ಬೆಂಗಳೂರು: ಸಿಲಿಕಾನ್ ಸಿಟಿಯ ಹಲವೆಡೆ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ವಸಂತ ನಗರ, ಹೆಬ್ಬಾಳ ಮಲ್ಲೇಶ್ವರ, ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಮಾರ್ಕೆಟ್, ಬಸವನಗುಡಿ, ವಿದ್ಯಾಪೀಠ, ಹನುಮಂತ ನಗರ, ಕತ್ರಿಗುಪ್ಪೆ, ಮಡಿವಾಳ, ಕೋರಮಂಗಲ, ವಿಜಯನಗರ, ಹೆಬ್ಬಾಳ, ಕೆಂಗೇರಿ, ಆರ್‌ಆರ್ ನಗರ, ವಿದ್ಯಾರಣ್ಯಪುರ ಸೇರಿ ರಾಜಧಾನಿಯ (Bangalore Rain) ಬಹುತೇಕ ಕಡೆ ಗುಡುಗು ಸಹಿತ ಮಳೆಯಾಗಿದೆ. ರಸ್ತೆಗಳು ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು.
ಬಿರುಸಿನ ಮಳೆ ಹಿನ್ನೆಲೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಜನರು ಪರದಾಡುವಂತಾಯಿತು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಬಸ್ ತಂಗುದಾಣ, ರಸ್ತೆ ಪಕ್ಕದ ಕಟ್ಟಡಗಳ ಬಳಿ ಆಶ್ರಯ ಪಡೆದರು.
ನಗರದ ವರ್ತೂರಿನಲ್ಲಿ ರಾತ್ರಿ 8 ಗಂಟೆ ಮಾಹಿತಿಯಂತೆ 60 ಮಿಲಿ ಮೀಟರ್, ಹಗದೂರು 42 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣ 40 ಮಿ.ಮೀ, ಮಾರತ್ತಹಳ್ಳಿ 38 ಮಿ.ಮೀ, ವಿವಿ ಪುರಂ 24 ಮಿ.ಮೀ, ಬಸವನಪುರ 23ಮಿ.ಮೀ, ದೊಡ್ಡಾನೆಕ್ಕುಂದಿ 20 ಮಿ.ಮೀ, ಹಂಪಿನಗರ 20ಮಿ.ಮೀ, ಸಂಪಂಗಿರಾಮನಗರನಲ್ಲಿ 12 ಮಿ.ಮೀ ಮಳೆ ದಾಖಲಾಗಿದೆ.
ಇದನ್ನೂ ಓದಿ | Weather Report: ಕದಡಿತು ಕಡಲು! ಇನ್ನೂ 5 ದಿನ ಮೀನುಗಾರಿಕೆಗೆ ನಿರ್ಬಂಧ; ಸುರಿಯಲಿದೆ ಬಿರುಮಳೆ
Visuals of Intense #Rains from #Bangalore as Vartharu AWS recorded 93mm Rainfall till 8:30pm
— Weatherman Shubham (@shubhamtorres09) June 12, 2023
Meanwhile in #Gujarat , #Veraval at 142mm till 8:30pm pic.twitter.com/FBllf4dyS9
ಕೆಲವೆಡೆ ತಡರಾತ್ರಿವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಕೆಲವೆಡೆ ರಸ್ತೆ ಸಂಚಾರಕ್ಕೆ ತೊಂದರೆಯಾಯಿತು. ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದೆ. ಜೂನ್ 16ರವರೆಗೆ ನಗರದಲ್ಲಿ ಮಳೆಯ ವಾತಾವರಣ ಕಂಡುಬರುವ ಸಾಧ್ಯತೆ ಇದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.