Site icon Vistara News

Tumkur News: ರಾಜ್ಯ ಸರ್ಕಾರದಿಂದ ಮತ್ತಷ್ಟು ಜನಪ್ರಿಯ ಯೋಜನೆಗಳ ಜಾರಿ: ಸಚಿವ ಡಾ. ಜಿ. ಪರಮೇಶ್ವರ್

KSRTC regular and express express bus stand inauguration by Minister Dr. G. Parameshwar at Gubbi

ಗುಬ್ಬಿ: ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ (State Congress Government) ಐದು ಗ್ಯಾರಂಟಿ ಯೋಜನೆಗಳ (Five Guarantee Schemes) ಜತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪ್ರಿಯ ಯೋಜನೆಗಳನ್ನು ನೀಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ತಾಲೂಕಿನ ಎಚ್ಎಎಲ್ ಗೇಟ್ 1 ಕುಂದರನಹಳ್ಳಿ ಗ್ರಾಮದಲ್ಲಿ ಬುಧವಾರ ಕೆಎಸ್ಆರ್‌ಟಿಸಿ ಸಾಮಾನ್ಯ ಮತ್ತು ವೇಗದೂತ ಎಕ್ಸ್‌ಪ್ರೆಸ್ ನಿಲುಗಡೆ ಹಾಗೂ ಬಿದರೆ ಹಳ್ಳ ಕಾವಲ್‌ನ ಬಾಬು ಜಗಜೀವನ್ ರಾಮ್ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಈಗ ನೀಡಿರುವ ಜನಪ್ರಿಯ ಯೋಜನೆಗಳನ್ನು ವಿರೋಧ ಪಕ್ಷದವರು ಟೀಕೆ ಮಾಡಿದ್ದರು, ಆದರೆ ಬಿಜೆಪಿ ಸರ್ಕಾರವೇ ಇಂತಹ ಯೋಜನೆಯನ್ನು ಬೇರೆ ರಾಜ್ಯಗಳಲ್ಲಿ ಮಾಡಲು ಮುಂದಾಗಿದ್ದಾರೆ ಎಂದ ಅವರು, ರೈತರ ಹಿತವನ್ನು ಕಾಪಾಡಲು ನಮ್ಮ ಸರ್ಕಾರವು ಹಾಲಿಗೆ ಬೆಂಬಲ ಬೆಲೆ ಸೇರಿದಂತೆ ರಾಜ್ಯದ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಮುಂದಿನ ದಿನದಲ್ಲೂ ನೀಡುವ ಮೂಲಕ ಉತ್ತಮ ಆಡಳಿತವನ್ನು ನೀಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: World Cup 2023 : ವಿಶ್ವ ಕಪ್​ಗೆ ಭಾರತ ತಂಡದ ಜೆರ್ಸಿ ಅನಾವರಣ; ಏನೇನು ಬದಲಾವಣೆಗಳಿವೆ​​?

ನಾವು ನುಡಿದಂತೆ ನಡೆಯುತ್ತಿದ್ದೇವೆ, ಮುಂದೆಯೂ ನಡೆಯುತ್ತೇವೆ ಎಂದ ಅವರು, ಈ ಭಾಗದಲ್ಲಿ ಎಚ್ಎಎಲ್ ಘಟಕ ಇರುವುದರಿಂದ ಈ ಭಾಗದ ಡಿಪ್ಲೊಮಾ, ಐಟಿಐ ಮಾಡಿದವರಿಗೆ ಮೊದಲ ಅದ್ಯತೆ ಮೇಲೆ ಕೆಲಸ ನೀಡುವಂತೆ ಒತ್ತಾಯ ಮಾಡುತ್ತೇವೆ ಎಂದರು.

ಗುಬ್ಬಿ ಪೊಲೀಸ್ ವೃತ್ತ ಕಚೇರಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಇನ್ನೂ 15 ದಿನದಲ್ಲಿ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

ಬಳಿಕ ಶಾಸಕ ಎಸ್.ಆರ್ ಶ್ರೀನಿವಾಸ್ ಮಾತನಾಡಿದರು.

ಇದನ್ನೂ ಓದಿ: Ganesh Chaturthi: ನಾಳೆ ಗಣೇಶ ಮೂರ್ತಿಗಳ ವಿಸರ್ಜನೆ; ‌ಬೆಂಗಳೂರಿನ ಹಲವೆಡೆ ರಸ್ತೆ ಮಾರ್ಗ ಬದಲಾವಣೆ

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳಿದ ಹಾಲಪ್ಪ, ಸದಸ್ಯ ಕೆ.ಆರ್. ತಾತಯ್ಯ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರಾನಂದ, ಜಿಲ್ಲಾಧಿಕಾರಿ ಕೆ.ಎಸ್. ಶ್ರೀನಿವಾಸ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಕಾಂಗ್ರೆಸ್ ಜಿಲ್ಲಾ ಮಾಜಿ ಅಧ್ಯಕ್ಷ ರಾಮಕೃಷ್ಣ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಗಂಗಾಧರ್, ಉಪಾಧ್ಯಕ್ಷೆ ಅನುಸೂಯಾ ದೇವಿ ಸಿದ್ದರಾಮೇಶ್, ಮುಖಂಡರಾದ ಕುಂದರನಹಳ್ಳಿ ರಮೇಶ್, ಪಣಿವೇಂದ್ರ ಮುನಿ, ರಾಜಣ್ಣ, ಪುಟ್ಟರಾಜು, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡರುಗಳು ಗ್ರಾಮಸ್ಥರು ಹಾಜರಿದ್ದರು.

Exit mobile version