Site icon Vistara News

Independence Day | ರಾಜ್ಯದ 18 ಪೊಲೀಸ್​ ಅಧಿಕಾರಿಗಳಿಗೆ ಪದಕ ಪುರಸ್ಕಾರ; ಪಟ್ಟಿ ಇಲ್ಲಿದೆ

New year 2023

ನವ ದೆಹಲಿ: ಈ ಬಾರಿಯ ಸ್ವಾತಂತ್ರ್ಯೋತ್ಸವದ ದಿನ (Independence Day ) ಸಿಎಪಿಎಫ್​​ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ) ಮತ್ತು ವಿವಿಧ ರಾಜ್ಯಗಳ ಪೊಲೀಸ್​ ಪಡೆಯ ಒಟ್ಟು 1082 ಪೊಲೀಸ್​ ಸಿಬ್ಬಂದಿ ಪದಕ ಪುರಸ್ಕಾರ ಪಡೆಯಲಿದ್ದಾರೆ. ಶೌರ್ಯ, ಶ್ಲಾಘನೀಯ ಸೇವೆ, ಕರ್ತವ್ಯಪರತೆ ಸೇರಿ, ವಿವಿಧ ವಿಭಾಗಗಳಡಿ ಪದಕ ನೀಡಿ ಗೌರವಿಸಲಾಗುತ್ತಿದೆ. ಒಟ್ಟಾರೆ 1082 ಪೊಲೀಸ್​ ಸಿಬ್ಬಂದಿಯಲ್ಲಿ 347 ಮಂದಿ ಶೌರ್ಯ ಪದಕ, 87 ಪೊಲೀಸರು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಮತ್ತು 648 ಪೊಲೀಸರು ಪ್ರತಿಭಾನ್ವಿತ ಸೇವಾ ಪದಕಗಳಿಂದ ಪುರಸ್ಕೃತರಾಗಲಿದ್ದಾರೆ.

ಈ ಬಾರಿ ಪೊಲೀಸ್​ ಪದಕ ಪುರಸ್ಕಾರಕ್ಕೆ ಪಾತ್ರರಾದ 1082 ಪೊಲೀಸರಲ್ಲಿ ಕರ್ನಾಟಕದ 18 ಅಧಿಕಾರಿಗಳೂ ಸೇರಿದ್ದು, ಆ ಪಟ್ಟಿ ಇಲ್ಲಿದೆ.
1. ನಂಜಪ್ಪ ಶ್ರೀನಿವಾಸ್, ಎಸ್‌ಪಿ, ಪೊಲೀಸ್​ ತರಬೇತಿ ಶಾಲೆ, ಕಡೂರು
2. ಪ್ರತಾಪ್ ಸಿಂಗ್ ತೋರಟ್, ಡಿವೈಎಸ್‌ಪಿ, ಆಂತರಿಕ ಭದ್ರತಾ ವಿಭಾಗ, ಬಂಟ್ವಾಳ ಮಂಗಳೂರು
3. ಟಿ.ಎಂ. ಶಿವಕುಮಾರ್, ಡಿವೈಎಸ್‌ಪಿ, ಬೆಂಗಳೂರು
4. ಝಕೀರ್ ಇನಾಮ್‌ದಾರ್, ಡಿವೈಎಸ್‌ಪಿ, ಕಲಬುರ್ಗಿ ನಗರ
5. ಶ್ರೀನಿವಾಸ್ ರೆಡ್ಡಿ, ಡಿವೈಎಸ್‌ಪಿ, ಸಿಐಡಿ ಅರಣ್ಯ ಘಟಕ, ಬೆಂಗಳೂರು
6. ನರಸಿಂಹಮೂರ್ತಿ, ಡಿವೈಎಸ್‌ಪಿ, ಸಿಐಡಿ, ಬೆಂಗಳೂರು
7. ಪ್ರಕಾಶ್ ಆರ್, ಡಿವೈಎಸ್‌ಪಿ, ಎಸಿಬಿ, ಬೆಂಗಳೂರು
8. ರಾಘವೇಂದ್ರ ರಾವ್ ಶಿಂಧೆ, ಎಸಿಪಿ, ಎಫ್‌ಪಿಬಿ, ಬೆಂಗಳೂರು
9. ರಾಜಾ ಚಿಕ್ಕಹನುಮೇಗೌಡ, ಇನ್ಸ್‌ಪೆಕ್ಟರ್, ಮೈಸೂರು ನಗರ..
10. ಧ್ರುವರಾಜ್ ಪಾಟೀಲ್, ಸಿಪಿಐ, ವಿಜಯಪುರ ರೈಲ್ವೇ ಪೊಲೀಸ್
11. ಎಸ್​, ಮೊಹಮ್ಮದ್ ಆಲಿ, ಇನ್ಸ್‌ಪೆಕ್ಟರ್, ಎಸಿಬಿ, ಬೆಂಗಳೂರು
12. ರವಿ ಸಣ್ಣೇಗೌಡ, ಸಿಪಿಐ, ಶೃಂಗೇರಿ ಪೊಲೀಸ್ ಠಾಣೆ
13. ಮುಫೀದ್ ಖಾನ್, ಇನ್ಸ್‌ಪೆಕ್ಟರ್, ಕೆಎಸ್‌ಆರ್‌ಪಿ
14. ಮುರುಳಿ, ಸಹಾಯಕ ಆರ್​ಎಸ್​ಐ, ಕೆಎಸ್​ಆರ್​ಪಿ 3ನೇ ಪಡೆ, ಬೆಂಗಳೂರು
15. ರಂಜಿತ್ ಶೆಟ್ಟಿ, ಎಎಸ್​ಐ, ಬೆಂಗಳೂರು
16. ಬಾಲಕೃಷ್ಣ ಶಿಂಧೆ, ಎಎಸ್​ಐ, ಡಿಎಸ್​ಬಿ ಬೆಳಗಾವಿ
17. ಬಸವರಾಜ ಅಂಡೆಮ್ಮನವರ, ಸಹಾಯಕ ಗುಪ್ತದಳ ಅಧಿಕಾರಿ, ಬೆಂಗಳೂರು
18. ಮಹದೇವಯ್ಯ, ಸಹಾಯಕ ಆರ್​ಎಎಸ್​ಐ, ಕೆಎಸ್​​ಆರ್​ಪಿ, 4ನೇ ಪಡೆ, ಬೆಂಗಳೂರು

ಇದನ್ನೂ ಓದಿ: Kantara Movie | ಸ್ವಾತಂತ್ರ್ಯ ದಿನಾಚರಣೆಗೆ ಸಿಹಿ ಸುದ್ದಿ ಹಂಚಿಕೊಂಡ ಕಾಂತಾರ

Exit mobile version