KCET 2022: ವೃತ್ತಿಶಿಕ್ಷಣ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಪರೀಕ್ಷೆ ಬರೆಯುವಾಗ ಹಿಜಾಬ್ ಧರಿಸುವಂತಿಲ್ಲ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬರುವವರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಜೂನ್ 16, 17, 18 ರಂದು KCET 2022 ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲು ಹಿಜಾಬ್ ತೆಗೆದಿಡಬೇಕು. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲಿ ಸಿಇಟಿ ಪರೀಕ್ಷೆಯೂ ನಡೆಯಲಿದೆ. ಪರೀಕ್ಷೆಗೆ ಯಾವುದೇ ನಿರ್ದಿಷ್ಟ ಸಮವಸ್ತ್ರವನ್ನು ನಿಗದಿ ಮಾಡಿಲ್ಲ. ಆದರೆ ಸರ್ಕಾರದ ವಸ್ತ್ರ ನಿಯಮವನ್ನು ನಾವು ಪಾಲಿಸುತ್ತೇವೆ. ಯಾವುದೇ ಧರ್ಮ ವಸ್ತ್ರ ಗಳನ್ನೂ ಹಾಕಿಕೊಂಡು ಪರೀಕ್ಷೆಗೆ ಬರುವಂತಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಹೇಳಿದ್ದಾರೆ.
ಇತ್ತೀಚಿಗೆ ಕೇಳಿಬಂದ ಪಿಎಸ್ಐ ಪರೀಕ್ಷೆ ಅಕ್ರಮ ಬಳಿಕ ಎಲ್ಲ ಇಲಾಖೆಗಳೂ ಅಲರ್ಟ್ ಆಗಿವೆ. ಸಿಇಟಿ ಪರೀಕ್ಷೆಗೆ ಮಾಂಗಲ್ಯ ಸರ, ಮೂಗುತ್ತಿ, ಓಲೆ, ಸರ, ಬಳೆ ಬ್ಯಾನ್ ಮಾಡಲಾಗಿದೆ. ವಾಚ್, ಕ್ಯಾಲ್ಕುಲೇಟರ್‌ಗಳಿಗೂ ನಿಷೇಧ ಹೇರಲಾಗಿದೆ. ನೀಟ್ ಮಾದರಿಯಲ್ಲೇ ಸಿಇಟಿ ಪರೀಕ್ಷೆ ನಡೆಯಲಿದೆ. ಸಿಇಟಿ ಪರೀಕ್ಷೆ ಕೇಂದ್ರಗಳ ಬಳಿ ಮೊದಲ ಬಾರಿಗೆ ಮೊಬೈಲ್ ಜಾಮರ್ ಹಾಗೂ ಮೆಟಲ್ ಡಿಟೆಕ್ಟರ್‌ಗಳನ್ನೂ ಅಳವಡಿಕೆಗೆ ಪ್ಲಾನ್ ಮಾಡಲಾಗಿದೆ.
KCET 2022 ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗೆದೆ. ಪರೀಕ್ಷಾ ದಿನದಂದು ಕೇಂದ್ರಗಳ ಸುತ್ತ ಮುತ್ತಲು ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವುದು ಕಡ್ಡಾಯ ಎಂದು ರಮ್ಯ ತಿಳಿಸಿದ್ದಾರೆ.
ಇದನ್ನೂ ಓದಿ|PSI Scam ಮುಖಭಂಗದ ನಂತರ ಇದೀಗ ಶಿಕ್ಷಕ ಪರೀಕ್ಷೆಯಲ್ಲಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ
ಈ ಬಾರಿ ಒಟ್ಟು. 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 1.4 ಲಕ್ಷ ಪುರುಷ ವಿದ್ಯಾರ್ಥಿಗಳು 1.7 ಲಕ್ಷ ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಸಮಯ: KCET 2022 ಪರೀಕ್ಷೆಯು ಬೆಳಗ್ಗೆ 10:30ರಿಂದ 11:50ರವರೆಗೆ ಹಾಗೂ ಮಧ್ಯಾಹ್ನ 2:30ರಿಂದ 3:50ರವರೆಗೆ ನಡೆಯಲಿದೆ.
- ಜೂನ್ 16ರ ಬೆಳಗ್ಗೆ 10:30ಕ್ಕೆ ಜೀವಶಾಸ್ತ್ರ
- ಜೂನ್ 16ರ ಮಧ್ಯಾಹ್ನ 2:30ಕ್ಕೆ ಗಣಿತ
- ಜೂನ್ 17ರ ಬೆಳಗ್ಗೆ 10:30ಕ್ಕೆ ಭೌತಶಾಸ್ತ್ರ
ಇದನ್ನೂ ಓದಿ| CET EXAM: ವೃತ್ತಿಪರ ಕೋರ್ಸ್‌ಗಳಿಗೆ ಜೂನ್ 16 ಮತ್ತು 18ಕ್ಕೆ ಸಿಇಟಿ ಪರೀಕ್ಷೆ