ಗಂಗಾವತಿ: ಚುನಾವಣೆ (Election) ಪೂರ್ವದಲ್ಲಿ ನಾನು ಆಡಿದ ಮಾತು, ಕೊಟ್ಟ ಭರವಸೆಯಂತೆ (Promise) ನಿಮ್ಮ ಕೆಲಸ ಮಾಡದೇ ಹೋದಲ್ಲಿ, ಭರವಸೆಗಳನ್ನು ಈಡೇರಿಸದೇ ಹೋದಲ್ಲಿ ಮುಂದಿನ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಮುಂದೆ ಬರಲ್ಲ ಎಂದು ಶಾಸಕ ಜಿ. ಜನಾರ್ದನರೆಡ್ಡಿ ತಿಳಿಸಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರದ ಹಾಸಗಲ್ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಶಾಸಕರಾದ ಬಳಿಕ ಮೊದಲ ಬಾರಿಗೆ ಗ್ರಾಮಕ್ಕೆ ಬಂದ ಹಿನ್ನಲೆ ಗ್ರಾಮದ ಜನರಿಂದ ಸನ್ಮಾನ ಸ್ವೀಕರಿಸಿ, ಬಳಿಕ ಮಾತನಾಡಿದರು.
ಇದನ್ನೂ ಓದಿ: South Indian Actor: ಸೌತ್ ಇಂಡಸ್ಟ್ರಿಯ ಈ ಶ್ರೀಮಂತ ನಟ 3 ಸಾವಿರ ಕೋಟಿ ಒಡೆಯ! ರಜನಿ, ಕಮಲ್ ಅಲ್ವೇ ಅಲ್ಲ!
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತೇನೆ. ಒಂದೊಮ್ಮೆ ಈಡೇರಿಸದೇ ಹೋದಲ್ಲಿ ಮುಂದಿನ ಚುನಾವಣೆಯಲ್ಲಿ ಮತ ಕೇಳಲು ನಿಮ್ಮ ಊರಿಗೆ ಬರುವುದಿಲ್ಲ ಎಂದರು.
ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ. ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಕಲ ಅಭಿವೃದ್ಧಿಯನ್ನು ಮಾಡುತ್ತೇನೆ. ಅಲ್ಲದೇ ಹಾಸಗಲ್ ಗ್ರಾಮ ಪಂಚಾಯತ್‌ಗೆ ಒಂದು ಕೋಟಿ ರೂಪಾಯಿ ಮೊತ್ತದ ಅನುದಾನ ತಂದು ಕೊಡುತ್ತೇನೆ.
ಇದನ್ನೂ ಓದಿ: Ind vs wi : ಮೂರನೇ ಪಂದ್ಯದ ಗೆಲುವಿಗೆ ಭಾರತ ತಂಡದ ರಣ ತಂತ್ರ ಏನು? ಇಲ್ಲಿದೆ ಮಾಹಿತಿ
ಪ್ರತಿ ಪಂಚಾಯಿತಿಗೂ ತಲಾ ಒಂದು ಕೋಟಿ ಮೊತ್ತದ ಅನುದಾನ ತರುತ್ತೇನೆ. ಅಭಿವೃದ್ಧಿಗೆ ಈ ಅನುದಾನ ಸಾಲದೇ ಹೋದಲ್ಲಿ ತಾಲೂಕು, ಜಿಲ್ಲಾ ಪಂಚಾಯತ್, ರಾಜ್ಯ ಮತ್ತು ಕೇಂದ್ರ ಸರ್ಕಾರದ ಜತೆಗೆ ಶಾಸಕರ ಅನುದಾನವನ್ನು ಬಳಸಿ ಗ್ರಾಮಗಳ ಅಭಿವೃದ್ಧಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.