Site icon Vistara News

Hosanagara News | ಬೆಂಗಳೂರಿನ ಯಾತ್ರಾರ್ಥಿ ಹೊಸನಗರ ಲಾಡ್ಜ್‌ನಲ್ಲಿ ಹೃದಯಾಘಾತದಿಂದ ಸಾವು

heart attack 61 year old man come from Kerala suffered heart attack in BMTC bus and death

ಹೊಸನಗರ: ಬೆಂಗಳೂರಿನ ಆಡುಗೋಡಿಯ ಆನೆಪಾಳ್ಯದ ರಿಯಲ್ ಎಸ್ಟೇಟ್ ಉದ್ಯಮಿ ಮುನಿರಾಜು (48) ಎಂಬುವವರು ಪುಣ್ಯ ಕ್ಷೇತ್ರಗಳ ದರ್ಶನಕ್ಕೆಂದು ಬಂದಿದ್ದ ವೇಳೆ ಇಲ್ಲಿನ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪತ್ನಿ ಭಾರತಿ (44), ಪುತ್ರಿ ಯಶಸ್ವಿನಿ, ಪುತ್ರ ವಿಭಾಶರಾಜ್ ಅವರೊಂದಿಗೆ ಬೆಂಗಳೂರಿನಿಂದ ಜ. 4ರಂದು ಕಾರಿನಲ್ಲಿ ಬೆಳಗ್ಗೆ ಹೊರಟು ಹೊರನಾಡು, ಶೃಂಗೇರಿ ಕ್ಷೇತ್ರದ ದರ್ಶನ ಮಾಡಿ ಸಿಗಂದೂರಿನ ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕಾಗಿ ತೆರಳಲು ಹೊಸನಗರಕ್ಕೆ ಬರುವಾಗ ರಾತ್ರಿ ಆಗಿದ್ದ ಕಾರಣ ಪಟ್ಟಣದ (Hosanagara News) ಅಲಂಕಾರ್ ಲಾಡ್ಜ್‌ನಲ್ಲಿ ತಂಗಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಹಾವೇರಿಯನ್ನು ರಂಗೇರಿಸಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಗುರುವಾರ (ಜ.೫) ಬೆಳಗ್ಗೆ 6.45 ಸಮಯದಲ್ಲಿ ಮುನಿರಾಜು ಅವರು ಎದೆ ಉರಿ ಎಂದು ಪತ್ನಿ ಬಳಿ ಹೇಳಿದ್ದಾರೆ. ಮೊದಲು ಅಸಿಡಿಟಿ ಇರಬಹುದು ಎಂದು ಹೇಳಿದ್ದಾರಾದರೂ ನೋವು ತೀವ್ರವಾಗಿದ್ದರಿಂದ ತಕ್ಷಣ ರೂಂಬಾಯ್‌ ಕರೆಸಿ, ಮುನಿರಾಜು ಅವರನ್ನು ಕೂಡಲೇ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ತೀವ್ರ ಹೃದಯಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ‌. ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಹಚ್ಚೇವು ಕನ್ನಡದ ದೀಪ ಎಂಬ ಇನ್ನೊಂದು ನಾಡಗೀತೆ

Exit mobile version