Site icon Vistara News

Hosanagar News: ವಾರಂಟಿ ಮುಗಿದವರಿಂದ ಗ್ಯಾರಂಟಿ ಕಾರ್ಡ್ ವಿತರಣೆ ಹಾಸ್ಯಾಸ್ಪದ: ಗೃಹ ಸಚಿವ ಆರಗ ಜ್ಞಾನೇಂದ್ರ

Home Minister Araga Jnanendra hosanagar

#image_title

ಹೊಸನಗರ: “ಚುನಾವಣೆ ಬಂದಾಗ ಜನರ ಬಳಿ ಹೋಗಿ ಇಲ್ಲ ಸಲ್ಲದ ಭರವಸೆ ನೀಡಿ ಜನರನ್ನು ಮರುಳು ಮಾಡಲು ಕಾಂಗ್ರೆಸ್ ಪ್ರಯತ್ನ ಪಡುತ್ತಿದೆ. ತಮ್ಮ ಪಕ್ಷದ ವಾರಂಟಿ ಮುಗಿದಿದ್ದರೂ ಜನರಿಗೆ ಗ್ಯಾರಂಟಿ ಕಾರ್ಡ್ ( guarantee card) ವಿತರಣೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಮತ್ತಿಮನೆ ವ್ಯಾಪ್ತಿಯ ಬಿಲ್ಸಾಗರ ನೂತನ ಸೇತುವೆಗೆ ಬುಧವಾರ (ಮಾ.22) ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ” ತೀರ್ಥಹಳ್ಳಿ ಕ್ಷೇತ್ರಕ್ಕೆ ಈ ಅವಧಿಯಲ್ಲಿ 3250 ಕೋಟಿ ರೂ. ತಂದು ಅಭಿವೃದ್ಧಿ ನಡೆಸಿದ್ದೇನೆ. ನೂರು ಕೋಟಿ ಹಣವನ್ನು ಮಲೆನಾಡಿನ ಕಾಲುಸಂಕ ನಿರ್ಮಾಣಕ್ಕೆ ತರಲಾಗಿದೆ. ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಲು ನಿರಂತರ ಶ್ರಮ ವಹಿಸುತ್ತಿದ್ದೇನೆ. ಅದರ ಪಲವಾಗಿ ಅನೇಕ ವರ್ಷಗಳ ಬೇಡಿಕೆಯಾದ ಬಿಲ್ಸಾಗರ ಸೇತುವೆಯ ನಿರ್ಮಾಣವಾಗುತ್ತಿದೆ. ಈ ಸೇತುವೆ ನಿರ್ಮಾಣದಿಂದ ಈ ಭಾಗದ ಜನರ ಸಮಸ್ಯೆಗಳು ಬಹುಪಾಲು ಬಗೆಹರಿಯಲಿದೆ. ಹೀಗೆ ಸಾಲು ಸಾಲು ಅಭಿವೃದ್ಧಿ ಕೆಲಸ ಮಾಡುತ್ತಿರುವ ನಮಗೆ ಜನರ ಆಶೀರ್ವಾದ ಬೇಕಿದೆ, ನಿಮ್ಮ ಆಶೀರ್ವಾದ ಇದ್ದರೆ ಶರಾವತಿ ಸಂತ್ರಸ್ತರ ಎಲ್ಲಾ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದರು.

ಇದನ್ನೂ ಓದಿ: Ballary Hospital problem: 11 ವರ್ಷವಾದರೂ ಮುಗಿಯದ ಕಾಮಗಾರಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಯಾವಾಗ?

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮಾತನಾಡಿ. “ಅರಣ್ಯ ಇಲಾಖೆಯ ಕಾನೂನು ಮಲೆನಾಡಿನ ಅಭಿವೃದ್ಧಿಗೆ ತೊಡಕಾಗಿದೆ. ಪರಿಸರ ಉಳಿಸಿ ಅಭಿವೃದ್ಧಿ ನಡೆಸಬೇಕಾದ ಸವಾಲು ನಮ್ಮ ಮುಂದಿದೆ. ಶರಾವತಿ ಸಂತ್ರಸ್ತರ ಹಿತರಕ್ಷಣೆ ನಮ್ಮ ದ್ಯೇಯ” ಎಂದರು.

ಮತ್ತಿಮನೆ ರಾಷ್ಟ್ರೀಯ ಹೆದ್ದಾರಿಯಿಂದ ಕಾರಣಗಿರಿ ತಲುಪಲು ಮಾರ್ಗ ಮಧ್ಯೆ ಬಿಲ್ಸಾಗರದಲ್ಲಿ ಶರಾವತಿ ನದಿಗೆ 25 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಸೇತುವೆ ಪ್ರಮುಖ ಹೋರಾಟಗಾರ ಕೆವಿ ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುಬ್ರಹ್ಮಣ್ಯ ಮತ್ತಿಮನೆ, ಅರಮನೆ ಕೊಪ್ಪ ಹಾಗೂ ರಾಮಚಂದ್ರಾಪುರ ಗ್ರಾಪಂ ನ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: Poonam Pandey: ಆಟೋದಲ್ಲಿ ಸಾಮಾನ್ಯರಂತೆ ಕಾಣಿಸಿಕೊಂಡ ಪೂನಂ ಪಾಂಡೆ: ಗುರುತೇ ಸಿಗುತ್ತಿಲ್ಲ ಅಂದ್ರು ಅಭಿಮಾನಿಗಳು

Exit mobile version