Site icon Vistara News

The Kerala Story: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿ: ಹಿಂದು ಜನಜಾಗೃತಿ ಸಮಿತಿ

Hindu Janajagruti Samiti urges state government to declare tax exemption for 'The Kerala Story'

ಬೆಂಗಳೂರು: ರಾಜ್ಯದಲ್ಲೂ ಸಾವಿರಾರು ಹಿಂದು ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ಹೀಗಾಗಿ ಲವ್‌ ಜಿಹಾದ್‌ ಕುರಿತು ಜಾಗೃತಿಯ ಬೆಳಕು ಚೆಲ್ಲುವ ‘ದಿ ಕೇರಳ ಸ್ಟೋರಿ’ (The Kerala Story) ಚಲನಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹಿಂದು ಜನಜಾಗೃತಿ ಸಮಿತಿ ಮನವಿ ಮಾಡಿದೆ.

ಶುಕ್ರವಾರವಷ್ಟೇ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಬಿಡುಗಡೆಯಾಗಿದೆ. ಇದರಲ್ಲಿ ಕೇರಳದಲ್ಲಿ 32,000 ಹಿಂದು ಯುವತಿಯರನ್ನು ಲವ್ ಜಿಹಾದ್‌ ಮೂಲಕ ಕಪಟ, ವಂಚನೆ, ಮೋಸದಿಂದ ಹೇಗೆ ಐಎಸ್‌ಐಎಸ್ ಭಯೋತ್ಪಾದಕರನ್ನಾಗಿ ಮಾಡಲಾಗಿದೆ ಎಂಬ ಸತ್ಯ ಘಟನೆಯನ್ನು ಚಿತ್ರಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿಯೂ ಸಾವಿರಾರು ಹಿಂದು ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.

ಇದನ್ನೂ ಓದಿ | The Kerala Story: ದಿ ಕೇರಳ ಸ್ಟೋರಿ ಸಿನಿಮಾ ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತ; ಎಲ್ಲರೂ ನೋಡಿ ಎಂದ ಸಿಎಂ ಚೌಹಾಣ್​

ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು, ದಕ್ಷಿಣ ಕನ್ನಡ ಈ ಜಿಲ್ಲೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಈ ಜಿಹಾದ್ ನಡೆಯುತ್ತಿರುವುದು ಎನ್‌ಐಎ ತನಿಖೆಯಲ್ಲೂ ಬೆಳಕಿಗೆ ಬಂದಿದೆ. ಆದ್ದರಿಂದ ರಾಜ್ಯದ ಯುವಕರು, ಹಿಂದು ಯುವತಿಯರು ಈ ಜಿಹಾದ್‌ನ ಬಗ್ಗೆ ಜಾಗೃತರಾಗಿ ಲವ್ ಜಿಹಾದ್ ತಡೆಯಲು ಪ್ರಯತ್ನಿಸುವುದು ಅತ್ಯವಶ್ಯಕವಾಗಿದೆ. ಈಗಾಗಲೇ ಮಧ್ಯಪ್ರದೇಶ ಸರ್ಕಾರವು ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲೂ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಕೋರಿದೆ.

Exit mobile version