Site icon Vistara News

Shimogga News | ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಇಂದು: ಪೊಲೀಸ್ ಬಿಗಿ ಬಂದೋಬಸ್ತ್‌

ವ್ಹೀಲಿಂಗ್‌

ಶಿವಮೊಗ್ಗ: ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಅಂಗವಾಗಿ ಶುಕ್ರವಾರ (ಸೆ.9) ಬೆಳಗ್ಗೆ 10ಕ್ಕೆ ರಾಜಬೀದಿ ಉತ್ಸವ ಆರಂಭಗೊಳ್ಳಲಿದೆ. ರಾತ್ರಿಯವರೆಗೂ ನಡೆಯಲಿರುವ ವಿಸರ್ಜನಾ ಪೂರ್ವ ಮೆರವಣಿಗೆ ಅಂಗವಾಗಿ ನಗರವಿಡೀ (Shimogga News) ಕೇಸರಿಮಯವಾಗಲಿದೆ. ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎರಡು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸೇರಿದಂತೆ, 19 ಪೊಲೀಸ್ ಉಪಾಧೀಕ್ಷಕರು, 46 ಪೊಲೀಸ್‌ ನಿರೀಕ್ಷಕರು, 71 ಪೊಲೀಸ್ ಉಪನಿರೀಕ್ಷಕರು, 1970 ಪೊಲೀಸ್ ಸಿಬ್ಬಂದಿ, 700 ಗೃಹರಕ್ಷಕ ದಳ ಸಿಬ್ಬಂದಿ, 1 ಆರ್‌ಎಎಫ್ ಕಂಪನಿ (200 ಅಧಿಕಾರಿ ಮತ್ತು ಸಿಬ್ಬಂದಿ), 15 ಕೆಎಸ್ಆರ್‌ಪಿ ತುಕಡಿಯ (300 ಅಧಿಕಾರಿ ಮತ್ತು ಸಿಬ್ಬಂದಿ) ಮತ್ತು 15 ಡಿಎಆರ್ ತುಕಡಿ (120 ಅಧಿಕಾರಿ ಹಾಗೂ ಸಿಬ್ಬಂದಿ)ಯನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ| ಶಿಕಾರಿಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಟಿಪ್ಪು ಸಾಂಗ್; ಬಾವುಟ ಹಿಡಿದು ಹೆಜ್ಜೆ ಹಾಕಿದ ಯುವಕರು

Exit mobile version