Site icon Vistara News

Mukta Jinadatta Novel release : ಮುಕ್ತ ಜಿನದತ್ತ ಕಾದಂಬರಿ ಬಿಡುಗಡೆ, ಶ್ರದ್ಧಾ ಭಕ್ತಿ ಜಾಗೃತವಾಗಲಿ ಎಂದು ಹರಸಿದ ಹೊಂಬುಜ ಶ್ರೀಗಳು

Mukta jinadatta book release

#image_title

ರಿಪ್ಪನ್ ಪೇಟೆ: ಸಾವಿರಾರು ವರ್ಷಗಳ ಪೂರ್ವದಲ್ಲಿ ಹೊಂಬುಜ ಕ್ಷೇತ್ರದ ಅಧಿದೇವತೆ ಮಾತೆ ಶ್ರೀ ಪದ್ಮಾವತಿ ಅಮ್ಮನವರು ಇಲ್ಲಿಗೆ ಬಂದು ನೆಲೆನಿಂತು ಈ ನಾಡನ್ನು ಸುಭಿಕ್ಷಗೊಳಿಸಲು ಜಿನದತ್ತರಾಯನು ಕಾರಣವಾದಂತೆ, ಅಮ್ಮನವರ ಚರಿತ್ರೆಯ ಹಿನ್ನೆಲೆಯಲ್ಲಿ ರಚನೆಗೊಂಡ ʻಮುಕ್ತ ಜಿನದತ್ತʼ (Mukta Jinadatta Novel) ಐತಿಹಾಸಿಕ ಕಾದಂಬರಿಯು ಜನಮಾನಸದಲ್ಲಿ ಅಮ್ಮನವರ ಬಗೆಗಿನ ಶ್ರದ್ಧಾ-ಭಕ್ತಿಗಳು ಜಾಗೃತಿಗೆ ಕಾರಣವಾಗಲಿ ಎಂದು ಶ್ರೀ ಹೊಂಬುಜ ಜೈನ ಮಠದ ಪೀಠಾಧಿಕಾರಿಗಳಾದ ಜಗದ್ಗುರು ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಹರಸಿದರು. ಕಾದಂಬರಿಯ ಓದು ಜನಹಿತ ಕೇಂದ್ರಿತ ಪ್ರಗತಿ ಸಾಧ್ಯವಾಗಲು ಕಾರಣವಾಗಲಿ ಎಂದು ಅಪೇಕ್ಷಿಸಿದರು.

ಕಾರ್ಕಳದ ನಿವಾಸಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿವೃತ್ತ ಅಧಿಕಾರಿಯಾದ ಜಯಕೀರ್ತಿ ಎಚ್. ರವರು ರಚಿಸಿ ಪ್ರಕಟಿಸಿರುವ ʻಮುಕ್ತ ಜಿನದತ್ತʼ ಐತಿಹಾಸಿಕ ಕಾದಂಬರಿಯನ್ನು ಅವರು ಶ್ರೀಮಠದಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು

ಈ ಕೃತಿಗೆ ಎಲ್ಲೆಡೆ ಪ್ರಶಂಸೆ, ಮನ್ನಣೆ ದೊರೆಯಲಿ; ಲೇಖಕರಿಂದ ಇನ್ನು ಹೆಚ್ಚಿನ ಕೃತಿಗಳು ಹೊರಬರಲಿ; ಜನರಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಯಲಿ ಎಂದು ಹಾರೈಸಿದರು. ಲೇಖಕ ಜಯಕೀರ್ತಿ ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಮಗದುಮ್ಮ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ : Aamir Khan: ಜೈನ ಧರ್ಮದ ತತ್ವ ಪರಿಪಾಲನೆಯಲ್ಲಿರುವ ನಟ ಆಮಿರ್‌ ಖಾನ್‌; ಪ್ರಾರ್ಥನಾ ಸಭೆಯಲ್ಲೂ ಭಾಗಿ!

Exit mobile version