Site icon Vistara News

ನವಲಗುಂದ: ಭಾರಿ ಮಳೆಗೆ ಜಲಾವೃತಗೊಂಡ ಶಾಲೆಯಲ್ಲಿ ಸಿಲುಕಿದ್ದ 150 ಮಕ್ಕಳ ರಕ್ಷಣೆ

ಶಾಲೆ

ಧಾರವಾಡ: ಮಳೆಯ ಆರ್ಭಟದಿಂದಾಗಿ ಪ್ರವಾಹದಲ್ಲಿ ಸಿಲುಕಿದ್ದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ರಕ್ಷಿಸಿದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಗುರುವಾರ ನಡೆದಿದೆ.

ಕಳೆದ ಕೆಲ ಸಮಯದಿಂದ ಧಾರಾಕಾರ ಮಳೆ ಸುರಿದಿದ್ದರಿಂದ ಶಾಲೆಯ ಕಟ್ಟದ ಸುತ್ತ ಹಳ್ಳದ ನೀರಿನ ಹರಿವು ಹೆಚ್ಚಾಗಿತ್ತು. ಹೀಗಾಗಿ 150 ಮಕ್ಕಳು ಶಾಲೆಯಲ್ಲೇ ಉಳಿದುಕೊಂಡಿದ್ದರು.

ಸಂಜೆ 4ಗಂಟೆಯಿಂದ ಭಾರಿ ಮಳೆ ಸುರಿದಿದ್ದರಿಂದ ಹಳ್ಳಕೊಳ್ಳಗಳು ಭರ್ತಿಯಾಗಿ ಶಾಲೆ ಜಲಾವೃತವಾಗಿತ್ತು. ಹೀಗಾಗಿ ಮಕ್ಕಳು ಹೊರಬರಲಾಗದೆ ಅಲ್ಲೇ ಉಳಿದುಕೊಂಢಿದ್ದರು. ಹಳ್ಳದಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ಮೇಲೆ ಸ್ಥಳಕ್ಕೆ ಬೆಳವಟಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಟ್ರ್ಯಾಕ್ಟರ್‌ ಮೂಲಕ ತೆರಳಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಇನ್ನಷ್ಟು ನೀರು ಕಡಿಮೆಯಾದ ನಂತರ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಯಿತು.

ಇದನ್ನೂ ಓದಿ | Monsoon 2022 | ರಾಜ್ಯಕ್ಕೆ ಮುಂಗಾರು ಬಂದರೂ ಹಿಡಿಯದ ಮಳೆಗಾಲ

Exit mobile version