ಹೊಸನಗರ: ಹೊಸನಗರದ ಪಟ್ಟಣ ಪಂಚಾಯಿತಿಯ 2023-24ನೇ ಸಾಲಿನ ಬಜೆಟ್‌ನಲ್ಲಿ 14,76,683 ರೂ. ಉಳಿತಾಯ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಗುಲಾಬಿ ಮರಿಯಪ್ಪ ತಿಳಿಸಿದರು.
ಹೊಸನಗರದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಬಜೆಟ್ ಸಭೆ ನಡೆಸಿ ಸಭೆಯಲ್ಲಿ ಮಂಡಿಸಿದ ಅವರು, “ಪಟ್ಟಣ ಪಂಚಾಯಿತಿಯ 2023-24 ನೇ ಸಾಲಿನ ಪ್ರಾರಂಭಿಕ ಶುಲ್ಕ 4 ಕೋಟಿ 48 ಲಕ್ಷ ರೂ.ಗಳಿದ್ದು, ವಿವಿಧ ಜಮೆ, ನೀರಿನ ತೆರಿಗೆ, ಮನೆ ಕಂದಾಯ, ಕಟ್ಟಡ ಪರವಾನಗಿ, ಸರ್ಕಾರದ ಅನುದಾನ ಇತ್ಯಾದಿಗಳಿಂದ 14 ಕೋಟಿ 93 ಲಕ್ಷ ರೂ.ಗಳು ಜಮೆಯ ನಿರೀಕ್ಷೆಯಲ್ಲಿದೆ. ಒಟ್ಟು 19 ಕೋಟಿ 41 ಲಕ್ಷ ರೂ.ಗಳಾಗಲಿದ್ದು, ಖರ್ಚಿನ ಬಾಬ್ತು 19 ಕೋಟಿ 27 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಅಖೈರು ಶುಲ್ಕ 14 ಲಕ್ಷ ರೂ.ಗಳು ಉಳಿತಾಯವಾಗಲಿದೆ ಎಂಬುದಾಗಿ ಅಂದಾಜಿಸಲಾಗಿದೆ” ಎಂದು ವಿವರಿಸಿದರು.
ಇದನ್ನೂ ಓದಿ: West Indies Cricket: ವಿಂಡೀಸ್ ಏಕದಿನ ಮತ್ತು ಟಿ20 ಕ್ರಿಕೆಟ್ ತಂಡಕ್ಕೆ ನೂತನ ನಾಯಕರ ನೇಮಕ
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಹಾಲಗದ್ದೆ ಉಮೇಶ್ ಮಾತನಾಡಿ, “ಇಂದಿನ ಬಜೆಟ್‌ನಲ್ಲಿ ನಿಗದಿಪಡಿಸಿದ ಅನುದಾನವನ್ನು ಸಮರ್ಪಕವಾಗಿ ಬಳಸಿ ಕಾರ‍್ಯರೂಪಕ್ಕೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದರು.
ಪಟ್ಟಣ ಪಂಚಾಯಿತಿಯ ಸದಸ್ಯರಾದ ಗುರುರಾಜ್ ಆರ್. ಮಾತನಾಡಿ, “ಇದು ಉತ್ತಮವಾದ ಬಜೆಟ್ ಆಗಿದ್ದು, ಈ ಬಜೆಟ್‌ನಿಂದಾಗಿ ಹೊಸನಗರ ಪಟ್ಟಣ ಪಂಚಾಯಿತಿಯ ನಿವಾಸಿಗಳಿಗೆ ಉತ್ತಮ ರೀತಿಯ ಸವಲತ್ತುಗಳನ್ನು ಒದಗಿಸಲು ಪೂರಕವಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಹೊಸನಗರ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ” ಎಂದರು.
ಇದನ್ನೂ ಓದಿ: Ayodhya Ram Temple: ರಾಮಮಂದಿರ ನಿರ್ಮಾಣಕ್ಕೆ ಮೈಸೂರಿನ ಶಿಲೆಗಳು; ಈಗಾಗಲೇ ಅಯೋಧ್ಯೆ ತಲುಪಿವೆ 2 ಕಲ್ಲುಗಳು
ಈ ಬಜೆಟ್ ಸಭೆಯಲ್ಲಿ ಉಪಾಧ್ಯಕ್ಷೆ ಕೃಷ್ಣವೇಣಿ ಬಿ., ಸ್ಥಾಯಿ ಸಮಿತಿಯ ಅಧ್ಯಕ್ಷ ಸುರೇಂದ್ರ ಹಾಗೂ ಸದಸ್ಯರಾದ ಗುರುರಾಜ್, ಹಾಲಗದ್ದೆ ಉಮೇಶ್, ನಾಗಪ್ಪ, ಗಾಯತ್ರಿ ನಾಗರಾಜ್, ಶ್ರೀಪತಿ ರಾವ್, ಎಂ.ಎನ್. ಸುಧಾಕರ್, ಯಾಸೀರ್, ಅಶ್ವಿನಿ ಕುಮಾರ್, ಸಿಂಥಿಯಾ, ಶಾಹೀನಾ ನಸೀರ್, ಚಂದ್ರಕಲಾ ನಾಗರಾಜ್ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಟಿ., ಮಂಜುನಾಥ್ ಎಂ., ಉಮಾಶಂಕರ್ ಟಿ., ಪ್ರಶಾಂತ್ ಎಂ.ಬಿ., ಪರಶುರಾಮ್ ಎಚ್., ಲಕ್ಷ್ಮಣ ಜಿ., ನೇತ್ರಾವತಿ ಆರ್., ಗಿರೀಶ್, ಆಸ್ಮಾ, ಬಸವರಾಜ್ ಸಿ., ಕುಮಾರಿ, ಚಂದ್ರಪ್ಪ, ಯಶೋಧಮ್ಮ ಹಾಜರಿದ್ದರು.