Site icon Vistara News

Chitradurga News: ಗೃಹಲಕ್ಷ್ಮಿ ಸ್ಕೀಮ್‌ಗೆ ನಾಳೆ ಚಾಲನೆ; ಹಿರಿಯೂರಿನಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮ ನೀಡಿ ಆಹ್ವಾನ

Invite Gruhalakshmi scheme programme for beneficiaries at Hiriyur

ಹಿರಿಯೂರು: ಕಾಂಗ್ರೆಸ್ ಸರ್ಕಾರದ (Congress Government) ಮಹತ್ವಾಕಾಂಕ್ಷೆಯ 4ನೇ ಗ್ಯಾರಂಟಿಯಾದ ಕುಟುಂಬದ ಒಡತಿಗೆ ಪ್ರತಿ ತಿಂಗಳು 2000 ರೂ ನೀಡುವ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಬುಧವಾರ ಮೈಸೂರಿನಲ್ಲಿ (Mysore) ಚಾಲನೆ ದೊರೆಯಲಿದ್ದು, ಇತ್ತ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ (Hiriyur) ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಹಿರಿಯೂರು ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಮನೆಯ ಯಜಮಾನಿಯನ್ನು ಭೇಟಿ ಮಾಡಿ “ಅರಿಶಿನ ಕುಂಕುಮ ನೀಡಿ” ಅರ್ಹ ಫಲಾನುಭವಿ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಇದನ್ನೂ ಓದಿ: Mirabai Chanu: ವಿಶ್ವ ಚಾಂಪಿಯನ್​ಶಿಫ್​ನಲ್ಲಿ​ ಭಾರ ಎತ್ತಲ್ಲ ಮೀರಾಬಾಯಿ ಚಾನು; ಕಾರಣ ಏನು?

ಹಿರಿಯೂರು ತಾಲ್ಲೂಕಿನ 31 ಗ್ರಾಮ ಪಂಚಾಯಿತಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದಾರೆ. ಇದಲ್ಲದೆ ಮನೆಯ ಮುಂಭಾಗದಲ್ಲಿ ನಾನು ಯಜಮಾನಿ, ನಾನು ಗೃಹಲಕ್ಷ್ಮೀ, ನಾನು ನಾಯಕಿ ಹೀಗೆ ರಂಗೋಲಿ ಮೂಲಕ ಮನೆಯ ಅಂಗಳದಲ್ಲಿ ಬರೆದುಕೊಂಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Asia Cup 2023: ಸಚಿನ್​,ಧೋನಿ ಸೇರಿ ಹಲವು ದಿಗ್ಗಜರ ದಾಖಲೆ ಮುರಿಯಲು ಸಜ್ಜಾದ ವಿರಾಟ್​,ರೋಹಿತ್​

ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿ ಮಹಿಳೆಯರಿಗೆ ಅರಿಶಿನ, ಕುಂಕುಮ ನೀಡಿ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿಸುತ್ತಿದ್ದಾರೆ.

Exit mobile version