Site icon Vistara News

Hindu Samavesha | ಮತ್ತೊಂದು ಹಿಂದು ಸಮಾವೇಶಕ್ಕೆ ಸಜ್ಜಾದ ಮಲೆನಾಡು; ಸಂಪೂರ್ಣ ಕೇಸರಿಮಯವಾದ ಶಿವಮೊಗ್ಗ

Hindu samavesha shimoga

ಶಿವಮೊಗ್ಗ: ಮಲೆನಾಡು ಜಿಲ್ಲೆ ಶಿವಮೊಗ್ಗವೀಗ ಮತ್ತೊಂದು ಹಿಂದು ಸಮಾವೇಶಕ್ಕೆ (Hindu Samavesha) ಸಜ್ಜಾಗಿದೆ. ಈಗಾಗಲೇ ಕೋಮು ಸಂಘರ್ಷದ ಮೂಲಕ ಇಡೀ ದೇಶದಲ್ಲಿ ಗುರುತಿಸಿಕೊಂಡಿರುವ ಶಿವಮೊಗ್ಗವು ಹಿಂದುಗಳ ಒಗ್ಗೂಡುವಿಕೆಗೆ ಮುಂದಾಗಿದೆ. ಶಿವಮೊಗ್ಗ ಇದೀಗ ಸಂಪೂರ್ಣವಾಗಿ ಕೇಸರಿಮಯವಾಗಿದೆ.

ಹಿಂದು ಜಾಗರಣ ವೇದಿಕೆಯ ದಕ್ಷಿಣ ಕರ್ನಾಟಕದ ವತಿಯಿಂದ 3ನೇ ತ್ರೈವಾರ್ಷಿಕ ಸಮ್ಮೇಳನವನ್ನು ಭಾನುವಾರ (ಡಿ. 25) ಇಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ನಗರದ ಎನ್.ಇ.ಎಸ್. ಕಾಲೇಜು ಮೈದಾನದಲ್ಲಿ ಹಿಂದು ಹುಲಿಗಳ ಆರ್ಭಟಕ್ಕೆ ಬೃಹತ್ ವೇದಿಕೆ ಸಜ್ಜಾಗಿದೆ. 3 ವರ್ಷಕ್ಕೊಮ್ಮೆ ನಡೆಯುವ ಈ ಪ್ರಾಂತ ಸಮ್ಮೇಳನ ಈ ಬಾರಿ ಶಿವಮೊಗ್ಗದಲ್ಲಿ ನಡೆಯಲಿದೆ. ಇದಕ್ಕಾಗಿ 18 ಜಿಲ್ಲೆಗಳಿಂದ 4 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಲಿದ್ದಾರೆ.

ಶಿವಮೊಗ್ಗದಲ್ಲಿ ಕಳೆದ ಫೆ. ೨೦ರಂದು ಹಿಂದು ಹರ್ಷನ ಕಗ್ಗೊಲೆ ಬಳಿಕ ವಿವಿಧ ಆಯಾಮಗಳಲ್ಲಿ ಹಿಂದುಗಳ ಒಗ್ಗೂಡುವಿಕೆಗೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿರುವ ಹಿಂದು ಸಂಘಟನೆಯ ಮುಖಂಡರು, ಇದೀಗ ಹಿಂದೂ ಜಾಗರಣ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. ಇತ್ತೀಚೆಗಷ್ಟೇ ವೀರ ಸಾವರ್ಕರ್ ಅವರ ಭಾವಚಿತ್ರದ ವಿವಾದದ ಬಳಿಕ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರನ್ನು ಕರೆಸಿ, ವಿರಾಟ ಸಮಾವೇಶ ನಡೆಸಲಾಗಿತ್ತು. ಇದೀಗ ಮತ್ತೊಂದು ಸಮಾವೇಶ ನಡೆಸಲು ಇಡೀ ಶಿವಮೊಗ್ಗ ಸಿದ್ಧವಾಗಿದೆ.

ಇದನ್ನೂ ಓದಿ | Anil Kapoor | ಅನಿಲ್‌ ಕಪೂರ್‌ ಜನುಮ ದಿನಕ್ಕೆ ಸ್ಪೆಷಲ್‌ ಫೋಟೊಗಳನ್ನು ಹಂಚಿಕೊಂಡ ಸೋನಂ ಕಪೂರ್‌!

ಹಿಂದು ಜಾಗರಣಾ ಸಮಾವೇಶಕ್ಕೆ ಬೆಳಗ್ಗೆ ಚಾಲನೆ ದೊರೆಯಲಿದ್ದು, ಮಧ್ಯಾಹ್ನ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ, ಶೋಭಾಯಾತ್ರೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಅಗತ್ಯ ತಯಾರಿ ನಡೆಸಲಾಗಿದೆ. ಸಂಜೆ ಸಾರ್ವಜನಿಕ ಸಭೆ ಕೂಡ ಆಯೋಜಿಸಲಾಗಿದ್ದು, ಮುಖ್ಯ ಅತಿಥಿಯಾಗಿ ಉದ್ಯಮಿ ರಾಮ್ ಮನೋಹರ್ ಶಾಂತವೇರಿ ಆಗಮಿಸುತ್ತಿದ್ದಾರೆ. ಭೋಪಾಲ್ ಸಂಸದೆ ಮತ್ತು ಪ್ರಖರ ವಾಗ್ಮಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳು, ಪರಿಹಾರ ಹಾಗೂ ಸಂಘಟನೆ ಕುರಿತಂತೆ ಚರ್ಚೆ ಸಹ ನಡೆಯಲಿದೆ. ಮುಂಬರುವ ದಿನಗಳಲ್ಲಿ ಹಿಂದುಗಳು ಹೇಗಿರಬೇಕೆಂಬ ಬಗ್ಗೆ ಈ ಸಮಾವೇಶ ಕಿವಿ ಮಾತು ಹೇಳಲು ಸಜ್ಜಾಗಿದೆ.

ಇದನ್ನೂ ಓದಿ | Dog menace | ಒಂದೇ ಏರಿಯಾದ 21 ಜನರಿಗೆ ಕಚ್ಚಿದ ಹುಚ್ಚುನಾಯಿ; ಹುಡುಕಿ ಕೊಂದು ಹಾಕಿದ ಸ್ಥಳೀಯರು

ಹಿಂದು ಜಾಗರಣ ಸಮಾವೇಶವನ್ನು ವ್ಯವಸ್ಥಿತವಾಗಿ ನಡೆಸಲು ಸಂಘಟನೆಯ ಪ್ರಮುಖರು ಸಕಲ ರೀತಿಯಲ್ಲೂ ಸಿದ್ಧವಾಗಿದ್ದು, ಸಕಲ ಸಮಾಜದವರ ಒಗ್ಗೂಡುವಿಕೆಗೆ ಈ ಪ್ರಾಂತ ಸಮಾವೇಶಕ್ಕೆ ತಯಾರಿ ನಡೆಸಲಾಗಿದೆ. ಶಿವಮೊಗ್ಗದಲ್ಲಿ ಈ ಹಿಂದೆ ಕೋಮು ಗಲಭೆಗಳು ನಡೆದಿರುವ ಹಿನ್ನೆಲೆಯಲ್ಲಿ, ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಪಹರೆ ಹಾಕಲು ಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಇದನ್ನೂ ಓದಿ | Murugesh Nirani | ಯತ್ನಾಳ್‌ ಕಳೆದ ವಾರ ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದಿದ್ದರು ಎಂದ ಮುರುಗೇಶ್‌ ನಿರಾಣಿ!

Exit mobile version