Site icon Vistara News

ಗೃಹಿಣಿ ನಿಹಾರಿಕಾ ಅನುಮಾನಾಸ್ಪದ ಸಾವು; ಪತಿಯೇ ಕೊಲೆ ಮಾಡಿದ್ದಾಗಿ ಪಾಲಕರ ದೂರು

Wife killed

ಬೆಂಗಳೂರು: ನಗರದಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದು ಆತ್ಮಹತ್ಯೆಯಲ್ಲ, ಅವಳ ಗಂಡನೇ ಹತ್ಯೆ ಮಾಡಿದ್ದಾನೆ ಎಂದು ಯುವತಿಯ ಪಾಲಕರು ಆರೋಪ ಮಾಡಿದ್ದಾರೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಗೃಹಿಣಿ ನಿಹಾರಿಕಾ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಪತಿಯ ಕಿರುಕುಳ ಹೆಚ್ಚಾಗಿದೆ, ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಅಕ್ಕನ ಮನೆಗೆ ಹೋಗಿದ್ದರು. ಎರಡು ದಿನಗಳ ಹಿಂದೆ ಪತಿ ಅಲ್ಲಿಗೆ ತೆರಳಿ, ‘ಇನ್ನು ಮುಂದೆ ಚೆನ್ನಾಗಿಯೇ ನೋಡಿಕೊಳ್ಳುತ್ತೇನೆ’ ಎಂದು ಭರವಸೆ ಕೊಟ್ಟು ನಿಹಾರಿಕಾರನ್ನು ವಾಪಸ್​ ಮನೆಗೆ ಕರೆದುಕೊಂಡು ಬಂದಿದ್ದ. ಆದರೆ ನಿಹಾರಿಕಾ ಶಾಲೆಯ ಕಾರ್ಯಕ್ರಮಕ್ಕೆ ತೆರಳಿದ್ದಕ್ಕೆ ಆಕೆಯೊಂದಿಗೆ ಜಗಳವಾಡಿದ್ದ. ನಿಂದಿಸಿದ್ದ. ಇದೇವೇಳೆ ಮಾತಿಗೆ ಮಾತು ಬೆಳೆದು ಕೊಲೆ ಆಗಿದೆ ಎಂದು ನಿಹಾರಿಕಾ ಪಾಲಕರು ತಿಳಿಸಿದ್ದಾರೆ.

ನೇತ್ರದಾನ
ಅದೇನು ಸಂಕಷ್ಟದಲ್ಲಿ ನಿಹಾರಿಕಾ ಮೃಪಟ್ಟರೋ ಗೊತ್ತಿಲ್ಲ. ಆದರೆ ಸಾವಿನ ನಂತರವೂ ಸ್ಮರಣಾರ್ಹ ಕೆಲಸ ಮಾಡಿದ್ದಾರೆ. ಅವರ ಆಸೆಯಂತೆ ನೇತ್ರದಾನ ಮಾಡಲಾಗಿದ್ದು, ಇಬ್ಬರು ಅಂಧರ ಬಾಳಿಗೆ ಅವರು ಬೆಳಕಾಗಿದ್ದಾರೆ.

ಇದನ್ನೂ ಓದಿ: Dowry Harassment | ಆನೇಕಲ್‌ನಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು; ವರದಕ್ಷಿಣೆ ಕಿರುಕುಳದ ಆರೋಪ

Exit mobile version