Site icon Vistara News

Illicit liquor : ಅಕ್ರಮ ಮದ್ಯ ಮಾರಾಟಗಾರನಿಗೆ ಮಹಿಳಾ ದಿನದಂದು ಪೊರಕೆ ಸೇವೆ ಮಾಡಿದ ಮಹಿಳೆಯರು

madya maratagaranige thalitha

#image_title

ರಿಪ್ಪನ್‌ ಪೇಟೆ: ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಅಕ್ರಮ ಮದ್ಯ (Illicit liquor) ಮಾರಾಟಗಾರನಿಗೆ ಮಹಿಳೆಯರಿಂದ ಪೊರಕೆ ಸೇವೆ ಮಾಡಲಾಗಿದೆ.

ಬಸವಾಪುರ ಗ್ರಾಮದ ಅಕ್ರಮ ಮದ್ಯ ಮಾರಾಟಗಾರ ನಂದ್ಯಪ್ಪ ಡಿ.ಪಿ ಎಂಬುವವನಿಗೆ ಮಹಿಳೆಯರು ಪೊರಕೆ ಸೇವೆ ಮಾಡಿದ ವಿಡಿಯೊ ವೈರಲ್ ಆಗಿದ್ದು ಅಂತರರಾಷ್ಟ್ರೀಯ ಮಹಿಳಾ ದಿನವಾದ ಬುಧವಾರ ಮಹಿಳೆಯರು ತಮ್ಮ ನಾರಿಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು, ಪುರುಷರ ಕುಡುಕತನದಿಂದ ಮಹಿಳೆಯರು ಕಂಗಾಲಾಗಿದ್ದಾರೆ.

ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಮ್ಮ ಗಂಡಂದಿರ ಕಾಟ ತಾಳಲಾರದೆ ಅಕ್ರಮ ಮದ್ಯ ಮಾರಾಟಗಾರನಿಗೆ ಬೆಳಂಬೆಳಗ್ಗೆ ಪೊರಕೆ ಸೇವೆ ಮಾಡಿದ್ದಾರೆ. ಅಬಕಾರಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ದಾಳಿಗೆ ಬಂದ ಹಾಗೆ ಮಾಡಿ ಅಂಗಡಿಯವರ ಬಳಿ ಲಂಚ ಪಡೆದು ಹೋಗುತ್ತಿದ್ದರು.

ಇದರಿಂದ ರೊಚ್ಚಿಗೆದ್ದ ಮಹಿಳೆಯರು ಇಂದು ಮದ್ಯ ಮಾರಾಟಗಾರನಿಗೆ ಪೊರಕೆ ಸೇವೆ ಮಾಡಿದ್ದಾರೆ. ಮುಂದೊಂದು ದಿನ ಅಬಕಾರಿ ಅಧಿಕಾರಿಗಳಿಗೂ ಇದೇ ಗತಿಯಾಗುವುದೆಂದು ಬಸವಾಪುರ ಗ್ರಾಮದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : No Liquor shop: ಮಸೀದಿ ಮುಂಭಾಗ ಬೇಡ ಮದ್ಯದಂಗಡಿ; ರಿಪ್ಪನ್ ಪೇಟೆಯಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ

Exit mobile version