Site icon Vistara News

KGF Babu : ಕೆಜಿಎಫ್‌ ಬಾಬುಗೆ ಸೇರಿದ ಚಿಕ್ಕಪೇಟೆಯ ಮನೆಗೆ ದುಷ್ಕರ್ಮಿಗಳಿಂದ ಬೆಂಕಿ, ಸೋದರಿ ವಾಸವಾಗಿದ್ದರು

KGF BABU

#image_title

ಬೆಂಗಳೂರು: ಉದ್ಯಮಿ, ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಕಾಂಗ್ರೆಸ್‌ ನಾಯಕ ಕೆ.ಜಿ.ಎಫ್‌. ಬಾಬು (KGF Babu) ಅವರ ಚಿಕ್ಕಪೇಟೆಯಲ್ಲಿರುವ ಮನೆಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಚಿಕ್ಕಪೇಟೆಯ ಬಳಿ ಇರುವ ಕೆ.ಎಸ್‌. ಗಾರ್ಡನ್‌ನಲ್ಲಿ ಈ ಮನೆ ಇದ್ದು ರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಲ್ತಿಗೆ ಬರುವ ಲಾಲ್ ಬಾಗ್ ರಸ್ತೆಯಲ್ಲಿರುವ ಕೆ.ಎಸ್. ಗಾರ್ಡನ್‌ನಲ್ಲಿ ಈ ಮನೆ ಇದ್ದು, ಇದರಲ್ಲಿ ಕೆಜಿಎಫ್‌ ಬಾಬು ಅವರ ಸಹೋದರಿ ವಾಸವಾಗಿದ್ದಾರೆ. ಇದು ಕಟ್ಟಡದ ಮೊದಲ ಮಹಡಿಯಲ್ಲಿರುವ ಮನೆಯಾಗಿದ್ದು, ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗಿದೆ.

ದುಷ್ಕರ್ಮಿಗಳು ಗೇಟು ತೆರೆದು ಮೆಟ್ಟಿಲು ಹತ್ತಿ ಹೋಗಿ ಬೆಂಕಿ ಹಚ್ಚಿದ್ದು, ಮನೆಯ ಹೊರಭಾಗದಲ್ಲಿರುವ ವಸ್ತುಗಳೆಲ್ಲ ಸುಟ್ಟು ಹೋಗಿವೆ. ಬೆಂಕಿಯನ್ನು ಗಮನಿಸಿದ ಯಾರೋ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಬಂದು ಬೆಂಕಿ ನಂದಿಸಿದ್ದಾರೆ. ಆದರೆ, ಬೆಂಕಿ ಹಚ್ಚಿದವರು ಯಾರು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

ಕೆಜಿಎಫ್‌ ಬಾಬು ಅವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಎಲ್ಲ ಸಿದ್ಧತೆಗಳನ್ನು ನಡೆಸಿದ್ದಲ್ಲದೆ, ಸಾಕಷ್ಟು ಹಣ ಕೂಡಾ ಖರ್ಚು ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ನ ಒಳಗೇ ಅವರ ಸ್ಪರ್ಧೆಗೆ ವಿರೋಧವಿದೆ. ಇತ್ತೀಚೆಗೆ ಅವರು ಕಾಂಗ್ರೆಸ್‌ ನಾಯಕರ ಬಗ್ಗೆಯೇ ಕೆಟ್ಟದಾಗಿ ಮಾತನಾಡಿದ್ದರು. ಹೀಗಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಈಗ ಬೆಂಕಿ ಹಚ್ಚಿರುವ ಘಟನೆಗೆ ರಾಜಕೀಯ ಲಿಂಕ್‌ ಇದೆಯೇ ಅಥವಾ ಬೇರೆ ಕಾರಣಕ್ಕಾಗಿ ಬೆಂಕಿ ಹಚ್ಚಿದ್ದಾರೆಯೇ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.

ಇದನ್ನೂ ಓದಿ : KGF Babu | ಕಾಂಗ್ರೆಸ್‌ಗೆ 80 ಸೀಟೂ ಸಿಗೋದಿಲ್ಲ ಎಂದ ಕೆಜಿಎಫ್‌ ಬಾಬು; ಕೈ ನಾಯಕರು, ಕಾರ್ಯಕರ್ತರ ಆಕ್ರೋಶ

Exit mobile version