Site icon Vistara News

Honeybee attack | ಹೊಲದಲ್ಲಿ ಕೆಲಸ ಮಾಡುವಾಗ ದಾಳಿ ನಡೆಸಿದ ಹೆಜ್ಜೇನು; ಇಬ್ಬರು ಆಸ್ಪತ್ರೆಗೆ ದಾಖಲು

Honeybee attack

ಬೆಂಗಳೂರು ಗ್ರಾಮಾಂತರ: ಇಲ್ಲಿನ ನೆಲಮಂಗಲ ತಾಲೂಕಿನ ಹುರುಳಿಹಳ್ಳಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಹೆಜ್ಜೇನು ದಾಳಿ (Honeybee attack) ಮಾಡಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರೈತ ಜಗದೀಶ್ (49), ಬೈಕ್ ಸವಾರ ಹನುಮಂತರಾಯಪ್ಪ (45) ಎಂಬುವವರ ಮೇಲೆ ಹೆಜ್ಜೇನು ದಾಳಿ ಮಾಡಿದೆ.

ರೈತ ಜಗದೀಶ್‌ ಎಂದಿನಂತೆ ಹೊಲಕ್ಕೆ ಬಂದು ಕೃಷಿ ಕಾರ್ಯದಲ್ಲಿ ತೊಡಗಿದ್ದರು. ಹೆಜ್ಜೇನು ಇದ್ದ ಮರದ ಕೆಳಗೆ ಕೃಷಿ ಕಾರ್ಯ ಮಾಡುತ್ತಿದ್ದಾಗ ದಿಢೀರ್‌ ಹೆಜ್ಜೇನುಗಳು ದಾಳಿ ಮಾಡಿವೆ. ಈ ಮಧ್ಯೆ ಹುರುಳುಹಳ್ಳಿ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದ ಹನುಮಂತರಾಯಪ್ಪ ಮೇಲೂ ಜೇನುಹುಳುಗಳು ದಾಳಿ ಮಾಡಿವೆ.

ಕೂಡಲೇ ಹೆಜ್ಜೇನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ವಿಫಲಗೊಂಡಿದ್ದಾರೆ. ಹೆಜ್ಜೇನು ದಾಳಿಯಿಂದ ಗಾಯಗೊಂಡವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | ‌Covid-19 | ಅಂತೆ ಕಂತೆ ಬಿಡಿ, 3ನೇ ಡೋಸ್‌ ಲಸಿಕೆ ಪಡೆಯಿರಿ ಎಂದ ಸುಧಾಕರ್‌: ಒಳಾಂಗಣದಲ್ಲಿ ಮಾಸ್ಕ್‌ ಕಡ್ಡಾಯ

Exit mobile version