Site icon Vistara News

Hoysala Movie Teaser: ಡಾಲಿ ಅಭಿನಯದ ‘ಹೊಯ್ಸಳ’ ಟೀಸರ್‌ ಔಟ್‌, ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಧನಂಜಯ್‌

Hoysala Movie Teaser

#image_title

ಬೆಂಗಳೂರು: ಡಾಲಿ ಧನಂಜಯ್‌ ಅಭಿನಯದ ಬಹು ನಿರೀಕ್ಷಿತ ಹೊಯ್ಸಳ ಸಿನಿಮಾದ ಟೀಸರ್‌ (Hoysala Movie Teaser) ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಿಷ್ಠ ಹಾಗೂ ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಡಾಲಿ ಧನಂಜಯ್‌ ಅವರು ನಟಿಸಿದ್ದು, ಟೀಸರ್‌ ರಿಲೀಸ್‌ ಆದ ಕೆಲವೇ ಗಂಟೆಯಲ್ಲಿ ೧೪ ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

ಡಾಲಿ ಧನಂಜಯ್‌ ಅವರ ೨೫ನೇ ಸಿನಿಮಾ ಇದಾಗಿದ್ದು, ಮಾರ್ಚ್‌ ೩೦ರಿಂದ ಹಿರಿತೆರೆಗೆ ಅಪ್ಪಳಿಸಲಿದೆ. ಹೊಂಬಾಳೆ ಸಂಸ್ಥೆಯ ವಿಜಯ್‌ ಕಿರಂಗಂದೂರ್‌ ಅರ್ಪಿಸುವ, ಕೆ.ಆರ್‌.ಜಿ. ಸ್ಟುಡಿಯೋಸ್‌ ನಿರ್ಮಾಣ ಸಂಸ್ಥೆಯ ಬ್ಯಾನರ್‌ ಅಡಿಯಲ್ಲಿ ಕಾರ್ತಿಕ್‌ ಹಾಗೂ ಯೋಗಿ ಜಿ. ರಾಜ್‌ ಅವರು ಚಿತ್ರ ನಿರ್ಮಿಸಿದ್ದಾರೆ. ಕಾರ್ತಿಕ್‌ ಎಸ್‌. ಚಿತ್ರದ ಛಾಯಾಗ್ರಾಹಕರಾದರೆ, ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನವಿದೆ.

ಧನಂಜಯ್‌ ಅವರು ಗುರುದೇವ್‌ ಪಾತ್ರಧಾರಿಯಾದರೆ, ಗಂಗಾ ಆಗಿ ಅಮೃತಾ ಅಯ್ಯಂಗಾರ್‌ ಬಣ್ಣ ಹಚ್ಚಿದ್ದಾರೆ. ಇನ್ನು ನವೀನ್‌ ಶಂಕರ್‌, ಅವಿನಾಶ್‌ ಸೇರಿ ಹಲವು ನಟರು ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾ ಟೀಸರ್‌ ನೋಡಿದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಕಾರಣ ಸಿನಿಮಾ ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ: Dolly Dhananjay: ಈ ಸಲ ʻಹೊಯ್ಸಳʼ! ಹೊಸ ಅಪ್ಡೇಟ್‌ ಕೊಟ್ಟ ಡಾಲಿ ಧನಂಜಯ್‌

Exit mobile version