೋಬರ್ 4 ರಂದು ಸಂಜೆ ರಮೇಶ್ ಮತ್ತು ಅವರ ಪತ್ನಿ ರೂಪ ಮನೆಗೆ ಹಿಂದಿರುಗಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್ ಲೀಕ್ ಆಗಿತ್ತು. ಇದು ತಿಳಿಯದೇ ಸ್ಟವ್ ಆನ್ ಮಾಡಿದ್ದರಿಂದ ಕೂಡಲೇ ಸಿಲಿಂಡರ್ ಸ್ಪೋಟಗೊಂಡಿದೆ. ಇದರಿಂದಾಗಿ ರಮೇಶ್ ಹಾಗೂ ರೂಪ ಗಂಭೀರ ಗಾಯಗೊಂಡಿದ್ದರು.
ಇವರಿಬ್ಬರನ್ನೂ ಕೂಡಲೇ ಮೈಸೂರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಡೆಯುವಾಗ ಭಾನುವಾರ ಮುಂಜಾನೆ ರಮೇಶ್‌ಗೆ ಹೖದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ನೂರಾರು ಜೀವಗಳಿಗೆ ಆಶ್ರಯ ನೀಡಿದ ಜೀವವೇ ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಶ್ರಮದ ಹಿರಿ ಜೀವಗಳು ಆತಂಕಗೊಂಡಿದ್ದಾರೆ.
ಪ್ರಸ್ತುತ ವಿಕಾಸ ಜನಸೇವಾ ಟ್ರಸ್ಟ್‌ನಲ್ಲಿ 32 ಹಿರಿಯ ಜೀವಗಳಿವೆ. ರಮೇಶ್ ಮತ್ತು ಅವರ ಕುಟುಂಬವನ್ನೇ ಆಶ್ರಯಿಸಿಕೊಂಡಿತ್ತು. ರಮೇಶ್ ಅವರನ್ನೇ ನಂಬಿಕೊಂಡಿದ್ದ 32 ಜೀವಿಗಳ ನೆರವಿಗೆ ಸಕಾ೯ರ ಕೂಡಲೇ ಮುಂದಾಗಬೇಕು. ರಮೇಶ್ ಕನಸಾದ ವಿಕಾಸ್ ಜನಸೇವಾ ಟ್ರಸ್ಟ್‌ನ ಭವಿಷ್ಯ ಸುಗಮವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ