Site icon Vistara News

Hosanagara News: ಹೆಬ್ಬಿಗೆ ನ್ಯಾಯಬೆಲೆ ಅಂಗಡಿಗೆ ವಾರ್ಷಿಕೋತ್ಸವದ ಸಂಭ್ರಮ

Anniversary celebration for Hebbige fair price shop

ಹೊಸನಗರ: ಇಲ್ಲಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯ ಹೆಬ್ಬಿಗೆ ನ್ಯಾಯಬೆಲೆ ಅಂಗಡಿಗೆ (fair price shop) ಒಂದು ವರ್ಷ ಪೂರ್ಣಗೊಂಡಿದ್ದು, ಜವಾಬ್ದಾರಿಯಿಂದ ವ್ಯವಸ್ಥಿತವಾಗಿ ಪಡಿತರ ವಿತರಣಾ ವ್ಯವಸ್ಥೆ ನಡೆಸುತ್ತಿರುವ ಸ್ಪಂದನಾ ಸ್ತ್ರಿ ಶಕ್ತಿ ಸಂಘ ಗಂಟಿಗೆಮನೆ ಪುರದ ಅಧ್ಯಕ್ಷರು ಮತ್ತು ಸದಸ್ಯರನ್ನು ಗುರುವಾರ ಗ್ರಾಮಪಂಚಾಯಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ನ್ಯಾಯಬೆಲೆ ಅಂಗಡಿಯಲ್ಲಿ ಸ್ಪಂದನಾ ಸ್ತ್ರಿ ಶಕ್ತಿ ಸಂಘ ಗಂಟಿಗೆಮನೆ ಪುರದ ಅಧ್ಯಕ್ಷರು ಮತ್ತು ಸದಸ್ಯರಿಗೆ ಶಾಲು ಹೊದಿಸಿ ಅಭಿನಂದನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: Bidar News: ಅಂತಾರಾಜ್ಯ ಅಕ್ರಮ ಸಾಗಾಟ: 15.55 ಲಕ್ಷ ರೂ. ಮೌಲ್ಯದ ಗುಟ್ಕಾ ಜಪ್ತಿ

ಹೆಬ್ಬಿಗೆ ಗ್ರಾಮವು ನಿಟ್ಟೂರು ಗ್ರಾಮಪಂಚಾಯಿತಿ ಕೇಂದ್ರದಿಂದ 15 ಕಿ. ಮೀ ದೂರವಿದ್ದು ಉಚಿತ ಪಡಿತರ ಪಡೆದುಕೊಳ್ಳಲು ದೂರದಿಂದ ನಡೆದುಕೊಂಡು ಬಂದು 200.300 ರೂ ಆಟೋ ಬಾಡಿಗೆ ತೆತ್ತು ಇಡೀ ದಿನ ಕಾದು ಪಡಿತರ ಒಯ್ಯಬೇಕಾಗಿತ್ತು, ಇದರಿಂದ ಹಣ ಮತ್ತು ಸಮಯ ಕೂಡ ವ್ಯರ್ಥವಾಗಿ ಪಡಿತರದಾರರಿಗೆ ತುಂಬಾ ತೊಂದರೆ ಉಂಟಾಗಿತ್ತು. ಇಲ್ಲಿನ ಗ್ರಾಮಪಂಚಾಯಿತಿ ಸದಸ್ಯ ಮತ್ತು ಇತರ ಸ್ಥಳೀಯ ಮುಖಂಡರ ನಿರಂತರ ಪ್ರಯತ್ನದಿಂದ ಹೆಬ್ಬಿಗೆ ಗ್ರಾಮಕ್ಕೆ ನೂತನ ನ್ಯಾಯಬೆಲೆ ಅಂಗಡಿ ಕಳೆದ ವರ್ಷ ಮಂಜೂರಾಗಿ ಗ್ರಾಮದ ಜನರ ಬವಣೆ ದೂರವಾಗಿತ್ತು. ಕೇವಲ 86 ರೇಷನ್ ಕಾರ್ಡ್ ಗೆ ಒಂದು ಹೊಸ ನ್ಯಾಯಬೆಲೆ ಅಂಗಡಿ ಹೊಂದಿದ ರಾಜ್ಯದ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಅಂದಿನ ಶಾಸಕರಾಗಿದ್ದ ಹರತಾಳು ಹಾಲಪ್ಪ ಅವರು, ನ್ಯಾಯಬೆಲೆ ಅಂಗಡಿ ಉದ್ಘಾಟಿಸಿದ್ದರು, ಗ್ರಾಮದ ಸ್ತ್ರೀ ಶಕ್ತಿ ಸಂಘಕ್ಕೆ ಪಡಿತರ ವಿತರಣೆ ಜವಾಬ್ದಾರಿ ನೀಡಲಾಗಿತ್ತು.

ಇದನ್ನೂ ಓದಿ: Ballari News: ಬಳ್ಳಾರಿ ವಿಎಸ್‌ಕೆ ವಿವಿಯ 11ನೇ ಘಟಿಕೋತ್ಸವ; ಇಬ್ಬರು ಸಾಧಕರಿಗೆ ಗೌರವ ಡಾಕ್ಟರೇಟ್

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಪುರುಷೋತ್ತಮ ಶಾನುಭೋಗ್ ಮತ್ತು ರಘುನಾಥ ಮರಿಗದ್ದೆ. ನಾಗಭೂಷಣ ಹೆಬ್ಬಿಗೆ ಹಾಗೂ ಪರಮೇಶ್ವರ ಗಂಟಿಗೆಮನೆ ಮತ್ತು ವೆಂಕಟ ಮೇಣಿ ಗಾಣಿಗಪುರ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version