Site icon Vistara News

Hunger strike: ಕಾಲುವೆ ಒತ್ತುವರಿ ತೆರವಿಗಾಗಿ ಮಂಡಘಟ್ಟ ಗ್ರಾ.ಪಂ ಮುಂದೆ ಮತ್ತೆ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಉಮೇಶ್

Umesh Hunger strike Canal encroachment

ಶಿವಮೊಗ್ಗ: ರಾಜ ಕಾಲುವೆ ಒತ್ತುವರಿ ತೆರವುಗೊಳಿಸುವಂತೆ ತಾಲೂಕಿನ ಮಂಡಘಟ್ಟ ಗ್ರಾಮ ಪಂಚಾಯಿತಿ ಕಚೇರಿ ಎದುರು ಗ್ರಾಮದ ನಿವಾಸಿ ಉಮೇಶ್ ಉಪವಾಸ ಸತ್ಯಾಗ್ರಹ (Hunger strike) ನಡೆಸುತ್ತಿದ್ದಾರೆ.

ರಾಜ ಕಾಲುವೆ ಒತ್ತುವರಿ ಆಗಿರುವುದರಿಂದ ತಮ್ಮ ಮನೆಗೆ ಮಳೆ ನೀರು ನುಗ್ಗುತ್ತಿದೆ. ಇದರಿಂದ ತಮಗೆ ಪ್ರತಿ ವರ್ಷ ಸಂಕಷ್ಟ ಎದುರಾಗುತ್ತಿದೆ. ಈ ಬಗ್ಗೆ ನಾಲ್ಕು ವರ್ಷಗಳಿಂದಲೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಉಮೇಶ್‌ ಅವರು ಕಳೆದ ಡಿ.೨೬ರಂದು ಕೂಡಾ ಸತ್ಯಾಗ್ರಹ ನಡೆಸಿದ್ದರು. ಆಗ ತಾಲೂಕು ಪಂಚಾಯಿತಿ ಸಿಇಒ ಅವರು ಸಮಸ್ಯೆಯನ್ನು ತಿಂಗಳೊಳಗೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಸಿರಲಿಲ್ಲ.

ಇದನ್ನೂ ಓದಿ | Republic Day : ಕರ್ತವ್ಯ ಪಥದಲ್ಲಿ ಕರ್ನಾಟಕದ ʻನಾರಿ ಶಕ್ತಿʼ ಪ್ರದರ್ಶನ; ಗಮನ ಸೆಳೆದ ಸುಗ್ಗಿ ನೃತ್ಯ: ಸಿಎಂ ಬೊಮ್ಮಾಯಿ ಪ್ರಶಂಸೆ

ಪ್ರತಿ ವರ್ಷ ಮಳೆಗಾಲದಲ್ಲಿ ಏನಾಗುವುದೋ ಎಂಬ ಆತಂಕದಲ್ಲೇ ದಿನ ದೂಡಬೇಕಿದೆ. ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದಿಂದಾಗಿ ನಾನು ಮತ್ತು ಕುಟುಂಬದವರು ನೊಂದಿದ್ದೇವೆ. ಅನ್ಯಾಯವನ್ನು ಸರಿಪಡಿಸುವಂತೆ ಡಿಸೆಂಬರ್ 26ರಂದು ಉಪವಾಸ ಸತ್ಯಾಗ್ರಹ ಕುಳಿತಿದ್ದಾಗ ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿ ಅವಿನಾಶ್ ಅವರು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ, ಒಂದು ತಿಂಗಳ ಗಡುವು ಮುಗಿದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಬದಲು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ ಎಂದು ಉಮೇಶ್ ಆರೋಪಿಸಿದರು. ಸಮಸ್ಯೆಯನ್ನು ಸರಿಪಡಿಸುವವರೆಗೂ ಉಪವಾಸ ಧರಣಿ ಕೈಬಿಡುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | Kamal Haasan : ಲೋಕಸಭೆ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ ಯಾಕಾಗಬಾರದು? ಕಮಲ ಹಾಸನ್‌

Exit mobile version