Site icon Vistara News

Karnataka Election 2023:‌ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ; ಎಚ್‌ಡಿಕೆ ಸಿಎಂ ಆಗಲು ನನ್ನನ್ನು ಬೆಂಬಲಿಸಿ: ರವೀಂದ್ರಪ್ಪ

JDS candidate Ravindrappa Hiriyur

#image_title

ಹಿರಿಯೂರು: ಜೆಡಿಎಸ್ ಬಡವರ ಪರವಾಗಿ ಇರುವ ಪಕ್ಷ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕ್ಷೇತ್ರದ ಅಭ್ಯರ್ಥಿಯಾಗಿರುವ ನನ್ನನ್ನು ಬೆಂಬಲಿಸುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಲ ನೀಡಿ ಎಂದು ನಿವೃತ್ತ ಮುಖ್ಯ ಎಂಜಿನಿಯರ್ ರವೀಂದ್ರಪ್ಪ ಹೇಳಿದರು.

ನಗರದ ನಂಜಯ್ಯನ ಕೊಟ್ಟಿಗೆ ಸೇರಿದಂತೆ ವಿವಿಧ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, “ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ ನೀಡುತ್ತದೆ. ಕ್ಷೇತ್ರದಲ್ಲಿ ಮೂರು ಬಾರಿ ಪಕ್ಷಕ್ಕೆ ಶಿಕ್ಷೆ ವಿಧಿಸಿದ್ದೀರಿ, ನಾಲ್ಕನೇ ಬಾರಿಗೆ ನಿಮ್ಮ ಮುಂದೆ ಬಂದಿದ್ದೇವೆ. ಅವಕಾಶ ಮಾಡಿಕೊಡಿ” ಎಂದು ತಿಳಿಸಿದರು.

ಇದನ್ನೂ ಓದಿ: IPL 2023: ಐಪಿಎಲ್​ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ

“ನಾನು ಇಲ್ಲಿನ ಸ್ಥಳೀಯ ಅಭ್ಯರ್ಥಿ, ದಿನ ಬೆಳಗಾದರೆ ನಿಮ್ಮ ಕೈಗೆ ಸಿಗುತ್ತೇನೆ. ಚಳ್ಳಕೆರೆ ಹಾಗೂ ಬೆಂಗಳೂರಿಗೆ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಈ ಕ್ಷೇತ್ರದ ಮಣ್ಣಿನ ಮಗನಿಗೆ ಜನ ಸೇವೆ ಮಾಡಲು ಅವಕಾಶ ನೀಡಿ” ಎಂದರು.

“ಹಿಂದೆ ಡಿ. ಮಂಜುನಾಥ್ ಅವರನ್ನು ಗೆಲ್ಲಿಸಿದ್ದು ಬಿಟ್ಟರೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ. ಮೂರು ಬಾರಿ ಪಕ್ಷವನ್ನು ತಿರಸ್ಕರಿಸಲಾಗಿದೆ. ಈ ಚುನಾವಣೆಯಲ್ಲಿ ಒಂದು ಅವಕಾಶ ನೀಡಿ” ಎಂದರು.

“ಜೆಡಿಎಸ್ ಅಭಿವೃದ್ಧಿಯ ಪರವಾಗಿರುವ ಪಕ್ಷವಾಗಿದೆ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡಲಾಗುತ್ತದೆ. ವಯಸ್ಸದಾವರಿಗೆ ವೃದ್ಧಾಪ್ಯ ವೇತನ ಹೆಚ್ಚಳ, ರೈತರ ಮಕ್ಕಳನ್ನು ಮದುವೆ ಆದವರಿಗೆ ಎರಡು ಲಕ್ಷ ಹಣವನ್ನು ಖಾತೆಗೆ ನೀಡಲಾಗುವುದು. ಇಂತಹ ಹತ್ತು ಹಲವಾರು ಯೋಜನೆಗಳು ಜಾರಿಗೆ ಬರಲಿವೆ” ಎಂದು ತಿಳಿಸಿದರು.

“ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳು ಪಂಚೇಂದ್ರಿಯಗಳು ಇದ್ದಂತೆ. ಈ ಯೋಜನೆಗಳಲ್ಲಿ ರೈತ ಶಕ್ತಿ ಉದ್ಯೋಗ, ಸ್ತ್ರೀ ಸಬಲೀಕರಣ, ಶಿಕ್ಷಣ, ಆರೋಗ್ಯ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ” ಎಂದರು.

ಇದನ್ನೂ ಓದಿ: Bypolls 2023: ಪಂಜಾಬ್, ಯುಪಿ, ಮೇಘಾಲಯ, ಒಡಿಶಾ ರಾಜ್ಯದ 5 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆ

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಜೆಜಿ ಹಳ್ಳಿ ಮಂಜುನಾಥ್, ರಾಮಮೂರ್ತಿ, ದಿನೇಶ್ ಸೇರಿದಂತೆ ಇತರರು ಇದ್ದರು.

Exit mobile version