Site icon Vistara News

Holi 2023: ಕಾರವಾರದಲ್ಲಿ ಸಡಗರದ ಹೋಳಿ; ಸಮುದ್ರ ಸ್ನಾನದಲ್ಲಿ ಮಿಂದೆದ್ದ ಜನತೆ

Karwar Holi

#image_title

ಸಂದೀಪ ಸಾಗರ, ಕಾರವಾರ
ರಾಜ್ಯದೆಲ್ಲೆಡೆ ಹೋಳಿ ಸಂಭ್ರಮ (Holi 2023) ಮನೆ ಮಾಡಿದಂತೆ ಕಡಲ ನಗರಿ ಕಾರವಾರದಲ್ಲಿಯೂ ಮಂಗಳವಾರ (ಮಾ. 7) ಬಣ್ಣಗಳ ಹಬ್ಬವನ್ನು ಜೋರಾಗಿಯೇ ಆಚರಿಸಲಾಯಿತು. ಮನೆಯವರೆಲ್ಲ ಪ್ರೀತಿ ಪಾತ್ರರಿಗೆ ಬಣ್ಣ ಎರಚಿ ಪರಸ್ಪರ ಶುಭಾಶಯ ಕೋರಿದರು. ಇನ್ನೂ ಕೆಲ ಯುವಕ, ಯುವತಿಯರು ಅಲ್ಲಲ್ಲಿ ಡಿಜೆ ಹಾಡಿಗೆ ಹೆಜ್ಜೆ ಹಾಕಿ ಹೋಳಿಯನ್ನು ಸಂಭ್ರಮಿಸಿದರು.

ಕರ್ನಾಟಕದ ಕಾಶ್ಮೀರ ಕಾರವಾರದಲ್ಲಿ ಬೆಳಗ್ಗೆಯಿಂದಲೇ ಹಿರಿಯರು ಕಿರಿಯರೆನ್ನದೇ ಪ್ರೀತಿ ಪಾತ್ರರಿಗೆ ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಇನ್ನೂ ಕೆಲವೆಡೆ ಆಯಾ ಸಮುದಾಯದವರು ಆಯೋಜಿಸಿದ್ದ ಹೋಳಿ ಆಚರಣೆಯನ್ನು ಕಲರ್ ಪುಲ್ ಆಗಿ ಆಚರಿಸಿದರು. ಹೋಳಿ ಪ್ರಯುಕ್ತ ಮಕ್ಕಳು ಪಿಚಕಾರಿಗಳನ್ನು ಹಿಡಿದು ರಸ್ತೆಯಲ್ಲಿ ಹೋಗಿ ಬರುವವರ ಮೇಲೆ ಬಣ್ಣದ ನೀರು ಎರಚಿ ಸಂಭ್ರಮಿಸಿದರು.

ನಗರದ ಕೋಡಿಭಾಗದಲ್ಲಿ ಯುವಕರ ಗುಂಪೊಂದು ರಸ್ತೆ ಬದಿ ಡಿಜೆ ಇಟ್ಟು, ಒಟ್ಟಾಗಿ ಬಣ್ಣ ಹಚ್ಚಿ ಡ್ಯಾನ್ಸ್ ಮಾಡುವ ಮೂಲಕ ಎಂಜಾಯ್ ಮಾಡಿದರು. ಇದಲ್ಲದೇ ಕಾಜುಭಾಗದ ಗುಜರಾತಿ ತಾಂಡಾದಲ್ಲಿ ಗುಜರಾತಿಗಳು ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡಿದರೆ, ಯುವತಿಯರು ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

ಇದನ್ನೂ ಓದಿ: ‌PM Modi: ಮಾ.12ರಂದು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ರದ್ದು; ಇದು ಮೋದಿ ಭೇಟಿ ಎಫೆಕ್ಟ್

ಹೋಳಿ ಹುಣ್ಣಿಮೆ ಹಿನ್ನೆಲೆಯಲ್ಲಿ ಸೋಮವಾರ (ಮಾ.6) ಕಾಮ ದಹನ ಮಾಡಲಾಯಿತು. ಕಾರವಾರದಲ್ಲಿ ಹೋಳಿ ಬಳಿಕ ಸಮುದ್ರ ಸ್ನಾನ ಮಾಡುವುದು ಸಂಪ್ರದಾಯ.‌ ಹೋಳಿಯಾಡಿದ ಬಳಿಕ ಜನರು ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರಕ್ಕೆ ಆಗಮಿಸಿ ಸಮುದ್ರ ಸ್ನಾನ ಮಾಡಿ ಖುಷಿಪಟ್ಟರು. ಮುಂಜಾಗ್ರತಾ ಕ್ರಮವಾಗಿ ಕಡಲ ತೀರದಲ್ಲಿ ಪೊಲೀಸರು, ಕರಾವಳಿ ಕಾವಲು ಪಡೆ ಸಿಬ್ಬಂದಿ ಬೋಟ್ ಮೂಲಕ ಗಸ್ತು ತಿರುಗುತ್ತಿದ್ದರು. ಒಟ್ಟಿನಲ್ಲಿ ಕರಾವಳಿ ಜನತೆ ಬಣ್ಣದ ಹಬ್ಬವನ್ನು ಸಂಭ್ರಮಿಸಿದರು.

Exit mobile version