Site icon Vistara News

Hosadurga News: ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ; ರೈತರ ಸಮಸ್ಯೆ ಕೇಳೋರಿಲ್ಲ

Ragi Procurement Centre hosadurga

#image_title

ಹೊಸದುರ್ಗ: ರಾಗಿ ಖರೀದಿ ಕೇಂದ್ರದಲ್ಲಿ (ragi procurement centre) ಸರಿಯಾದ ವ್ಯವಸ್ಥೆಗಳಿಲ್ಲದೆ, ರೈತರು ಪರದಾಡುವಂತಾಗಿದೆ. ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಉಂಟಾಗಿದೆ. ರೈತರ ಗೋಳು ಕೇಳೋರಿಲ್ಲ ಎನ್ನುವಂತಾಗಿದೆ.

ಟ್ರ್ಯಾಕ್ಟರ್‌ಗಳ ಮೂಲಕ ರಾಗಿ ತಂದಿದ್ದರೂ ತೂಕಕ್ಕೆ ಹಾಕಲು ಆಗದೇ ಸಾಲಾಗಿ ನಿಲ್ಲಿಸಲಾಗಿದೆ.

ರಾಗಿ ಮಾರಲು ಬಂದು ನಾಲ್ಕು ದಿನವಾದರೂ ತೂಕ ಹಾಕುವ ಹಾಗಿಲ್ಲ. ಸಂಜೆ 4 ಗಂಟೆಯಾದರೂ ಒಂದು ಚೀಲ ರಾಗಿ ಇಳಿಸಲ್ಲ. ಸೀನಿಯಾರಿಟಿ ಪಾಲನೆ ಮಾಡುತ್ತಿಲ್ಲ. ರೈತರ ಬದಲಾಗಿ ದಲ್ಲಾಳಿಗಳು ರಾಗಿಯನ್ನು ಮೊದಲು ತೂಕ ಮಾಡುತ್ತಾರೆ. ಲಾರಿಗೆ ಲೋಡ್ ಮಾಡಲು ಇಲ್ಲಿ ಹಮಾಲರದ್ದೇ ಪಾರುಪತ್ಯ. ರೈತರ ವಾಹನಗಳಿಗೆ ರಕ್ಷಣೆ ಇಲ್ಲ. ಕುಡಿಯಲು ನೀರಿಲ್ಲ. ಬೀದಿ ದೀಪ ಇಲ್ಲ. ರಾತ್ರಿ ವೇಳೆ ಬ್ಯಾಟರಿ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಿಗಮದ ವ್ಯವಸ್ಥಾಪಕ ಶಿವಕುಮಾರ್ ಅವರು ಕೇಂದ್ರಕ್ಕೆ ಆಗಮಿಸಿದಾಗ ರೈತರು ಮುತ್ತಿಗೆ ಹಾಕಿ ಪ್ರಶ್ನಿಸಿದರು.

ಇದನ್ನೂ ಓದಿ: Weekend With Ramesh: ʻನಾನು ಆಡೋದೇ ಇಲ್ಲ.. ನನ್ನ ಬಾಡಿನೇ ಆಡೋದುʼ ಎಂದ ಪ್ರಭುದೇವ: ಹೇಗಿದೆ ಪ್ರೋಮೊ?

ಆಹಾರ ನಿಗಮದ ವ್ಯವಸ್ಥಾಪಕ ಶಿವಕುಮಾರ್ ಅವರಿಗೆ ಮುತ್ತಿಗೆ ಹಾಕಿರುವ ರೈತರು

“ಸರ್ಕಾರದ ಪ್ರಕಾರ 50 ಕೆ.ಜಿ ರಾಗಿ ತೂಗಬೇಕು. ಆದರೆ 52 ಕೆಜಿ ರಾಗಿ ತೂಗುತ್ತಾರೆ. ತೂಕ ಕಡಿಮೆ ಇದ್ದರೆ ಅನ್ಲೋಡ್ ಮಾಡಲ್ಲ. 50 ಕೆ.ಜಿ ತೂಕ ಚೀಲವನ್ನು ಅನ್ಲೋಡ್ ಮಾಡಿ ಜರಡಿಗೆ ಹಾಕಲು ಹಮಾಲರು ಕಳೆದ ಬಾರಿ 15 ರೂ. ತೆಗೆದುಕೊಳ್ಳುತ್ತಿದ್ದರು. ಈ ಬಾರಿ 40 ರೂ. ಮಾಡಿದ್ದಾರೆ. ಇನ್ನು ಕ್ವಾಲಿಟಿ ಚೆಕ್ ಮಾಡುವವರಿಗೆ 200 ರೂ. ಕೊಡಬೇಕು. ಚೀಟಿ ಕೊಡುವವರಿಗೆ 500 ರೂ. ಕೊಡಬೇಕು. ಒಟ್ಟಾರೆ ಹೆಚ್ಚಿಗೆ ತೂಗಿದ 2 ಕೆಜಿ ರಾಗಿಗೆ ಹಣ ಕೊಡಬೇಕು ಅಥವಾ ರಾಗಿ ವಾಪಸ್ ನೀಡಬೇಕು” ಎಂದು ಕೊಂಡಜ್ಜಿ ಗ್ರಾಮದ ರೈತ ಶಶಿಧರ್ ಹೇಳಿದರು.

ಇದನ್ನೂ ಓದಿ: SC ST Reservation: ಮುಂದುವರಿದ ಬಂಜಾರರ ಆಕ್ರೋಶ; ಶಿವಮೊಗ್ಗ, ದಾವಣಗೆರೆಯಲ್ಲಿ ಪ್ರತಿಭಟನೆ ಬಿಸಿ

ಇದಕ್ಕೆ ಪ್ರತಿಕ್ರಿಯಿಸಿದ ವ್ಯವಸ್ಥಾಪಕ ಶಿವಕುಮಾರ್, “ಹೆಚ್ಚಿಗೆ ತೂಕ ಮಾಡಲು ಹಾಗೂ ಹಣ ತೆಗೆದುಕೊಳ್ಳಲು ನಾವು ಹೇಳಲಿಲ್ಲ. ನಮಗೂ ಹಮಾಲರಿಗೂ ಸಂಬಂಧವಿಲ್ಲ. ಹಾಗೇನಾದರೂ ಹಣ ಸುಲಿಗೆ ಮಾಡಿದ್ದರೆ ಅಂತಹವರನ್ನು ಸಸ್ಪೆಂಡ್ ಮಾಡುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: DCGI : ನಕಲಿ ಔಷಧ ತಯಾರಿಸಿದ 18 ಕಂಪನಿಗಳ ಲೈಸೆನ್ಸ್‌ ರದ್ದು

Exit mobile version