Site icon Vistara News

Honest Auto driver | ವೈದ್ಯೆ ಮರೆತು ಹೋಗಿದ್ದ ವೀಸಾ, ಪಾಸ್‌ಪೋರ್ಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ‌

ಬೆಂಗಳೂರು: ಪ್ರಯಾಣಿಕರ ಜತೆ ಉಡಾಫೆ ವರ್ತನೆ, ಮೀಟರ್‌ಗಿಂತ ಹೆಚ್ಚಿನ ಹಣ ವಸೂಲಿ, ಕರೆದ ಸ್ಥಳಕ್ಕೆ ಬರುವುದಿಲ್ಲ ಎಂಬುದು ಆಟೋ ಚಾಲಕರ ವಿರುದ್ಧ ಇರುವ ಸಾಮಾನ್ಯ ದೂರುಗಳು. ಇದೆಲ್ಲದರ ನಡುವೆ ಹಲವು ಆಟೋ ಚಾಲಕರು ಪ್ರಾಮಾಣಿಕತೆ (Honest Auto driver), ನ್ಯಾಯ, ನೀತಿ, ಆದರ್ಶಗಳನ್ನಿಟ್ಟುಕೊಂಡು ಬದುಕುತ್ತಿದ್ದಾರೆ.

ಅನಿವಾಸಿ ಭಾರತೀಯ ವೈದ್ಯೆಯೊಬ್ಬರು ನಗರದ ಗಾಂಧಿ ಬಜಾರ್‌ನಲ್ಲಿ ಆಟೋದಲ್ಲಿ ಬಿಟ್ಟು ಹೋಗಿದ್ದ ಪರ್ಸ್ ಅನ್ನು ವಾಪಸ್ ಅವರಿಗೆ ಸೇರಿಸುವ ಮೂಲಕ ಆಟೋ ಚಾಲಕರೊಬ್ಬರು ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ.

ಅಮೆರಿಕದಲ್ಲಿ ವೈದ್ಯೆಯಾಗಿರುವ ಡಾ. ಜ್ಯೋತಿ ಮೆಕೆಪಟ್ಟಿ ಎನ್ನುವವರು ಬೆಂಗಳೂರಿಗೆ ಬಂದಿದ್ದರು. ಜ್ಯೋತಿ ಗಾಂಧಿ ನಗರದಿಂದ ಸಂಬಂಧಿಕರ ಮನೆಗೆ ಆಟೋದಲ್ಲಿ ತೆರಳಿದ್ದರು. ಕಸ್ತೂರಿ ಬಾ ಬಡಾವಣೆಯಿಂದ ಕಿಶೋರ್ ಎಂಬುವವರ ಆಟೋ ಹತ್ತಿದ್ದರು. ಇಳಿಯುವಾಗ ತಮ್ಮ ಬ್ಯಾಗ್‌ ಮರೆತು ಹೋಗಿದ್ದರು. ಇದನ್ನು ಕಂಡ ಆಟೋ ಡ್ರೈವರ್‌ ಕಿಶೋರ್‌ ಆ ಬ್ಯಾಗನ್ನು ಹನುಮಂತನಗರ ಪೋಲಿಸ್‌ ಠಾಣೆಗೆ ಬಂದು ಮಾಹಿತಿ ತಿಳಿಸಿದ್ದಾರೆ.

ಬ್ಯಾಗ್‌ ಪರಿಶೀಲಿಸಿದ ಪೊಲೀಸರು ಅದರಲ್ಲಿದ್ದ ಪಾಸ್‌ಫೋರ್ಟ್‌, ವೀಸಾ, ಡೆಬೀಟ್‌ ಕಾರ್ಡ್‌ ಹಾಗೂ 5000 ಹಣ ಮತ್ತು ಅಮೇರಿಕನ್‌ ಡಾಲರ್‌ ಇದ್ದದ್ದನ್ನು ಗಮನಿಸಿ, ವೈದ್ಯೆಯಾಗಿರುವ ಡಾ. ಜ್ಯೋತಿ ಮೆಕೆಪಟ್ಟಿ ಸಂಪರ್ಕಿಸಿ ಅವರ ವಸ್ತುಗಳನ್ನು ಹಿಂದಿರುಗಿಸಿದ್ದಾರೆ.

ಪರ್ಸ್‌ನಲ್ಲಿ ಹಣ ಸ್ವಲ್ಪವೇ ಇದ್ದುದ್ದು, ಆದರೆ ಅದರಲ್ಲಿ, ಪಾಸ್‌ ಪೋರ್ಟ್‌, ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್‌ಗಳಿದ್ದವು. ಆಟೋ ಚಾಲಕ ಕಿಶೋರ ಅವರಿಗೆ ಹೇಗೆ ಧನ್ಯವಾದ ತಿಳಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಮಹಿಳೆ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ಆಟೋ ಡ್ರೈವರ್‌ಗೆ ಸನ್ಮಾನ
ಈ ವೇಳೆ ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ ಆಟೋ ಚಾಲಕ ಕಿಶೋರ್‌ ಅವರನ್ನು ವೈದ್ಯೆ ಜ್ಯೋತಿಯವರ ಸಮ್ಮುಖದಲ್ಲಿ ಡಿಸಿಪಿ ಪಿ ಕೃಷಕಾಂತ್‌, ಎಸಿಪಿ ನಾಗರಾಜ್‌ ಮತ್ತು ಇನ್ಸ್‌ಪೆಕ್ಟರ್ ಸಂದೀಪ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್ ಸುನಿಲ್‌ ಅವರು ಸನ್ಮಾನಿಸಿದರು.

ಇದನ್ನೂ ಓದಿ | Bengaluru Pothole : ಬೈಕ್‌ನಲ್ಲಿ ತೆರಳುತ್ತಿದ್ದಾಗ ಕುಸಿದ ರಸ್ತೆ; ಕಂದಕಕ್ಕೆ ಬಿದ್ದ ಸವಾರ ಆಸ್ಪತ್ರೆಗೆ ದಾಖಲು

Exit mobile version