Site icon Vistara News

Shivamogga News: ಕಥೆ, ಕವನ, ಕಾದಂಬರಿಗಳ ಮೂಲಕ ವೈದ್ಯ ಸಾಹಿತ್ಯವನ್ನು ತಲುಪಿಸಿ: ಡಾ.ಶ್ರೀಧರ್

Inauguration of the 4th Kannada Medical Writers State Conference in Shivamogga

ಶಿವಮೊಗ್ಗ: ರೋಗಿಗಳ ಅನುಭವ (Patient Experience) ಕಥನಗಳನ್ನು ಬರೆಸುವುದು, ವೈದ್ಯರು (Docters) ತಮ್ಮ ವೃತ್ತಿ ಅನುಭವಗಳನ್ನು ಕಥೆ (Story), ಕವನ ಹಾಗೂ ಕಾದಂಬರಿಗಳ ಮೂಲಕ ವೈದ್ಯ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು 4ನೇ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆ.ಆರ್. ಶ್ರೀಧರ್ ಕರೆ ನೀಡಿದರು.

ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಐಎಂಎ ಕರ್ನಾಟಕ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ, ಶಿವಮೊಗ್ಗ ಭಾರತೀಯ ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ 4ನೇ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನದ ಡಾ.ಕೆ.ಎ. ಅಶೋಕ್ ಪೈ ವೇದಿಕೆಯಲ್ಲಿ ಅವರು ಮಾತನಾಡಿದರು.

ವೈದ್ಯ ಬರಹಗಾರರಿಗೆ ವೈದ್ಯ ಸಾಹಿತ್ಯ ಹೇಗಿರಬೇಕು. ಅದು ಯಾವ ಅಂಶಗಳನ್ನು ಹೊಂದಿರಬೇಕು. ಲೇಖನ ಸಾಮಾನ್ಯ ಓದುಗರ ಮನ ಮುಟ್ಟುವಂತಿರಲು ಬರವಣಿಗೆಯ ಶೈಲಿ ಹೇಗಿರಬೇಕು ಎಂಬುದನ್ನು ತಿಳಿಸಲು ವೈದ್ಯ ಸಾಹಿತ್ಯ ಶಿಬಿರಗಳನ್ನು ರಾಜ್ಯದ ನಾನಾ ಕಡೆಗಳಲ್ಲಿ ಹಮ್ಮಿಕೊಳ್ಳಬೇಕು ಎಂದರು.

ಇದನ್ನೂ ಓದಿ: Aditya- L1 : ಆದಿತ್ಯ ಎಲ್​1 ಮಿಷನ್​ನ ಉಡಾವಣೆಯ ಮೊದಲ ಚಿತ್ರಗಳು ಹೀಗಿವೆ

ಪ್ರಖ್ಯಾತ ಚಿಂತಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿ, ಇಂಗ್ಲಿಷ್ ಭಾಷೆಗೆ ಮಾತ್ರ ಸೀಮಿತ ಎಂಬಂತಾಗಿರುವ ವೈದ್ಯ ಸಾಹಿತ್ಯವನ್ನು ಕನ್ನಡದ ಮೂಲಕ ಜಗದಗಲ ಪಸರಿಸುವ ಕಾರ್ಯವನ್ನು ವೈದ್ಯ ಸಾಹಿತಿಗಳು ಮಾಡಬೇಕು ಎಂದರು.

ಖ್ಯಾತ ಸ್ತ್ರಿರೋಗ ಹಾಗೂ ಪ್ರಸೂತಿ ತಜ್ಞೆ ಡಾ.ವೀಣಾ ಭಟ್ ಅವರು ರಾಜ್ಯ ಕನ್ನಡ ವೈದ್ಯ ಬರಹಗಾರರ 4ನೇ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಮಾತನಾಡಿದರು.

ಹಿರಿಯ ಮನೋವೈದ್ಯ, ವೈದ್ಯ ಸಾಹಿತಿ ಡಾ.ಸಿ.ಆರ್. ಚಂದ್ರಶೇಖರ್ ಮಾತನಾಡಿ, ಡಾ.ಎ.ಎಲ್. ಶಿವಪ್ಪ ಅವರು 60 ಸಾವಿರ ಪದಗಳನ್ನು ಕನ್ನಡ ವೈದ್ಯ ಸಾಹಿತ್ಯಕ್ಕೆ ಸೃಷ್ಟಿ ಮಾಡಿದ್ದಾರೆ. ಹಂಪಿ ವಿಶ್ವವಿದ್ಯಾಲಯ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಜತೆಗೂಡಿ ವೈದ್ಯ ಸಾಹಿತ್ಯಕ್ಕಾಗಿ ಕಾರ್ಯಗಳು ನಡೆಯುತ್ತಿದ್ದು, ಇದು ನಿರಂತರವಾಗಿ ನಡೆಯಬೇಕು ಎಂದರು.

ಅದ್ಧೂರಿ ಮೆರವಣಿಗೆ

ಸಮ್ಮೇಳನ ಉದ್ಘಾಟನೆಗೂ ಮುನ್ನ ಸರ್ವಾಧ್ಯಕ್ಷ ಡಾ.ಕೆ.ಆರ್. ಶ್ರೀಧರ್ ಹಾಗೂ ಉದ್ಘಾಟನಾಧ್ಯಕ್ಷ ಡಾ.ರಾಜೇಂದ್ರ ಚೆನ್ನಿ ಅವರನ್ನು ಕಾಲೇಜಿನ ಆಡಳಿತ ಕಚೇರಿಯಿಂದ ಡಾ.ಅಶೋಕ್ ಪೈ ವೇದಿಕೆವರೆಗೂ ಅದ್ಧೂರಿ ಮೆರವಣಿಗೆಯ ಮೂಲಕ ಕರೆತರಲಾಯಿತು.

ಮೆರವಣಿಗೆಗೆ ಡೊಳ್ಳು ಕುಣಿತ, ಜಾನಪದ ಕಲಾ ಪ್ರಕಾರಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವು ತಂಡಗಳು ಮೆರುಗು ನೀಡಿದವು.

ಇದನ್ನೂ ಓದಿ: International Year of Millets : ಸಿರಿಧಾನ್ಯಗಳ ಬಗ್ಗೆ ಭಾರತಕ್ಕೆ ಏಕೆ ಇಷ್ಟು ಆಸಕ್ತಿ?

ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಬಿ. ಲಕ್ಕೋಳ, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ, ಕನ್ನಡ ವೈದ್ಯ ಬರಹಗಾರರ ಸಮಿತಿ ಅಧ್ಯಕ್ಷ ಡಾ.ಶಿವಾನಂದ ಕುಬಸದ್, ಕಾರ್ಯಾಧ್ಯಕ್ಷ ಡಾ.ಬಿ.ಪಿ. ಕರುಣಾಕರ್, ಕಾರ್ಯದರ್ಶಿ ಡಾ.ಕೆ.ಎನ್. ಗುರುದತ್, ಐಎಂಎ ಶಿವಮೊಗ್ಗ ಅಧ್ಯಕ್ಷ ಡಾ.ಎಂ.ಎಸ್. ಅರುಣ್, ಕಾರ್ಯದರ್ಶಿ ಡಾ.ರಕ್ಷಾ ರಾವ್, ಸಂಘಟನಾ ಕಾರ್ಯದರ್ಶಿಗಳಾದ ಡಾ.ವಿನಯ ಶ್ರೀನಿವಾಸ್ ಹಾಗೂ ಡಾ.ಕೆ.ಎಸ್. ಶುಭ್ರತಾ ಸೇರಿದಂತೆ ಹಲವರು ಇದ್ದರು.

Exit mobile version