ಶಿವಮೊಗ್ಗ: ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕರ್ನಾಟಕದ ವತಿಯಿಂದ 3ನೇ ತ್ರೈವಾರ್ಷಿಕ ಸಮ್ಮೇಳನವನ್ನು (Hindu Jagran Sammelan) ಡಿ. 25ರಂದು ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತ ಸಂಚಾಲಕ ದೊ. ಕೇಶವಮೂರ್ತಿ ತಿಳಿಸಿದ್ದಾರೆ.
ಸಮ್ಮೇಳನದ ಬಗ್ಗೆ ಶುಕ್ರವಾರ (ಡಿ.೨೩) ಮಾಹಿತಿ ನೀಡಿದ ಅವರು, ಮೂರು ವರ್ಷಕ್ಕೊಮ್ಮೆ ನಡೆಯುವ ಈ ಪ್ರಾಂತ್ ಸಮ್ಮೇಳನ ಈ ಬಾರಿ ಶಿವಮೊಗ್ಗದಲ್ಲಿ ನಡೆಯಲಿದೆ. ಇದಕ್ಕಾಗಿ 18 ಜಿಲ್ಲೆಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕುವೆಂಪು ರಂಗಮಂದಿರದ ಹಿಂಭಾಗದ ಎನ್ಇಎಸ್ ಕಾಲೇಜು ಮೈದಾನದಲ್ಲಿ ಡಿ. 25ರಂದು ಬೆಳಗ್ಗೆ 10 ಗಂಟೆಗೆ ಸಮ್ಮೇಳನ ಉದ್ಘಾಟನೆಯಾಗಲಿದೆ. ಸಂಜೆ 4.30 ಕ್ಕೆ ಪ್ರಾಂತೀಯ ಕಾರ್ಯಕರ್ತರ ಸಮಾಗಮ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಮಮನೋಹರ ಶಾಂತವೇರಿ ಭಾಗವಹಿಸಲಿದ್ದು, ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದು ತಿಳಿಸಿದರು.
ಇದನ್ನೂ ಓದಿ | ಚೀನಾದಲ್ಲಿ ಕೊರೊನಾ ಅಬ್ಬರ; ಬೀಜಿಂಗ್ಗೆ ಜ್ವರದ ಔಷಧ ಕಳಿಸಲು ಸಿದ್ಧ ಎಂದ ಭಾರತೀಯ ವಿದೇಶಾಂಗ ಸಚಿವಾಲಯ
ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಸವಾಲುಗಳು ಮತ್ತು ಪರಿಹಾರಗಳು ಹಾಗೂ ಸಂಘಟನೆಯ ಕುರಿತಂತೆ ಗೋಷ್ಠಿಗಳು, ಚರ್ಚೆಗಳು ನಡೆಯಲಿವೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಕ್ಕೆ ಬಂದ ಪ್ರತಿನಿಧಿಗಳು ಹಾಗೂ ಹಿಂದೂ ಬಂಧುಗಳ ಶೋಭಾ ಯಾತ್ರೆ ನಡೆಯಲಿದೆ. ಈ ಯಾತ್ರೆಯು ಸಾವರ್ಕರ್ ರಸ್ತೆ, ಗಾಂಧಿ ಬಜಾರ್, ನೆಹರು ರಸ್ತೆ, ಗೋಪಿ ಸರ್ಕಲ್ ನಲ್ಲಿ ಪಥ ಸಂಚಲನದ ಮೂಲಕ ಸಾಗಿ ಮತ್ತೆ ಎನ್ಇಎಸ್ ಕಾಲೇಜು ಮೈದಾನ ಸೇರಲಿದೆ. ಶೋಭಾಯಾತ್ರೆ ಬಳಿಕ ಸಂಜೆ 4.30ಕ್ಕೆ ಎನ್ಇಎಸ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | Elephant attack | ನಿಲ್ಲದ ಕಾಡಾನೆ ಹಾವಳಿ; ಆಹಾರ ಅರಸಿ ನಾಡಿಗೆ ಬರುತ್ತಿರುವ ಗಜಪಡೆ