Site icon Vistara News

Govt Employees Strike: ಸರ್ಕಾರಿ ನೌಕರರ ಎಲ್ಲ ಬೇಡಿಕೆ ಈಡೇರದೆ ಮುಷ್ಕರ ನಿಲ್ಲಿಸಿದ್ದು ಖಂಡನೀಯ; ನೌಕರರ ಒಕ್ಕೂಟ ಆಕ್ರೋಶ

#image_title

ಬೆಂಗಳೂರು: ಸರ್ಕಾರಿ ನೌಕರರ ಬೇಡಿಕೆಗಳು ಸಂಪೂರ್ಣ ಈಡೇರದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮುಷ್ಕರ (Govt Employees Strike) ಹಿಂಪಡೆದಿರುವುದು ಖಂಡನೀಯ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (AKSGEF) ಅಸಮಾಧಾನ ಹೊರಹಾಕಿದೆ.

ಶೇ. 17 ವೇತನ ಹೆಚ್ಚಳ ಹಾಗೂ ಹಳೆ ಪಿಂಚಣಿ ಯೋಜನೆ (ಒಪಿಎಸ್)‌ ಜಾರಿ ಮಾಡಲು ಸಮಿತಿ ರಚನೆಗೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ನೀಡಿದ ಬೆನ್ನಲ್ಲೇ ಮುಷ್ಕರವನ್ನು ಹಿಂಪಡೆದಿರುವುದು ಎನ್‌ಪಿಎಸ್‌ ನೌಕರರಿಗೆ ಬಗೆದ ದ್ರೋಹವಾಗಿದೆ. ಹೀಗೆ ಮಾಡುವುದರ ಮೂಲಕ ಎನ್‌ಪಿಎಸ್‌ ನೌಕರರನ್ನು ನಡು ನೀರಿನಲ್ಲಿ ಕೈಬಿಟ್ಟಾಂತಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಎಚ್‌.ಎಸ್.‌ ಜೈಕುಮಾರ್‌ ಟೀಕಿಸಿದ್ದಾರೆ.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಶೇ. 25 ರಷ್ಟು ಮಧ್ಯಂತರ ಪರಿಹಾರ ಕೂಡಲೇ ಘೋಷಣೆ ಮಾಡಬೇಕು ಹಾಗೂ ಅಂತಿಮವಾಗಿ ಶೇ. 40 ವೇತನ ಹೆಚ್ಚಿಸಲು ಅಗತ್ಯವಾದ 15000 ಕೋಟಿ ರೂಪಾಯಿ ಅನುದಾನವನ್ನು 2023-24ನೇ ಸಾಲಿನ ಬಜೆಟ್‌ನಲ್ಲಿ ತೆಗೆದಿರಿಸಿ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿತ್ತು. ಆದರೆ, 2022ರ ಜುಲೈ 1 ರಿಂದ ರಿಂದಲೇ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡದೆ, 2023ರ ಏಪ್ರಿಲ್‌ 1ರಿಂದ ಅನ್ವಯ ಆಗುವಂತೆ ಶೇ. 17 ಮಧ್ಯಂತರ ಪರಿಹಾರ ಘೋಷಿಸಿ, ಒಪಿಎಸ್ ಮರುಸ್ಥಾಪನೆ ಮಾಡಲು ಸಮಿತಿ ರಚನೆ ಮಾಡಿ ಆದೇಶಿಸಿರುವುದನ್ನು ಒಕ್ಕೂಟ ಖಂಡಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Govt Employees Strike : ಮುಷ್ಕರದ ಹೆಸರಿನಲ್ಲಿ ಮಹಾ ಮೋಸ; ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಖಂಡನೆ

ನೌಕರರ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರವನ್ನು 2022ರ ಜುಲೈ 1ರಿಂದ ಅನ್ವಯವಾಗುವಂತೆ ಜಾರಿಗೊಳಿಸಬೇಕೆಂದು ಮತ್ತು ಎನ್.ಪಿ.ಎಸ್ ರದ್ದುಗೊಳಿಸಿ ಒಪಿಎಸ್‌ (ನಿಶ್ಚಿತ ಪಿಂಚಣಿ ಯೋಜನೆ ) ಮರುಸ್ಥಾಪಿಸಲು ಆಗ್ರಹಿಸಿ ಮುಂದಿನ ದಿನಗಳಲ್ಲಿ ಗಂಭೀರ ಹೋರಾಟ ರೂಪಿಸಲು ನೌಕರ ಸಂಘಟನೆಗಳು ಸಜ್ಜಾಗಬೇಕು ಎಂದು ಕರೆ ನೀಡಿದ್ದಾರೆ.

Exit mobile version