ಹೊಸ ವರ್ಷ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಮುಂದಿನ ನಿರೀಕ್ಷೆಗಳು ಸಾಕಷ್ಟಿವೆ. 2024 ಸಾಕಷ್ಟು ರೋಮಾಂಚಕಾರಿಯಾಗಿರಲಿದೆ ಎಂಬ ಭರವಸೆಯೂ ಸೃಷ್ಟಿಯಾಗಿದೆ. ಸಿನಿಮಾ, ಕ್ರೀಡೆ, ಜಾತ್ರೆ, ಹಬ್ಬ, ಮದುವೆ, ಹೊಸ ಮನೆ ಇತ್ಯಾದಿ ನಿರೀಕ್ಷೆಗಳು ನಮ್ಮೆಲ್ಲರ ಮುಂದಿವೆ. ಇದೆಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಸಂಭ್ರಮವನ್ನು ಹೆಚ್ಚಿಸುವುದು ಹಬ್ಬಗಳು ಮತ್ತು ಅದಕ್ಕೆ ಸಿಗುವ ರಜಾದಿನಗಳು. ಅದನ್ನು ನಾವು ಈಗಿಂದಲೇ ಲೆಕ್ಕ ಹಾಕಲು ಆರಂಭಿಸುತ್ತೇವೆ. ಈ ಕೆಳಗೆ ನಾವು 202ರ ಪ್ರಮುಖ ಹಬ್ಬಗಳು ಹಾಗೂ ರಜಾದಿನಗಳ (2024 holidays) ಪಟ್ಟಿಯನ್ನು ನೀಡಲಾಗಿದೆ.
ಜನವರಿ 15, 2024 ರಂದು ಮಕರ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗಿ, ಮಾರ್ಚ್ನಲ್ಲಿ ಶಿವರಾತ್ರಿ ಮತ್ತು ಹೋಳಿ ಹಬ್ಬಗಳಿಂದ ಹಿಡಿದು 2024ರ ಜನವರಿಯಿಂದ ಡಿಸೆಂಬರ್ ವರೆಗಿನ ಎಲ್ಲಾ ಹಬ್ಬಗಳು ಮತ್ತು ದಿನಾಂಕಗಳನ್ನು ನೋಡೋಣ.
ಜನವರಿ
- ಜನವರಿ 15, 2024 (ಸೋಮವಾರ) – ಮಕರ ಸಂಕ್ರಾಂತಿ, ಪೊಂಗಲ್, ಉತ್ತರಾಯಣ
- ಜನವರಿ 17, 2024 (ಮಂಗಳವಾರ) – ಗುರು ಗೋವಿಂದ್ ಸಿಂಗ್ ಜಯಂತಿ
ಫೆಬ್ರವರಿ
- ಫೆಬ್ರವರಿ 14, 2024 (ಬುಧವಾರ) – ವಸಂತ ಪಂಚಮಿ
ಮಾರ್ಚ್
- ಮಾರ್ಚ್ 24, 2024 (ಭಾನುವಾರ) – ವಸಂತ ಪೂರ್ಣಿಮೆ ಅಥವಾ ಕಾಮನ ಹುಣ್ಣಿಮೆ
- ಮಾರ್ಚ್ 25, 2024 (ಸೋಮವಾರ) – ಹೋಳಿ , ಚೈತನ್ಯ ಮಹಾಪ್ರಭು ಜಯಂತಿ, ಚಂದ್ರ ಗ್ರಹಣ
- ಮಾರ್ಚ್ 29, 2024 (ಶುಕ್ರವಾರ) – ಗುಡ್ ಫ್ರೈಡೇ
- ಮಾರ್ಚ್ 31, 2024 (ಭಾನುವಾರ) – ಈಸ್ಟರ್
ಏಪ್ರಿಲ್
- ಏಪ್ರಿಲ್ 9, 2024 (ಮಂಗಳವಾರ) – ಚಂದ್ರಮಾನ ಯುಗಾದಿ
- ಏಪ್ರಿಲ್ 10, 2024 (ಬುಧವಾರ) – ಈದ್-ಅಲ್-ಫಿತರ್, ರಂಜಾನ್
- ಏಪ್ರಿಲ್ 13, 2024 (ಶನಿವಾರ) – ಬೈಸಾಖಿ
- ಏಪ್ರಿಲ್ 14- ಸೌರಮಾನ ಯುಗಾದಿ (ವಿಷು)
- ಏಪ್ರಿಲ್ 17, 2024 (ಬುಧವಾರ) – ಚೈತ್ರ ನವರಾತ್ರಿ, ರಾಮ ನವಮಿ
- ಏಪ್ರಿಲ್ 23, 2024 (ಮಂಗಳವಾರ) – ಹನುಮ ಜಯಂತಿ, ಚೈತ್ರ ಪೂರ್ಣಿಮಾ
ಮೇ
- ಮೇ 10- 2024- (ಶುಕ್ರವಾರ)- ಅಕ್ಷಯ ತೃತೀಯ, ಬಸವ ಜಯಂತಿ
ಜೂನ್
- ಜೂನ್ 17, 2024 (ಸೋಮವಾರ) – ಈದ್-ಅಲ್-ಅಧಾ, ಬಕ್ರೀದ್
ಜುಲೈ
- ಜುಲೈ 8, 2024 (ಸೋಮವಾರ) – ಇಸ್ಲಾಮಿಕ್ ಹೊಸ ವರ್ಷ
- ಜುಲೈ 17, 2024 (ಬುಧವಾರ) – ಮೊಹರಂ
- ಜುಲೈ 21, 2024 (ಭಾನುವಾರ) – ಗುರು ಪೂರ್ಣಿಮೆ, ವ್ಯಾಸ ಪೂರ್ಣಿಮೆ
ಆಗಸ್ಟ್
- ಆಗಸ್ಟ್ 4- 2024 (ಭಾನುವಾರ )- ಭೀಮನ ಅಮವಾಸ್ಯೆ
- ಆಗಸ್ಟ್ 9- 2024 (ಶುಕ್ರವಾರ)- ನಾಗರಪಂಚಮಿ
- ಆಗಸ್ಟ್ 16, 2024 (ಶುಕ್ರವಾರ) ವರಮಹಾಲಕ್ಷ್ಮೀ
- ಆಗಸ್ಟ್ 19, 2024 (ಸೋಮವಾರ) – ರಕ್ಷಾ ಬಂಧನ, ಶ್ರಾವಣ ಪೂರ್ಣಿಮಾ ವ್ರತ,
- ಆಗಸ್ಟ್ 26, 2024 (ಸೋಮವಾರ) – ಜನ್ಮಾಷ್ಟಮಿ
- ಆಗಸ್ಟ್ 27, 2024 (ಮಂಗಳವಾರ) – ಮೊಸರು ಕುಡಿಕೆ
ಸೆಪ್ಟೆಂಬರ್
- ಸೆಪ್ಟೆಂಬರ್ 7, 2024 (ಶನಿವಾರ) – ಗಣೇಶ ಉತ್ಸವ ಪ್ರಾರಂಭ, ಗಣೇಶ ಚತುರ್ಥಿ
- ಸೆಪ್ಟೆಂಬರ್ 15, 2024 (ಭಾನುವಾರ) – ಓಣಂ / ತಿರುವೋಣಂ, ವಾಮನ ಜಯಂತಿ
- ಸೆಪ್ಟೆಂಬರ್ 16, 2024 (ಸೋಮವಾರ) – ಈದ್-ಎ-ಮಿಲಾದ್
- ಸೆಪ್ಟೆಂಬರ್ 17, 2024 (ಮಂಗಳವಾರ) – ಅನಂತ ಚತುರ್ದಶಿ, ಗಣೇಶ ವಿಸರ್ಜನೆ
- ಸೆಪ್ಟೆಂಬರ್ 18, 2024 (ಬುಧವಾರ) – ಪಿತೃ ಪಕ್ಷ ಪ್ರಾರಂಭ, ಚಂದ್ರ ಗ್ರಹಣ
ಅಕ್ಟೋಬರ್
- ಅಕ್ಟೋಬರ್ 2, 2024 (ಬುಧವಾರ) ಮಹಾಲಯ ಅಮವಾಸ್ಯೆ
- ಅಕ್ಟೋಬರ್ 3, 2024 (ಗುರುವಾರ) – ನವರಾತ್ರಿ ಆರಂಭ
- ಅಕ್ಟೋಬರ್ 11, 2024 (ಶುಕ್ರವಾರ) – ಆಯುಧ ಪೂಜೆ ದುರ್ಗಾ ಮಹಾ ನವಮಿ ಪೂಜೆ, ದುರ್ಗಾ ಮಹಾ ಅಷ್ಟಮಿ ಪೂಜೆ
- ಅಕ್ಟೋಬರ್ 12, 2024 (ಶನಿವಾರ) – ದಸರಾ, ವಿಜಯ ದಶಮಿ
- ಅಕ್ಟೋಬರ್ 20, 2024 (ಭಾನುವಾರ) – ಕರ್ವಾ ಚೌತ್
- ಅಕ್ಟೋಬರ್ 29, 2024 (ಮಂಗಳವಾರ) – ಧಂತೇರಸ್, ಧನ ತ್ರಯೋದಶಿ
- ಅಕ್ಟೋಬರ್ 31ರಿಂದ ನವೆಂಬರ್2ರವರೆ 2024 (ಗುರುವಾರ) – ದೀಪಾವಳಿ (ನವೆಂಬರ್ 31ರಂದು ನರಕ ಚತುರ್ದಶಿ)
ಇದನ್ನೂ ಓದಿ : Gas geyser leak : ಗ್ಯಾಸ್ ಗೀಸರ್ ಅಪಾಯಕಾರಿ ಯಾಕೆ? ಮುನ್ನೆಚ್ಚರಿಕೆ ವಹಿಸುವುದು ಹೇಗೆ?
ನವೆಂಬರ್
- ನವೆಂಬರ್ 1 , 2024 (ಶುಕ್ರವಾರ) ಅಮವಾಸ್ಯೆ (ಧನಲಕ್ಷ್ಮೀ ಪೂಜೆ)
- ನವೆಂಬರ್ 2- 2024 (ಶನಿವಾರ) ಬಲಿಪಾಡ್ಯಮಿ
ಡಿಸೆಂಬರ್
ಡಿಸೆಂಬರ್ 25, 2024 (ಡಿಸೆಂಬರ್)- ಕ್ರಿಸ್ಮಸ್