Site icon Vistara News

ಮಂಗಳೂರು-ಮುಂಬಯಿ ಮಾರ್ಗದಲ್ಲಿ ಇನ್ನೊಂದು ಹೊಸ ವಿಮಾನ ಸಂಚಾರ ಪ್ರಾರಂಭ; ವೇಳಾಪಟ್ಟಿ ಹೀಗಿದೆ

Flight Mangalore-Mumbai

#image_title

ಮಂಗಳೂರು: ಜೂನ್​ 10ರಿಂದ ಮಂಗಳೂರು-ಮುಂಬಯಿ ಮಾರ್ಗದಲ್ಲಿ (Mumbai-Mangalore Route) ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಯ (Air India) ಇನ್ನೊಂದು ವಿಮಾನ ಸಂಚಾರ ಪ್ರಾರಂಭವಾಗಿದೆ. ಇದರಿಂದಾಗಿ ಮಂಗಳೂರು-ಮುಂಬಯಿ ವಾಯುಯಾನಕ್ಕೆ ಇನ್ನಷ್ಟು ಬಲ ಸಿಕ್ಕಂತಾಗಿದೆ. ಇತ್ತೀಚೆಗೆ ಅಂದರೆ ಮೇ 22ರಂದು ಇಂಡಿಗೋ ಏರ್​ಲೈನ್ಸ್​​ ಈ ಮಂಗಳೂರು-ಮುಂಬಯಿ ಮಾರ್ಗದಲ್ಲಿ ಮೂರನೇ ವಿಮಾನ ಸಂಚಾರವನ್ನು ಪ್ರಾರಂಭಿಸಿದೆ. ಅದರ ಬೆನ್ನಲ್ಲೇ ಏರ್​ ಇಂಡಿಯಾ ಕೂಡ ಇಲ್ಲಿ ತನ್ನ ವಿಮಾನ ಸಂಪರ್ಕವನ್ನು ಇನ್ನಷ್ಟು ಸದೃಢಗೊಳಿಸಿದೆ.

ದೇಶದ ಎರಡು ಖ್ಯಾತ ವಿಮಾನಯಾನ ಸಂಸ್ಥೆಗಳಾದ ಏರ್​ ಇಂಡಿಯಾ ಮತ್ತು ಇಂಡಿಗೊ ಏರ್​ಲೈನ್ಸ್​​ಗಳ ಒಟ್ಟು ಐದು ವಿಮಾನಗಳು ಈಗ ಮಂಗಳೂರು-ಮುಂಬಯಿ ವಾಯುಮಾರ್ಗದಲ್ಲಿ ಸಂಚರಿಸುತ್ತಿವೆ. ಇದೀಗ ಹೊಸದಾಗಿ ಪ್ರಾರಂಭವಾದ ಏರ್​ ಇಂಡಿಯಾ ವಿಮಾನ (ಎಐ 1679) ಮುಂಬಯಿಯಿಂದ ಮಧ್ಯಾಹ್ನ 12.40ಕ್ಕೆ ಹೊರಟು, ಮಧ್ಯಾಹ್ನ 2.10ಕ್ಕೆಲ್ಲ ಮಂಗಳೂರು ತಲುಪುತ್ತದೆ. ಹಾಗೇ, ಇದೇ ವಿಮಾನ (ಎಐ 1680)ಮಂಗಳೂರನ್ನು ಮಧ್ಯಾಹ್ನ 2.50ಕ್ಕೆ ಬಿಟ್ಟು, ಮಧ್ಯಾಹ್ನ 4.35ರ ಹೊತ್ತಿಗೆ ಮುಂಬಯಿ ತಲುಪುತ್ತದೆ.

ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್‌ ವಿಸ್ತರಣೆಗೆ 273 ಕೋಟಿ ರೂ.; ಕೇಂದ್ರಕ್ಕೆ ಪ್ರಲ್ಹಾದ್‌ ಜೋಶಿ ಧನ್ಯವಾದ

ಇಷ್ಟು ದಿನ ಏರ್​ ಇಂಡಿಯಾದ ವಿಮಾನ (ಎಐ 679) ಮುಂಬಯಿಯಿಂದ ಮುಂಜಾನೆ 5.45ಕ್ಕೆ ಹೊರಟು, ಮುಂಜಾನೆ 7.20ಕ್ಕೆ ಮಂಗಳೂರು ತಲುಪುತ್ತಿತ್ತು. ಹಾಗೇ, ಇದೇ ವಿಮಾನ (ಎಐ 680) ಮಂಗಳೂರಿನಿಂದ ಮುಂಜಾನೆ 7.55ಕ್ಕೆ ಹೊರಟು, ಬೆಳಗ್ಗೆ 9.35ಕ್ಕೆ ಮುಂಬಯಿಗೆ ತಲುಪುತ್ತಿತ್ತು. ಮಂಗಳೂರು-ಮುಂಬಯಿ ವಾಯುಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. 2022ರಲ್ಲಿ ಈ ಮಾರ್ಗದಲ್ಲಿ ಸುಮಾರು 4.90 ಲಕ್ಷ ಮಂದಿ ಪ್ರಯಾಣಿಸಿದ್ದಾಗಿ ವರದಿಯಾಗಿದ್ದು, ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಇದೂ ಸೇರ್ಪಡೆಯಾಗಿದೆ. ಹೀಗಾಗಿ ವಿಮಾನಗಳ ಸಂಖ್ಯೆ ಹೆಚ್ಚಿಸುವ ಅನಿವಾರ್ಯತೆಯೂ ಇದೆ.

Exit mobile version